'ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ರು ಸರ್ಕಾರ ನೆಗ್ಲೆಕ್ಟ್ ಮಾಡಿತ್ತು'

Kannadaprabha News   | Asianet News
Published : Apr 23, 2021, 02:17 PM ISTUpdated : Apr 23, 2021, 02:22 PM IST
'ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ರು ಸರ್ಕಾರ ನೆಗ್ಲೆಕ್ಟ್ ಮಾಡಿತ್ತು'

ಸಾರಾಂಶ

ರಾಜ್ಯದಲ್ಲಿ ಕೊರೋನಾ ಮಹಾಮಾರಿ  ದಿನದಿಂದ ದಿನಕ್ಕೆ  ಏರುಗತಿಯಲ್ಲೇ ಸಾಗುತ್ತಿದೆ.  ಇದಕ್ಕೆ ಸರ್ಕಾರ ನಿರ್ಲಕ್ಷ್ಯವೇ ಕಾರಣ. ಚುನಾವಣೆಯಲ್ಲಿ ಸುರಕ್ಷತೆಯನ್ನೇ ಮರೆತಿತ್ತು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.

 ಹಾಸನ (ಏ.23):  ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುವ ಬಗ್ಗೆ ಹಲವಾರು ತಜ್ಞರು ಮೊದಲೆ ತಿಳಿಸಿದ್ದರೂ ಬಿಜೆಪಿ ಸರ್ಕಾರ ಗಮನ ನೀಡದೆ ಉಪ ಚುನಾವಣೆಯಲ್ಲಿ ಮುಳುಗಿತ್ತು. ಈ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಜನರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ದೂರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಎರಡನೇ ಹಂತದ ಅಲೆ ಹೆಚ್ಚಾಗುತ್ತಿರುವ ಬಗ್ಗೆ ಸರ್ಕಾರವು ಮೊದಲೆ ಮುಂಜಾಗ್ರತೆ ವಹಿಸಬೇಕಾಗಿತ್ತು. ಇನ್ನು ಚುನಾವಣೆ ಗೆಲುವಿಗಾಗಿ ಎರಡು ರಾಷ್ಟ್ರೀಯ ಪಕ್ಷಗಳು ಒಂದು ತಿಂಗಳುಗಳ ಕಾಲ ಸಮಯ ವ್ಯರ್ಥ ಮಾಡಿದ್ದು, ಹಲವಾರು ಜನ ತಜ್ಞರು 2ನೇ ಅಲೆ ಬಗ್ಗೆ ಮೊದಲೇ ಎಚ್ಚರಿಸಿದ್ದರೂ ಕ್ರಮ ತೆಗೆದುಕೊಳ್ಳಲಿಲ್ಲ. 

ಸಿಎಂ ಜೊತೆ ಪಿಎಂ ಚರ್ಚೆ: ಆಕ್ಸಿಜನ್, ಲಸಿಕೆಗಾಗಿ ಬಿಎಸ್‌ವೈ ಮನವಿ .

ಒಂದು ಕಡೆ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮತ್ತೊಂದು ಕಡೆ ಜನಸಾಮಾನ್ಯರಿಗೆ ಸರ್ಕಾರದ ಇಂತಹ ನಿರ್ಲಕ್ಷ್ಯ ಧೋರಣೆ. ಬೇರೆ ಬೇರೆ ಸ್ಥಳಗಳಿಂದ ಹಬ್ಬಹರಿದಿನಗಳಲ್ಲಿ ಊರಿಗೆ ಜನರು ಬಂದು ಒಟ್ಟಿಗೆ ಇರುತ್ತಾರೆ. ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ತಕ್ಷಣದಲ್ಲಿ ಮಾಡಬಾರದಿತ್ತು. ಇದರಿಂದ ಖಾಸಗಿ ವಾಹನ ಮಾಲೀಕರು ಹೆಚ್ಚಿನ ಹಣ ವಸೂಲಿ ಮಾಡಲು ಅವಕಾಶ ಸಿಕ್ಕಿದಂತಾಗಿದೆ. ಸರ್ಕಾರವೇ ಖಾಸಗಿಯವರಿಗೆ ಯಾವ ನಿಯಮ ಮಾಡದೇ ಬಿಟ್ಟಿದೆ. ಸರ್ಕಾರವು ಈಗಲಾದರೂ ಬಡವರ ಆರೋಗ್ಯದ ಜತೆ ಚೆಲ್ಲಾಟವಾಡದೆ ಕೊರೋನಾ ನಿಯಂತ್ರಣದ ಬಗ್ಗೆ ಗಮನ ಕೊಡಬೇಕು ಎಂದರು.

ಖಾಸಗಿ ಆಸ್ಪತ್ರೆಗಳಿಂದ ಹಣ ವಸೂಲಿ:  108 ತುರ್ತು ವಾಹನಕ್ಕೆ ಯಾರು ಹಣ ಕೊಡುತ್ತಾರೆ ಅವರನ್ನು ಕರೆದೊಯ್ಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಣಕ್ಕೆ ಚಿಕಿತ್ಸೆ ನೀಡಿದ್ದೇವೆ ಎಂದು ಬಡವರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಬಡವರು ಔಷ​ಧಕ್ಕೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಕೂಡಲೇ ಜಿಲ್ಲಾಧಿ​ಕಾರಿಗಳು ಖಾಸಗಿ ಆಸ್ಪತ್ರೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು ಬಡವರನ್ನು ಉಳಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಬಡವರ ಬಿಲ್‌ಗಳನ್ನು ಸರ್ಕಾರವೇ ಪಾವತಿ ಮಾಡುವುದಾಗಿ ಹೇಳಬೇಕು ಎಂದು ಕೋರಿದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ