ಕೊರೋನಾ ಪಾಸಿಟಿವಿಟ್ ರೇಟು ಹೀಗೆ ನಾಗಲೋಟದಲ್ಲಿ ಮುಂದುವರಿದಿದೆ. ಇದೇ ವೇಗದಲ್ಲಿ ಮುಂದುವರಿದರೆ ಮುಂದೊಂದು ದಿನ ಭಾರೀ ಆತಂಕದಲ್ಲಿ ಬದುಕು ದುಸ್ಥರವಾಗುವುದು ಖಚಿತವಾಗಿದೆ.
ಚಿಕ್ಕಬಳ್ಳಾಪುರ (ಮೇ.02): ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆಯ ಅರ್ಭಟದ ಹಿನ್ನಲೆಯಲ್ಲಿ ಪಾಸಿಟಿವಿಟ್ ರೇಟು ಹೀಗೆ ನಾಗಲೋಟದಲ್ಲಿ ಮುಂದುವರೆದರೆ ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 80 ಸಾವಿರ ದಾಟಿದರೂ ಯಾರು ಅಶ್ಚರ್ಯಪಡಬೇಕಿಲ್ಲ.
ಹೌದು, ಕೊರೋನಾ ಮೊದಲ ಅಲೆಯ 6 ತಿಂಗಳಲ್ಲಿ ಕಂಡು ಬಂದಷ್ಟುಕೊರೋನಾ ಸೋಂಕಿತ ಪ್ರಕರಣಗಳು ಎರಡನೇ ಅಲೆ ಶುರುವಾದ ತಿಂಗಳಲ್ಲಿಯೆ ಜಿಲ್ಲೆಯಲ್ಲಿ ಕಂಡು ಬಂದಿದ್ದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ತಲ್ಲಣದ ಜೊತೆಗೆ ಆತಂಕ ಮನೆ ಮಾಡಿದೆ.
undefined
ಇಲ್ಲಿನ 40 ಹಳ್ಳಿಗಳಲ್ಲಿ ಕೊರೋನಾ ರಣಕೇಕೆ : ದಿಕ್ಕೆಟ್ಟ ಜನ ..
ಕೊರೋನಾ ಮೊದಲ ಅಲೆಯಲ್ಲಿ ಜಿಲ್ಲಾದ್ಯಂತ ಒಟ್ಟು 13,000 ಸಾವಿರ ಪ್ರಕರಣಗಳು ಕಂಡು ಬಂದಿದ್ದವು. ಆದರೆ ಇದೀಗ 2ನೇ ಅಲೆ ಆರಂಭವಾದ ತಿಂಗಳಿಗೆ ಜಿಲ್ಲೆಯಲ್ಲಿ ಬರೋಬ್ಬರಿ 6,474 ಪಾಸಿಟಿವ್ ಪ್ರಕರಣಗಳು ಜಿಲ್ಲಾದ್ಯಂತ ಕಂಡು ಬಂದಿದ್ದು ಜಿಲ್ಲೆಯಲ್ಲಿ ಕೊರೋನಾ ಅಪಾಯದ ಮಟ್ಟದಲ್ಲಿ ಕೈ ಮೀರಿ ಹೋಗುತ್ತಿರುವುದು ಅಂಕಿ, ಅಂಶಗಳು ದೃಢಪಡಿಸುತ್ತಿವೆ. ಎರಡನೇ ಅಲೆಯಲ್ಲಿ ಒಟ್ಟು ಜಿಲ್ಲೆಯಲ್ಲಿ 22 ಮಂದಿ ರೋಗಿಗಳು ಚಿಕಿತ್ಸೆ ಫಲಿಸದೇ ಅಸುನೀಗಿದ್ದು ಕೋವಿಡ್ ಎರಡನೇ ಅಲೆ ಸಾವಿನ ಪ್ರಮಾಣದಲ್ಲಿ ರಣಕೇಕೆ ಹಾಕುತ್ತಿರುವುದು ಸ್ಪಷ್ವವಾಗಿ ಗೋಚರಿಸುತ್ತಿರುವುದು ಕಂಡು ಬರುತ್ತಿದೆ.
ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕೊರೋನಾ ಸ್ವಲ್ಪ ಮಟ್ಟಿಗೆ ತನ್ನ ಅರ್ಭಟ ತಗ್ಗಿಸಿದರೂ 15 ರ ಬಳಿಕ ಸೋಂಕಿತರ ಸಂಖ್ಯೆ ನಿತ್ಯ 200, 300, 400 ಕೆಲವೊಮ್ಮೆ 600 ಸಂಖ್ಯೆಯಲ್ಲಿ ಸೋಂಕಿತರು ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21 ಸಾವಿರ ಗಡಿ ದಾಟಿದೆ. ಏಪ್ರಿಲ್ ತಿಂಗಳ 15 ರಿಂದ 30ರ ವರೆಗೂ ಕೇವಲ 15 ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 5,684 ಮಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona