ಜಿಲ್ಲೆಯ ಕೊರೋನಾ ಪ್ರಯೋಗಾಲಯವೇ ಸೀಲ್‌ಡೌನ್‌!

Kannadaprabha News   | Asianet News
Published : Jun 28, 2020, 08:57 AM IST
ಜಿಲ್ಲೆಯ ಕೊರೋನಾ ಪ್ರಯೋಗಾಲಯವೇ ಸೀಲ್‌ಡೌನ್‌!

ಸಾರಾಂಶ

ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾರ್ಭಟಕ್ಕೆ ತಡೆ ಇಲ್ಲವಾಗಿದೆ. ಶನಿವಾರ ಒಂದೇ ದಿನ 13 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖೈ 33 ಕ್ಕೆ ಏರಿಕೆಯಾಗಿದೆ.

ಚಾಮರಾಜನಗರ(ಜೂ.28): ಜಿಲ್ಲೆಯಲ್ಲಿ ಕೊರೋನಾರ್ಭಟಕ್ಕೆ ತಡೆ ಇಲ್ಲವಾಗಿದೆ. ಶನಿವಾರ ಒಂದೇ ದಿನ 13 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖೈ 33 ಕ್ಕೆ ಏರಿಕೆಯಾಗಿದೆ.

ಏತನ್ಮಧ್ಯೆ ಕೊರೋನಾ ಪ್ರಯೋಗಾಲಯದ ಲ್ಯಾಬ್‌ ಟೆಕ್ನಿಷಿಯನ್‌ಗೇ ಸೋಂಕು ತಗುಲಿದ್ದರಿಂದ ವೈದ್ಯಕೀಯ ಕಾಲೇಜಿನ ಕೋವಿಡ್‌-19 ಪ್ರಯೋಗಾಲಯವನ್ನೇ ಸೀಲ್‌ ಡೌನ್‌ ಮಾಡಲಾಗಿದೆ.

BSNL‌ ಇಂಟರ್‌ನೆಟ್‌ ಅಯೋಮಯ! ಡಾಟಾ ಸ್ಪೀಡ್ ಇಲ್ಲದೆ, ನೆಟ್‌ವರ್ಕ್‌ ಬದಲು

ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ವ್ಯಕ್ತಿಯೋರ್ವರು ಚಾಮರಾಜನಗರ ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್‌-19 ಪ್ರಯೋಗಾಲಯದಲ್ಲಿ ಲ್ಯಾಬ್‌ ಟೆಕ್ನಿಶಿಯನ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಸೋಂಕು ತಗುಲಿದ್ದರಿಂದ ಪ್ರಯೋಗಾಲಯವನ್ನು 24 ತಾಸು ಸೀಲ್‌ಡೌನ್‌ ಮಾಡಲಾಗಿದೆ. ಎಷ್ಟುದಿನದವರೆಗೆ ಸೀಲ್‌ಡೌನ್‌ ಮಾಡಬೇಕೆಂಬ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಪ್ರಕಟಿಸುವುದಾಗಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜಿನ ಪ್ರಯೋಗಾಲವೇ ಸೀಲ್‌ ಡೌನ್‌ ಆಗಿರುವುದರಿಂದ ಗಂಟಲು ದ್ರವದ ಪರೀಕ್ಷೆ ಫಲಿತಾಂಶ ತಡವಾಗುವ ಸಂಭವವೂ ಇದೆ ಎಂದು ತಿಳಿದುಬಂದಿದೆ. ಉಳಿದಂತೆ ಇಂದು ಬದನಗುಪ್ಪೆ, ಚಂದಕವಾಡಿ, ಭುಜಗನಪುರ, ಕೊಳ್ಳೇಗಾಲದ ಬೂದಿತಿಟ್ಟು, ಗುಂಡ್ಲುಪೇಟೆಯ ಮಹಾದೇವಪ್ರಸಾದ ನಗರಗಳಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ ಇಲ್ಲೆಲ್ಲಾ ಕಂಟೈನ್ಮೆಂಟ್‌ ವಲಯಗಳನ್ನಾಗಿ ಮಾಡಿದೆ.

ಕ್ವಾರಂಟೈನ್‌ನಲ್ಲಿದ್ದ ಸಿಬ್ಬಂದಿ ಹೊರಹಾಕಿದ ಸಾರಿಗೆ ಸಂಸ್ಥೆ ಅಧಿಕಾರಿಗಳು

ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿರುವುದು ಕಳವಳಕಾರಿಯಾಗಿದ್ದು ಇನ್ನು 3-4 ದಿನಗಳಲ್ಲಿ ಕೊರೊನಾ 100ರ ಗಡಿ ದಾಟುವ ಆತಂಕ ಎಲ್ಲರಲ್ಲಿ ಮನೆ ಮಾಡಿದೆ. ಜಿಲ್ಲೆಯಲ್ಲಿ ಶನಿವಾರ ದಾಖಲಾದ ಪ್ರಕರಣಗಳ ಪೈಕಿ ಚಾಮರಾಜನಗರ ತಾಲೂಕಿನಲ್ಲಿ 8, ಗುಂಡ್ಲುಪೇಟೆ ತಾಲೂಕಿನಲ್ಲಿ 3 ಮತ್ತು ಕೊಳ್ಳೇಗಾಲ ತಾಲೂಕಿನಲ್ಲಿ 2 ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗಿರುವ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಸೋಂಕು ತಗುಲದಂತೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!