ಮಹಾರಾಷ್ಟ್ರದ ಹಲವು ಭಾಗ ಸೇರಿಸಿ ಕರ್ನಾಟಕದ ಹೊಸ ನಕ್ಷೆ ತಯಾರಿ..!

By Kannadaprabha News  |  First Published Nov 27, 2022, 12:15 PM IST

ಬೆಳಗಾವಿ, ನಿಪ್ಪಾಣಿ, ಬೀದರ, ಕಾರವಾರ ತನ್ನದೆಂದು ಕ್ಯಾತೆ ತೆಗೆಯುವ ಮರಾಠಿ ಪುಂಡರಿಗೆ ಇದೀಗ ಮಹಾರಾಷ್ಟ್ರದ ಕನ್ನಡಿಗರೇ ತಿರುಗೇಟು ನೀಡಿದ್ದಾರೆ. 


ಬೆಳಗಾವಿ(ನ.27):  ಬೆಳಗಾವಿ ಗಡಿ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಮರಾಠಿ ಪುಂಡರು ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿದಿರುವುದು, ಕಲ್ಲು ತೂರಿರುವ ಕೃತ್ಯ ಖಂಡಿಸಿ ಬೆಳಗಾವಿಯಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಪ್ರತಿಕೃತಿಯ ಶವಯಾತ್ರೆ ನಡೆಸಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಏಕನಾಥ ಶಿಂಧೆ ಪ್ರತಿಕೃತಿ ದಹಿಸಲು ಪ್ರತಿಭಟನಾಕಾರರು ಮುಂದಾದ ವೇಳೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು- ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಶಿಂಧೆ ಪ್ರತಿಕೃತಿ ದಹನಗೊಳಿಸಲು ಅವಕಾಶ ನೀಡದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಏಕನಾಥ ಶಿಂಧೆ ಭಾವಚಿತ್ರವನ್ನು ಕಾಲಿನಿಂದ ತುಳಿದು ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದರು.

Latest Videos

undefined

ಕರ್ನಾಟಕಕ್ಕೆ ಸೇರುತ್ತೇವೆ: ಮರಾಠಿ ಹಳ್ಳಿಗಳ ಪಟ್ಟು..!

ಕರವೇ ಜಿಲ್ಲಾಧ್ಯಕ್ಷ ವಾಜೀದ ಹಿರೇಕೊಡಿ ಮಾತನಾಡಿ, ಗಡಿ ವಿಚಾರದಲ್ಲಿ ಬೆಳಗಾವಿಯ ಕೆಲ ರಾಜಕೀಯ ನಾಯಕರು ಎಂಇಎಸ್‌ ಏಜೆಂಟ್‌ ಆಗಿದ್ದಾರೆ. ಇನ್ನು ಹಲವು ರಾಜಕೀಯ ನಾಯಕರು ಎಂಇಎಸ್‌ ಗುಲಾಮರಾಗಿದ್ದಾರೆ. ಬೆಳಗಾವಿ ರಾಜಕೀಯ ನಾಯಕರು ಚಮಚಾಗಳು. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಾಯಕರಿಗೆ ಇರುವ ಬದ್ಧತೆ ಇವರಿಗಿಲ್ಲ. ರಾಜ್ಯದ ಯಾವೊಬ್ಬ ರಾಜಕೀಯ ನಾಯಕರುಗಡಿ ಬಗ್ಗೆ ತುಚಿ ಬಿಚ್ಚುತ್ತಿಲ್ಲ. ಮಹಾರಾಷ್ಟ್ರ ನಾಯಕರಪುಂಡಾಟಿಕೆಯನ್ನು ಸ್ಥಳೀಯ ಜನಪ್ರತಿನಿಧಿಗಳು ಟೀಕಿಸುತ್ತಿಲ್ಲ ಎಂದು ಆರೋಪಿಸಿದರು.

ಕೊಲ್ಲಾಪುರ, ಸೊಲ್ಲಾಪುರ ಸೇರಿಸಿ ಕರ್ನಾಟಕದ ಹೊಸ ನಕ್ಷೆ!

ಬೆಳಗಾವಿ, ನಿಪ್ಪಾಣಿ, ಬೀದರ, ಕಾರವಾರ ತನ್ನದೆಂದು ಕ್ಯಾತೆ ತೆಗೆಯುವ ಮರಾಠಿ ಪುಂಡರಿಗೆ ಇದೀಗ ಮಹಾರಾಷ್ಟ್ರದ ಕನ್ನಡಿಗರೇ ತಿರುಗೇಟು ನೀಡಿದ್ದಾರೆ. ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಲಾತೂರ, ಉಸ್ಮಾನಾಬಾದ್‌ ಸೇರಿದಂತೆ ಮಹಾರಾಷ್ಟ್ರದ ಹಲವಾರು ಭಾಗಗಳನ್ನು ಒಳಗೊಂಡಂತೆ ಕರ್ನಾಟಕದ ಹೊಸ ನಕ್ಷೆಯನ್ನು ತಯಾರಿಸಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
 

click me!