ತೀರ್ಥಹಳ್ಳಿ ಪುಟ್ಟ ಶಾಲಾ ಮಂಡಳಿಯ ದೊಡ್ಡ ಕೆಲಸ.. ಇವರು ಕೊರೋನಾ ವಾರಿಯರ್ಸ್!

By Suvarna NewsFirst Published May 5, 2020, 10:52 PM IST
Highlights

ಕೊರೋನಾ ವಿರುದ್ಧದ ಹೋರಾಟ/ ತೀರ್ಥಹಳ್ಳಿಯ ಈ ಶಾಲಾ ಸಮಿತಿಯ ಮಾದರಿ ಕೆಲಸ/ 10 ಸಾವಿರ ಮಾಸ್ಕ್ ತಯಾರಿಸಿ ಉಚಿತವಾಗಿ ಹಂಚುವ ಮಂಡಳಿ/ ಸ್ವಯಂ ಸೇವಾ ಸಂಸ್ಥೆ ಸಹಕಾರದಲ್ಲಿ ಮಾದರಿ ಕೆಲಸ

ಶಿವಮೊಗ್ಗ/ ತೀರ್ಥಹಳ್ಳಿ(ಮೇ 05)  ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮಾದರಿ ಕೆಲಸ ಮಾಡುತ್ತಿದೆ. ಕೊರೋನಾ ವಿರುದ್ಧದ ಹೋರಾಟದ ಅಸ್ತ್ರ ಎಂದೇ ಕರೆಸಿಕೊಂಡಿರುವ ಮಾಸ್ಕ್ ತಯಾರಿಸಿಕೊಡುತ್ತಿದೆ.  ತಯಾರಿಕೆ ಮಾತ್ರ ಅಲ್ಲ ಅದನ್ನು ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುವ ಕೆಲಸ ಮಾಡುತ್ತಿದೆ.

ತಾಲೂಕಿನ ಹೊನ್ನೆತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಮಾದರಿ ಕೆಲಸ ಮಾಡಿಕೊಂಡು ಬಂದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತು ಬೆಂಗಳೂರಿನ ಕೇರ್ ವರ್ಕ್ಸ್ ಫೌಂಡೇಶನ್ ಸಹಕಾರದಲ್ಲಿ ಕೆಲಸ ಮಾಡುತ್ತಿದೆ.

ಮಾಸ್ಕ್ ಅಂದರೆ ಹೇಗಿರಬೇಕು?

ಕೊರೋನಾ ವೈರಸ್ ನೊಂದಿಗೆ ಎಲ್ಲರೂ ಹೋರಾಟ ಮಾಡಬೇಕಾಗಿದ್ದು ಇಂದಿನ ಅಗತ್ಯ. ಸ್ಥಳೀಯರು ನೀಡಿದ ಬಟ್ಟೆಯನ್ನು ಮೊದಲು ಕಲೆಕ್ಟ್ ಮಾಡಿಕೊಂಡೆವು.  ಕೊರೋನಾ ಕಾರಣಕ್ಕೆ ಕೆಲಸ ಮಾಡಲು ಸಾಧ್ಯವಾಗದೆ ಕುಳಿತಿದ್ದ 5 ಜನ ಟೈಲರ್ ಗಳನ್ನು ಗುರುತಿಸಿ ಕರೆತಂದೆವು. ಅವರು ಮಾಸ್ಕ್  ತಯಾರಿಕೆ ಆರಂಭಿಸಿದರು. ಕೇರ್ ವರ್ಕ್ಸ್ ಫೌಂಡೇಶನ್ ಅವರಿಗೆ ನೇರವಾಗಿ ಒಂದು ಮಾಸ್ಕ್ ಗೆ 10 ರೂ. ನೀಡಿತು.  ಮೊದಲು ಅಕ್ಕ ಪಕ್ಕದ ಪುರೋಹಿತರ ಮನೆಯಿಂದಲೂ ಬಟ್ಟೆ ತರಲಾಗಿತ್ತು. ನಾವು ಈ ಮಾಸ್ಕ್ ಗಳನ್ನು ಸಾನಿಟೈಸ್ ಮಾಡಿ ಜನರಿಗೆ ಉಚಿತವಾಗಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು  ಎಸ್‌ಡಿಎಂಸಿ ಅಧ್ಯಕ್ಷ ನಿತ್ಯಾನಂದ ಕೇದಾಳಬೈಲು  ಹೇಳುತ್ತಾರೆ.

ಬಟ್ಟೆಯನ್ನು ಸ್ವಯಂ ಸೇವಕರು ಸಿದ್ಧ ಮಾಡಿ ನೀಡಿದರು. ನಾವು ಟೇಲರ್ ಗಳಿಗೆ ಮಾಸ್ಕ್ ಒಂದಕ್ಕೆ 10 ರೂ. ನೀಡಿದ್ದೇವೆ ಎಂದು ಕೇರ್ ವರ್ಕ್ಸ್ ಫೌಂಡೇಶನ್ ಬಿಎಸ್ ಸ್ಮಿತಾ ಹೇಳುತ್ತಾರೆ.

ಈ ಗ್ರಾಮ ಪಂಚಾಯಿತಿ ಅಲ್ಲದೇ ಪಕ್ಕದ ಪಂಚಾಯಿತಿಗೂ ಮಾಸ್ಕ್ ನೀಡುವ ಆಲೋಚನೆಯನ್ನು ಮಾಡಿಕೊಳ್ಳಲಾಗಿದೆ. SSLC ಪರೀಕ್ಷೆ ಆರಂಭವಾಗುವ ವೇಳೆ ವಿದ್ಯಾರ್ಥಿಗಳಿಗೂ ಮಾಸ್ಕ್ ಒದಗಿಸಲಾಗುವುದು. 

click me!