ಪಾಸಿಟಿವ್‌ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್‌ ನಿಲ್ದಾಣ ಸೀಲ್‌ ಡೌನ್‌

By Kannadaprabha NewsFirst Published Jul 8, 2020, 10:36 AM IST
Highlights

ತಂದೆ ಮತ್ತು ಮಗನಿಗೆ ಕೊರೋನಾ ಪಾಸಿಟಿವ್‌ ಇದೆ ಎಂದು ಗೊತ್ತಿದ್ದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ ಜರುಗಿದೆ.

ಮೈಸೂರು(ಜು.08): ತಂದೆ ಮತ್ತು ಮಗನಿಗೆ ಕೊರೋನಾ ಪಾಸಿಟಿವ್‌ ಇದೆ ಎಂದು ಗೊತ್ತಿದ್ದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ ಜರುಗಿದೆ.

ಟಿ. ನರಸೀಪುರ ತಾಲೂಕಿನ ಶ್ರೀರಂಗರಾಜಪುರ ಗ್ರಾಮದ ತಂದೆ ಮತ್ತು ಮಗನಿಗೆ ಕೊರೋನಾ ಪಾಸಿಟಿವ್‌ ದೃಢವಾಗಿದೆ. ಕೋವಿಡ್‌ 19 ಪರೀಕ್ಷೆ ಬಳಿಕ ಇಬ್ಬರು ಬೆಂಗಳೂರಿಗೆ ತೆರಳಿದ್ದರು. ನಂತರ ಇಬ್ಬರಿಗೆ ಕೊರೋನಾ ಪಾಸಿಟಿವ್‌ ಇರುವ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಒಪ್ಪಿ, ಬೆಂಗಳೂರಿನಿಂದ ಟಿ. ನರಸೀಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣಿಸಿದ್ದಾರೆ.

ಬೆಂಗಳೂರು ಪ್ರಯಾಣಿಕರಿಗೆ ಗ್ರಾಮಗಳಲ್ಲಿ ತರಾಟೆ, 1000 ದಂಡ!

ತಮಗೆ ಕೊರೋನಾ ಪಾಸಲಿಟಿವ್‌ ಇರುವುದು ಗೊತ್ತಿದ್ದರೂ ಬಸ್‌ನಲ್ಲಿ ಪ್ರಯಾಣಿಸಿದ್ದು, ಈಗ ಅದೇ ಬಸ್‌ನಲ್ಲಿದ್ದ 23 ಪ್ರಯಾಣಿಕರಿಗೆ ಭೀತಿ ಎದುರಾಗಿದೆ. ಇನ್ನು ಸೋಂಕಿತ ವ್ಯಕ್ತಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಬಸ್‌ನ ಕಂಡಕ್ಟರ್‌ ಅವರನ್ನು ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಜೊತೆಗೆ ಬಸ್‌ನಲ್ಲಿ ಪ್ರಯಾಣಿದವರು ಮುಂಜಾಗ್ರತೆಯಿಂದ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ, ಸೋಂಕಿತರು ಪ್ರತ್ಯೇಕ ವಾಹನದಲ್ಲಿ ಬಂದಿದ್ದರೆ ಯಾವ ಭಯವು ಇರುತ್ತಿರಲಿಲ್ಲ ಎಂದು ಆರೋಗ್ಯಾಧಿಕಾರಿ ರವಿಕುಮಾರ್‌ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ, 6 ಪಾಸಿಟಿವ್‌..!

ಸೋಂಕಿತರನ್ನು ಬಸ್‌ ನಿಲ್ದಾಣದಿಂದಲೇ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದು, ನರಸೀಪುರ ಬಸ್‌ ನಿಲ್ದಾಣವನ್ನು ಸೀಲ್‌ಡೌನ್‌ ಮಾಡಲಾಗಿದೆ. ಟಿ. ನರಸೀಪುರ ಜನತೆ ಭಯಭೀತಗೊಂಡಿದ್ದಾರೆ.

click me!