ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ಕಾಯ್ದೆ 2007ರ ಪ್ರಕಾರ ಪೋಷಕರನ್ನು ನಿರ್ಲಕ್ಷಿಸುವುದು ಅಥವಾ ಅವರನ್ನು ತ್ಯಜಿಸುವುದು ಅಪರಾಧವಾಗಿದೆ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಅವಕಾಶವಿದೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು(ಜ.12): ಇನ್ನು ಮುಂದೆ ನಗರದಲ್ಲಿ ತಂದೆ-ತಾಯಿಯನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಗರ ಪೊಲೀಸರು ಸಜ್ಜಾಗಿದ್ದಾರೆ. ಈ ಬಾರಿ ನಗರ ಪೊಲೀಸರು ಹೊಸ ವರ್ಷವನ್ನು ವೃದ್ಧಾಶ್ರಮಗಳು, ಅಂಗವಿಕಲರ ಆಶ್ರಮಗಳಲ್ಲಿ ಸಹಿ ಹಂಚಿ ಅರ್ಥಪೂರ್ಣವಾಗಿ ಆಚರಿಸಿದ್ದರು.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಖುದ್ದು ಅಂಗವಿಕಲರು ಹಾಗೂ ವೃದ್ಧಾಶ್ರಮ ಆಶ್ರ ಮಕ್ಕೆ ತೆರಳಿ ಸಿಹಿ, ಹಣ್ಣು ಹಂಪಲು ಹಂಚಿ ದ್ದರು. ಇದರ ಬೆನ್ನಲ್ಲೇ ಇದೀಗ ವಿನಾಕಾರಣ ತಂದೆ-ತಾಯಿಯನ್ನು ನಿರ್ಲಕ್‌ಷ್ಟಿಸು ವವರು ಹಾಗೂ ತ್ಯಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.
ಸಂಸ್ಕಾರ ಇಲ್ಲದ ಮಕ್ಕಳಿಂದಾಗಿ ವೃದ್ಧಾಶ್ರಮ ಹೆಚ್ಚಳ : ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ
ಹಲವು ಪ್ರಕರಣಗಳಲ್ಲಿ ಪೋಷಕ ಹೆಸರಿನಲ್ಲಿ ಸಾಕಷ್ಟು ಆಸ್ತಿ ಇದ್ದರೂ ಮಕ್ಕಳು ಮಾತ್ರ ಆ ಪೋಷಕರನ್ನು ವೃದ್ಧಾಶ್ರಮಗಳಿಗೆ ಸೇರಿಸುವುದು ಅಥವಾ ಅವರಿಂದ ದೂರು ಹೋಗುವುದು, ನಿರ್ಲಕ್‌ಷ್ಟಿಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ತಂದೆ-ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳಿಗೆ ಕಾನೂನಿನ ಮುಖಾಂತರ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ಕಾಯ್ದೆ 2007ರ ಪ್ರಕಾರ ಪೋಷಕರನ್ನು ನಿರ್ಲಕ್ಷಿಸುವುದು ಅಥವಾ ಅವರನ್ನು ತ್ಯಜಿಸುವುದು ಅಪರಾಧವಾಗಿದೆ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಅವಕಾಶವಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.