
ಬೆಂಗಳೂರು(ಮೇ 01) ಕರ್ನಾಟಕದಲ್ಲಿ ಲಾಕ್ ಡೌನ್ ನಿಧಾನವಾಗಿ ಸಡಿಲಿಕೆ ಮಾಡಲಾಗುತ್ತಿದೆ. ಅದರ ಜತೆಗೆ ಮದ್ಯ ಮಾರಾಟಕ್ಕೆ ಯಾವಾಗ ಅವಕಾಶ ಸಿಗುತ್ತದೆ ಎಂಬ ಪ್ರಶ್ನೆಯೂ ಹಲವರನ್ನು ಕಾಡುತ್ತಿದೆ.
ಕೈಗಾರಿಕೆ ತೆರೆಯಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇ 4 ರ ನಂತರ ಎಲ್ಲ ಪರಿಸ್ಥಿತಿ ತಹಬದಿಗೆ ಬರಬಹುದು ಎಂದು ಹೇಳಲಾಗುತ್ತಿದೆ.
ದಿನಕ್ಕೆ 5 ಗಂಟೆ ಮದ್ಯ ಮಾರಾಟ ಮಡಲು ಅವಕಾಶ ಮಾಡಿಕೊಡಿ, ಸಿಎಂಗೆ ಮನವಿ
ರಾಜ್ಯ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆಯಲು ಪ್ಲಾನ್ ಸಿದ್ಧಮಾಡಿಕೊಂಡಿದೆ. ಶಾಪಿಂಗ್ ಮಾಲ್ ಸೇರಿದಂತೆ ಕೆಲ ವಾಣಿಜ್ಯ ಚಟುವಟಿಕೆಗೂ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
ರೇಡ್ ಝೋನ್ ಗಳನ್ನು ಹೊರತುಪಡಿಸಿ ಉಳಿದ ಕಡೆ ಅವಕಾಶ ನೀಡುವ ಚಿಂತನೆ ರಾಜ್ಯ ಸರ್ಕಾರದ ಮುಂದಿದೆ. ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿಯೂ ಚರ್ಚೆಯಾಗಿದೆ. ಐಟಿ ವಿಭಾಗದವರಿಗೆ ವರ್ಕ್ ಪ್ರಾಂ ಹೋಂ ಮುಂದುವರಿಯಲಿದೆ.
ಈ ನಡುವೆ ಕೇಂದ್ರ ಸರ್ಕಾರ ದೇಶದಲ್ಲಿನ ಪರಿಸ್ಥಿತಿ ಮನಗಂಡು ಲಾಕ್ ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲು ತೀರ್ಮಾನ ಮಾಡಿದೆ.