ಕ್ವಾರಂಟೈನ್‌ ಬಿಟ್ಟು ಹೊರಗೆ ತಿರುಗಾಡಿದರೆ ಕ್ರಿಮಿನಲ್‌ ಕೇಸ್‌: ಉಡುಪಿ ಡಿಸಿ

Kannadaprabha News   | Asianet News
Published : May 19, 2020, 09:08 AM IST
ಕ್ವಾರಂಟೈನ್‌ ಬಿಟ್ಟು ಹೊರಗೆ ತಿರುಗಾಡಿದರೆ ಕ್ರಿಮಿನಲ್‌ ಕೇಸ್‌: ಉಡುಪಿ ಡಿಸಿ

ಸಾರಾಂಶ

ಕ್ವಾರಂಟೈನ್‌ ಕೇಂದ್ರವನ್ನು ಬಿಟ್ಟು ಹೊರಗೆ ಬಂದು ಓಡಾಡುವರ ಮೇಲೆ ನಿರ್ದಾಕ್ಷಿಣವಾಗಿ ಸೆಕ್ಷನ್‌ 188 ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

ಉಡುಪಿ(ಮೇ 19): ಕ್ವಾರಂಟೈನ್‌ ಕೇಂದ್ರವನ್ನು ಬಿಟ್ಟು ಹೊರಗೆ ಬಂದು ಓಡಾಡುವರ ಮೇಲೆ ನಿರ್ದಾಕ್ಷಿಣವಾಗಿ ಸೆಕ್ಷನ್‌ 188 ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲೆಗೆ ಈಗಾಗಲೇ ಹೊರದೇಶ ಮತ್ತು ಹೊರರಾಜ್ಯದಿಂದ ಸುಮಾರು 6 ಸಾವಿರ ಮಂದಿ ಆಗಮಿಸಿದ್ದು, ಅವರನ್ನೆಲ್ಲ ಹೊಟೇಲ್‌ ಮತ್ತು ಸರ್ಕಾರಿ ಕ್ವಾರಂಟೇನ್‌ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಆದರೆ, ಅವರಲ್ಲಿ ಕೆಲವರು ಕ್ವಾರಂಟೈನ್‌ ಕೇಂದ್ರದಿಂದ ಹೊರಗಡೆ ಬಂದು ಓಡಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಾಂಕ್ರಮಿಕ ರೋಗ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದವರು ಖಡಕ್‌ ಆಗಿ ಹೇಳಿದ್ದಾರೆ.

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಸೀಮಿತ ಸಂಚಾರ

ಕ್ವಾರಂಟೈನ್‌ನಲ್ಲಿರುವವರು ಅಲ್ಲಿನ ವ್ಯವಸ್ಥೆಗಳ ಸದುಪಯೋಗ ಮಾಡಿಕೊಳ್ಳಬೇಕು. ಯಾರಿಗೂ ಕೂಡ ನಿಮ್ಮಿಂದ ಕಾಯಿಲೆ ಹರಡಬಾರದು ಎಂಬ ಉದ್ದೇಶ ಜಿಲ್ಲಾಡಳಿತದ್ದಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು, ಆದೇಶವನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!