ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ : 18 ಮಂದಿ ಸೆರೆ

Kannadaprabha News   | Asianet News
Published : Sep 30, 2020, 07:33 AM IST
ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ : 18 ಮಂದಿ ಸೆರೆ

ಸಾರಾಂಶ

ದೇಶದಲ್ಲಿ ಈಗ ಐಪಿಎಲ್ ಹವಾ ಆರಂಭವಾಗಿದ್ದು ಇದೇ ವೇಳೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ. ಬೆಟ್ಟಿಂಗ್‌ ಮಾಡುತ್ತಿದ್ದ 18 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ

ಮಂಗಳೂರು (ಸೆ.30): ನಗರದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ನಿರತರಾಗಿದ್ದ 18 ಮಂದಿ ಆರೋಪಿಗಳನ್ನು ನಗರ ಸಿಸಿಬಿ ಮತ್ತು ಬಂದರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶ್ರೀನಿವಾಸ್‌, ಜಗದೀಶ್‌, ಉನ್ನಿಕೃಷ್ಣನ್‌, ಸುಧಾಕರ್‌, ಪ್ರತಾಪ್‌ ಶೆಟ್ಟಿ, ಜಾನ್‌ ಕೊಯಲ್ಲೋ, ತಿಮ್ಮಪ್ಪ ಗೌಡ, ರಿಚರ್ಡ್‌ ಲೋಬೋ, ಮೊಹಿದ್ದೀನ್‌ ಕುಂಞ, ಕೆ. ಸುಬ್ರಹ್ಮಣ್ಯ ಶೇಟ್‌, ಗೌತಮ್‌ ಮಜಿ ಬಂಧಿತ ಆರೋಪಿಗಳು. ಆರೋಪಿಗಳಿಂದ 11 ಮೊಬೈಲ್‌, 15 ಸಾವಿರ ರು. ನಗದು ವಶಪಡಿಸಿಕೊಳ್ಳಲಾಗಿದೆ.

IPL 2020: ಸೋಲಿಲ್ಲದ ಸರದಾರ ಡೆಲ್ಲಿಗೆ ಸೋಲುಣಿಸಿದ SRH! .

ಆರೋಪಿಗಳು ನಗರದ ಕಾರ್‌ಸ್ಟ್ರೀಟ್‌ ಮಹಾಮ್ಮಾಯಿ ಕೆರೆ ಸಮೀಪದ ಪ್ಲೈವುಡ್‌ ಅಂಗಡಿಯೊಂದರಲ್ಲಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮತ್ತು ಬಂದರು ಪೊಲೀಸರು ದಾಳಿ ನಡೆಸಿ 11ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಇದೀಗ ಐಪಿಎಲ್ ಹವಾ ಜೋರಾಗಿಯೇ ಇದೆ. ಈ ವೇಳೆ ಬೆಟ್ಟಿಂಗ್ ದಂಧೆಯೂ ಕೂಡ ವ್ಯಾಪಕವಾಗಿಯೇ ನಡೆಯುತ್ತಿದೆ. ಹಲವು ಮಂದಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!