BBMP Corona Guidelines: ಮಾಲ್‌, ಥಿಯೇಟರ್‌ ಪ್ರವೇಶಕ್ಕೆ ಡಬಲ್‌ ಡೋಸ್‌ ಕಡ್ಡಾಯ

By Govindaraj S  |  First Published Apr 30, 2022, 3:15 AM IST

ಕೊರೋನಾ 4ನೇ ಅಲೆ ಭೀತಿ ಹಾಗೂ ಸೋಂಕಿನ ಪ್ರಮಾಣ ಗಣನೀಯ ಏರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿನಿಮಾ ಹಾಲ್‌, ಮಾಲ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ ಪ್ರವೇಶಕ್ಕೆ ಡಬಲ್‌ ಡೋಸ್‌ (1ನೇ ಮತ್ತು 2ನೇ ಸುತ್ತಿನ) ವ್ಯಾಕ್ಸಿನೇಷನ್‌ ಕಡ್ಡಾಯಕ್ಕೆ ಬಿಬಿಎಂಪಿ ಸೂಚನೆ ನೀಡಿದೆ.


ಬೆಂಗಳೂರು (ಏ.30): ಕೊರೋನಾ 4ನೇ ಅಲೆ (Corona 4th Wave) ಭೀತಿ ಹಾಗೂ ಸೋಂಕಿನ ಪ್ರಮಾಣ ಗಣನೀಯ ಏರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಸಿನಿಮಾ ಹಾಲ್‌, ಮಾಲ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ ಪ್ರವೇಶಕ್ಕೆ ಡಬಲ್‌ ಡೋಸ್‌ (1ನೇ ಮತ್ತು 2ನೇ ಸುತ್ತಿನ) ವ್ಯಾಕ್ಸಿನೇಷನ್‌ ಕಡ್ಡಾಯಕ್ಕೆ ಬಿಬಿಎಂಪಿ ಸೂಚನೆ ನೀಡಿದೆ. ಶುಕ್ರವಾರ ಬಿಬಿಎಂಪಿಯ (BBMP) ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್‌ಚಂದ್ರ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನರ್ಸಿಂಗ್‌ ಹೋಮ್ಸ್‌ ಅಸೋಸಿಯೇಷನ್‌, ಹೋಟೆಲ್‌, ಮಾಲ್‌, ಚಿತ್ರಮಂದಿರ, ರೆಸ್ಟೋರೆಂಟ್‌ ಮಾಲೀಕರೊಂದಿಗೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.

ಸಿನಿಮಾ ಹಾಲ್‌, ಮಾಲ್‌, ರೆಸ್ಟೋರೆಂಟ್‌, ಹೋಟೆಲ್‌ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಗೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಆಗುವಂತೆ ನಿಗಾ ವಹಿಸಬೇಕು. ಪ್ರವೇಶ ದ್ವಾರಗಳಲ್ಲಿ ತಾಪಮಾನ ತಪಾಸಣೆ ನಡೆಸಬೇಕು. ಸಿಬ್ಬಂದಿ ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಆಗಾಗ್ಗೆ ಸಿಬ್ಬಂದಿಯ ಆರೋಗ್ಯ ಪರೀಕ್ಷೆಗೆ ಒಳಪಡಿಸುವುದು. ಕೊರೋನಾ ಹೆಚ್ಚಿನ ಪ್ರಕರಣಗಳಿರುವ ಪ್ರದೇಶಗಳಿಂದ ಬರುವವರ, ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.

Latest Videos

Covid Crisis: ಕೋವಿಡ್‌ ನಿಯಂತ್ರಣಕ್ಕಾಗಿ ಧಾರವಾಡದಲ್ಲಿ ಜೈವಿಕ ಲ್ಯಾಬ್‌: ಪ್ರಹ್ಲಾದ್‌ ಜೋಶಿ

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳಿಗೆ ಆಗಮಿಸುವ ಹೊರ ರೋಗಿಗಳಿಗೆ ಐಎಲ್‌ಐ ಹಾಗೂ ಸಾರಿ ಪರೀಕ್ಷೆ ಹಾಗೂ ಒಳರೋಗಿಗಳಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಬೇಕು. ಐಸಿಎಂಆರ್‌ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿ ಪರೀಕ್ಷಾ ವಿವರಗಳನ್ನು ದಾಖಲಿಸಬೇಕು. ಸಿಟಿ ವ್ಯಾಲ್ಯು 30 ಕ್ಕಿಂತ ಕಡಿಮೆ ಇರುವ ಪಾಸಿಟಿವ್‌ ಪ್ರಕರಣಗಳನ್ನು ಜೀನೋಮಿಕ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು. ಕೇಂದ್ರ ಸರ್ಕಾರ ಈ ಹಿಂದೆ ನೀಡಿದ ಆದೇಶದಂತೆ ಶೇ.10 ರಷ್ಟುಹಾಸಿಗೆಯನ್ನು ಖಾಸಗಿ ಆಸ್ಪತ್ರೆಗಳು ಮೀಸಲಿಡಬೇಕು. ಹಾಸಿಗೆ ಲಭ್ಯದ ಬಗ್ಗೆ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಕೊರೋನಾ ನಿಯಂತ್ರಣ ಕಾರ್ಯಕ್ಕೆ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಸಹಕಾರ ನೀಡಬೇಕು. ಬೂಸ್ಟರ್‌ ಡೋಸ್‌ ಹಾಗೂ ಮಕ್ಕಳ ವ್ಯಾಕ್ಸಿನೇಷನ್‌ ಬಗ್ಗೆ ಜಾಗೃತಿ ಮೂಡಿಸಬೇಕು. ಶಿಬಿರಗಳನ್ನು ಆಯೋಜನೆ ಮಾಡುವ ಮೊದಲು ಭಾಗವಹಿಸುವ ಎಲ್ಲರೂ ಶೇ.100 ರಷ್ಟುಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಉಗುಳುವಿಕೆ ವಿರುದ್ಧ ಆಂದೋಲನ: ಕೊರೊನಾ 1, 2 ಹಾಗೂ 3ನೇ ಅಲೆ ವೇಳೆ ನಡೆಸಲಾದ ಸಾರ್ವನಿಕ ಸ್ಥಳದಲ್ಲಿ ಉಗುಳುವಿಕೆ ವಿರುದ್ಧ ಆಂದೋಲನ ಮತ್ತು ಮಾಸ್‌್ಕ ಧಾರಣೆ ಅಭಿಯಾನದ ಪುನರಾರಂಭಿಸುವುದಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸಹಯೋಗ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದಲ್ಲೂ ಕೋವಿಡ್‌ ಆತಂಕ?: ಸಚಿವ ಸುಧಾಕರ್‌ ಪ್ರತಿಕ್ರಿಯೆ

ಪ್ರಾಥಮಿಕ ಸಂಪರ್ಕಿತರ ಪರೀಕ್ಷೆ ಕಡ್ಡಾಯ: ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುವುದಕ್ಕೆ ಡಾ.ತ್ರಿಲೋಕಚಂದ್ರ ಅವರು ಸೂಚನೆ ನೀಡಿದ್ದಾರೆ. ಜತೆಗೆ ಹೆಚ್ಚು ಜನರು ಸೇರುವ ವ್ಯಾಪಾರ ಪ್ರದೇಶಗಳಲ್ಲಿ ಮಾರ್ಷಲ್‌ಗಳು ಗಸ್ತು ತಿರುಗಬೇಕು ಮತ್ತು ಮಾಸ್‌್ಕ ಮತ್ತು ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದ್ದಾರೆ.

click me!