ನೆಮ್ಮದಿಯ ಸುದ್ದಿ: ಬೆಂಗಳೂರಿನಲ್ಲಿ ಕೊರೋನಾ ಸಾವಿನ ಪ್ರಮಾಣ ಶೂನ್ಯ

By Suvarna News  |  First Published Aug 23, 2021, 10:29 PM IST

* ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೂನ್ಯ
* ಬೆಂಗಳೂರಿನಲ್ಲಿ ಫಸ್ಟ್ ಟೈಮ್ ಸಾವಿನ ಪ್ರಕರಣ ವರದಿಯಾಗಿಲ್ಲ
* ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಶುರುವಾದ ನಂತರ ಇದೇ ಮೊದಲು


ಬೆಂಗಳೂರು, (ಆ.23): ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.08ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 0.86ರಷ್ಟಿದೆ.

ಅದರಲ್ಲೂ ಮುಖ್ಯವಾಗಿ ಇಂದು (ಆ.23) ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಫಸ್ಟ್ ಟೈಮ್ ಸಾವಿನ ಪ್ರಕರಣ ವರದಿಯಾಗಿಲ್ಲ. ಅಚ್ಚರಿ ಎನ್ನಿಸಿದರೂ ಸತ್ಯ. ಹೌದು...ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಶುರುವಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮರಣ ಪ್ರಮಾಣ ಶೂನ್ಯಕ್ಕೆ ಇಳಿದೆ. ಕೊರೋನಾದಿಂದ ನಗರದಲ್ಲಿ ಈವರೆಗೆ 15,959 ಜನ ಬಲಿಯಾಗಿದ್ದಾರೆ.

Tap to resize

Latest Videos

ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ: ಆ.23ರಂದು ಬೆಂಗ್ಳೂರಲ್ಲಿ ಯಾವುದೇ ಸಾವು ಸಂಭವಿಸಿಲ್ಲ

ಕೊರೋನಾ ಹಾಟ್‌ಸ್ಪಾಟ್ ಆಗಿದ್ದ ಬೆಂಗಳೂರಿನ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇದ್ದಲ್ಲಿಯೇ ಜೀವಗಳು ಹೋಗಿದ್ದನ್ನು ಮರೆಯಲು ಸಾಧ್ಯವಿಲ್ಲ. ಸರಿಯಾದ ಸಮಯಕ್ಕೆ ಬೆಡ್‌, ಆಕ್ಸಿಜನ್, ICU, ಆ್ಯಂಬುಲೆನ್ಸ್‌ ಸಿಗದೇ ಜೀವ ಹೋಯ್ತು ಎಂದು ಮಾಧ್ಯಮಗಳ ಮುಂದೆ ಸಂಬಂಧಿಕರ ಕಣ್ಣೀರು ಹಾಕಿರುವ ದೃಶ್ಯಗಳು ಕಣ್ಣು ಮುಂದೆ ಇವೆ.

 ಅಂತ್ಯಸಂಸ್ಕಾರಕ್ಕಾಗಿ ಚಿತಾಗಾರಗಳ ಮುಂದೆ ಮೃತದೇಹಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳು ಗಂಟೆಗಟ್ಟಲೆ ಕಾಯುವಂತಾಗಿತ್ತು. ಚಿತಾಗಾರಗಳ ಮುಂದೆ ಆಂಬ್ಯುಲೆನ್ಸ್‌ಗಳ ಕ್ಯೂ ತಪ್ಪಿಸಲು ಕಂದಾಯ ಇಲಾಖೆ, ಮಹಾನಗರಗಳ ವ್ಯಾಪ್ತಿಯ 1 ರಿಂದ 2 ಕಿಮೀ ಅಂತರದಲ್ಲಿ ಬಯಲು ಚಿತಾಗಾರಗಳನ್ನು ತಾತ್ಕಾಲಿಕವಾಗಿ ವ್ಯವಸ್ಥೆಗೊಳಿಸಿ ಆದೇಶಿಸಿತ್ತು. ಅಲ್ಲದೇ ಮೃತದೇಹಗಳನ್ನ ಸುಡುವುದಕ್ಕೆ ಚಿತಾಗಾರದ ಸಿಬ್ಬಂದಿ ಸುಸ್ತು ಆಗಿ ಹೋಗಿದ್ರು. ಅಷ್ಟರ ಮಟ್ಟಿಗೆ ಸಾವುಗಳು ಸಂಭವಿಸುತ್ತಿದ್ದವು.

ಟೋಕನ್‌ ವ್ಯವಸ್ಥೆ ಮಾಡಲಾಗಿತ್ತು
 ಚಿತಾಗಾರದಲ್ಲಿ ಮೃತದೇಹಗಳ ಸರತಿ ಸಾಲು ದೊಡ್ಡದಾಗುತ್ತಿದ್ದಂತೆ ಚಿತಾಗಾರದ ಸಿಬ್ಬಂದಿ ಮೃತರ ಕುಟುಂಬದ ಸದಸ್ಯರಿಗೆ ಟೋಕನ್‌ ವಿತರಿಸಿದ್ರು. ಟೋಕನ್‌ ಸಂಖ್ಯೆಯ ಪ್ರಕಾರ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸುತ್ತಿದ್ದರು.  ಒಂದು ಹಂತದಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾದ್ದರಿಂದ ಹೊಸದಾಗಿ ಬಂದ ಮೃತದೇಹಗಳನ್ನು ಬೇರೆ ಚಿತಾಗಾರಗಳಿಗೆ ಕಳುಹಿಸಿಕೊಡಲಾಗುತ್ತಿತ್ತು. ಎಷ್ಟೋ ಮಂದಿ ಆ್ಯಂಬುಲೆನ್ಸ್‌ಗಳ ಸಾಲು ಕಂಡು ಕಡಿಮೆ ಮೃತದೇಹ ಇರುವ ಚಿತಾಗಾರಗಳನ್ನು ಹುಡುಕಿಕೊಂಡು ಸುತ್ತಾಡಿದ್ದನ್ನು ಗಮನಿಸಿದ್ದೇವೆ.

ಬೆಂಗಳೂರಿನಲ್ಲಿ ಇಷ್ಟೆಲ್ಲಾ ಸಾವಿನ ಕೇಕೆ ಹಾಕಿದ್ದು, ಇದೀಗ  ಆದ್ರೆ, ಈಗ ಕೊರೋನಾ ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾವು ದಾಖಲಾಗಿಲ್ಲ ಎನ್ನುವುದು ಖುಷಿಯ ವಿಚಾರವಾಗಿದೆ. 
 

click me!