ಬೆಂಗಳೂರು : ಕೊರೋನಾ ಪ್ರಕರಣಗಳು ಕೊಂಚ ಇಳಿಕೆ

Kannadaprabha News   | Asianet News
Published : Sep 23, 2021, 07:33 AM IST
ಬೆಂಗಳೂರು : ಕೊರೋನಾ ಪ್ರಕರಣಗಳು ಕೊಂಚ ಇಳಿಕೆ

ಸಾರಾಂಶ

 ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಇಳಿಮುಖ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 12,44,364ಕ್ಕೆ ಏರಿಕೆ

 ಬೆಂಗಳೂರು (ಸೆ.23):  ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಇಳಿಮುಖವಾಗಿದ್ದು, ಬುಧವಾರ 312 ಹೊಸ ಪ್ರಕರಣ ವರದಿಯಾಗಿವೆ.

ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 12,44,364ಕ್ಕೆ ಏರಿಕೆಯಾಗಿದೆ. ಆರು ಮಂದಿ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 16,110ಕ್ಕೆ ಏರಿಕೆಯಾಗಿದೆ. ಈ ನಡುವೆ ಬುಧವಾರ ಒಂದೇ ದಿನ 219 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 12,20,878ಕ್ಕೆ ಏರಿಕೆಯಾಗಿದೆ. ಆದರೂ ನಗರದಲ್ಲಿ 7,375 ಸಕ್ರಿಯ ಕೊರೋನಾ ಸೋಂಕು ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಕೋವಿಡ್‌ ವರದಿಯಲ್ಲಿ ತಿಳಿಸಿದೆ.

ಬೆಂಗಳೂರಲ್ಲಿ ಮತ್ತೆ ಹೆಚ್ಚಿದ ಸೋಂಕಿತರ ಸಂಖ್ಯೆ : ಎಚ್ಚರ!

81 ಸಕ್ರಿಯ ಕಂಟೈನ್‌ಮೆಂಟ್‌ ಜೋನ್‌:  ಪಾಲಿಕೆ ವ್ಯಾಪ್ತಿಯ ಒಟ್ಟು ಎಂಟು ವಲಯಗಳ ಪೈಕಿ ಏಳು ವಲಯಗಳಲ್ಲಿ 81 ಸಕ್ರಿಯ ಕಂಟೈನ್‌ಮೆಂಟ್‌ ಜೋನ್‌ಗಳಿವೆ. ಇದರಲ್ಲಿ ಬೊಮ್ಮನಹಳ್ಳಿ ವಲಯ 25, ಪೂರ್ವ 19, ಮಹದೇವಪುರ 11, ದಕ್ಷಿಣ 11, ಯಲಹಂಕ 10, ಪಶ್ಚಿಮ 3, ರಾಜರಾಜೇಶ್ವರಿ ನಗರ ವಲಯದಲ್ಲಿ 2 ಕಂಟೈನ್‌ಮೆಂಟ್‌ ಜೋನ್‌ಗಳಿವೆ. ದಾಸರಹಳ್ಳಿ ವಲಯ ಕಂಟೈನ್‌ಮೆಂಟ್‌ ಜೋನ್‌ ಮುಕ್ತವಲಯವಾಗಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು