ನಿತ್ಯ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಚಿಕ್ಕ ಮಕ್ಕಳು

By Suvarna News  |  First Published May 1, 2020, 6:12 PM IST

ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕರಿಂದ ಸರಕಾರಕ್ಕೆ ಬೆಂಬಲ ಹರಿದು ಬರುತ್ತಿದೆ. ಇದಕ್ಕೆ ಚಿಕ್ಕ ಮಕ್ಕಳು ಸಹ ಸಾಥ್ ಕೊಟ್ಟಿದ್ದಾರೆ.


ಬೆಂಗಳೂರು, (ಮೇ.01):  ಮಕ್ಕಳು ನಿತ್ಯ ಕೂಡಿಟ್ಟ ಹಣವನ್ನು  ಕೊರೋನಾ ಸೋಂಕು ತಡೆಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಅಶೋಕ ನಗರದ ಪರೀಟ ಕುಟುಂಬದ ಪ್ರೀತಂ,ಪ್ರಜ್ವಲ್,ಅಶೋಕ್ ಎನ್ನುವರು ಒಂದು ವರ್ಷದಿಂದ ಕೂಡಿಡುತ್ತಾ ಬಂದಿದ್ದಾರೆ. ಅದು ಇದೀಗ 1,210 ರೂ ಆಗಿದ್ದು ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

Tap to resize

Latest Videos

ಕೊರೊನಾ ವಾರಿಯರ್ಸ್‌ಗೆ ಪುಟಾಣಿ ಸಾಥ್; ಸಿಎಂ ಪರಿಹಾರ ನಿಧಿಗೆ 5 ಸಾವಿರ ಹಣ

ತೇರದಾಳ ಶಾಸಕ ಸಿದ್ದು ಸವದಿ  ಅವರನ್ನ ಭೇಟಿಯಾಗಿ ದೇಣಿಗೆ ಹಣ ನೀಡಿದರು. ಈ ವೇಳೆ ಈ ಹಣ ಏತಕ್ಕಾಗಿ ಕೊಡ್ತಿದ್ದಿರಾ ಎಂದು ಸಿದ್ದು ಸವದಿ ಮಕ್ಕಳನ್ನು ಪ್ರಶ್ನಿಸಿದ್ದಾರೆ.

 ಇದಕ್ಕೆ ಪತ್ರಿಕ್ರಿಯಿಸಿರುವ ಮಕ್ಕಳು, ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಬಡವರಿಗೆ ಸಹಾಯ ಮಾಡುವುದಕ್ಕಾಗಿ ಎಂದಿದ್ದಾರೆ. ನಿಜಕ್ಕೂ ಈ ಮಕ್ಕಳ ಕಾರ್ಯ ಇತರರಿಗೆ ಮಾದರಿಯಾಗಿದೆ. 

ಲಾಕ್‌ಡೌನ್‌ನಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರೀನ್‌ ಝೋನ್‌ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಕೆ ಮಾಡಿ ಆರ್ಥಿಕ ಪುನಶ್ಚೇತನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ.

click me!