ಕಸದ ಆಟೋ ಸೇರಿದ ಬಂಗಾರ ಇದ್ದ ಕವರ್, ಪ್ರಾಮಾಣಿಕತೆ ಮೆರೆದ ಕಾರವಾರದ ಪೌರಕಾರ್ಮಿಕರು

Published : Nov 10, 2026, 08:07 PM IST
Karwar sanitation workers honesty

ಸಾರಾಂಶ

ಕಾರವಾರದಲ್ಲಿ ಸ್ವಚ್ಛತಾ ಕಾರ್ಮಿಕರಾದ ಅರುಣ್ ಹರಿಜನ್ ಮತ್ತು ಮದನ್ ನಾಯ್ಕ್ ಕಸದ ರಾಶಿಯಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯನ್ನು ಅದರ ಮೂಲ ಮಾಲೀಕರಿಗೆ ಮರಳಿಸಿದ್ದಾರೆ. ಇವರ ಪ್ರಾಮಾಣಿಕತೆಯ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರವಾರ: ಬಂಗಾರ ಭಾರೀ ಬೇಡಿಕೆಯ ಲೋಹ. ಸಣ್ಣ ಚಿನ್ನದ ತುಂಡೂ ಕೂಡ ಲಕ್ಷಾಂತರ ಮೌಲ್ಯ ಬೆಲೆ ಬಾಳುತ್ತದೆ. ಅದೆಲ್ಲ ಸಿಕ್ಕರೆ ಯಾರು ಕೊಡ್ತಾರೆ ಹೇಳಿ? ರಸ್ತೆ ಮೇಲೋ ಅಥವಾ ಸಾರ್ವಜನಿಕ ಸ್ಥಳವೊಂದರಲ್ಲಿ ಸಿಕ್ಕರೆ ಮುಚ್ಚಿಟ್ಟುಕೊಂಡು ಮನೆಗೆ ತರೋರೇ ಜಾಸ್ತಿ. ಕೊಡುವ ಮಾತೇ ಇಲ್ಲ ಅಂದ್ಕೊಂಡು ಅದನ್ನ ಹೇಗೆ ಬಳಸಿಕೊಳ್ಳಬಹುದು ಅಂತೆಲ್ಲ ಲೆಕ್ಕಾಚಾರ ಹಾಕ್ತಾರೆ..

ಅಂಥವ್ರ ಮಧ್ಯೆ ಕಾರವಾರದಲ್ಲಿ ಸ್ವಚ್ಛತಾ ಕಾರ್ಮಿಕರೊಬ್ಬರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಾಮಾಣಿಕತೆಯ ಪಾಠ ಮಾಡಿದ್ದಾರೆ. ಹೌದು, ಕಾರವಾರ ನಗರಸಭೆಯ ಅರುಣ್ ಹರಿಜನ್, ಮದನ್ ನಾಯ್ಕ್ ನಿತ್ಯ ಮನೆ ಮನೆಗೆ ಹೋಗಿ ಕಸ ಆಯುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕಸದ ರಾಶಿಯಲ್ಲಿ ಚಿನ್ನದ ಕಿವಿ ಓಲೆ ಪತ್ತೆ ಆಗಿತ್ತು. ಇದೀಗ ಅದನ್ನು ಮೂಲ ಮಾಲೀಕರನ್ನು ಹುಡುಕಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪ್ರಾಮಾಣಿಕತೆ ಇನ್ನೂ ಜೀವಂತ

ಎಂದಿನಂತೆ ಅರುಣ್ ಹರಿಜನ್, ಮದನ್ ನಾಯ್ಕ್ ಅನ್ನೋರು ಕಳಸವಾಡದಲ್ಲಿ ಕಸ ಸಂಗ್ರಹ ಮಾಡಿಕೊಂಡು ಹೋಗಿದ್ದರು. ಒಂದು ದಿನ ಕವಿತಾ ನಾಯ್ಕ್ ಅನ್ನೋರು ಕಸದ ಜೊತೆಗೆ ಕವರ್ ಒಂದನ್ನು ಅರಿವಿಲ್ಲದೇ ಎಸೆದು ಬಿಟ್ಟಿದ್ದರು. ಕೊನೆಗೆ ಒಂದು ದಿನ ಕವಿತಾ ತಾವು ಕಿವಿಯೋಲೆ ಹಾಕಿಟ್ಟಿದ್ದ ಕವರ್‍‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಅದು ಎಲ್ಲಿಯೂ ಪತ್ತೆ ಆಗಲಿಲ್ಲ. ಮನೆ ತುಂಬಾ ಹುಡುಕಿದರೂ ಸಿಕ್ಕಿರಲಿಲ್ಲ. ಹೀಗಾಗಿ ಎಲ್ಲೋ ಹೋಯಿತು ಎಂದು ಕವಿತಾ ನಾಯ್ಕ್ ಅದರ ಆಸೆಯನ್ನೇ ಬಿಟ್ಟುಬಿಟ್ಟಿದ್ದರು.

ಇತ್ತ ಅರುಣ್ ಹರಿಜನ್, ಮದನ್ ನಾಯ್ಕ್ ಒಂದು ದಿನ ಕಸವನ್ನು ಬೇರ್ಪಡಿಸುವಾಗ ವಿಶೇಷವಾದ ಕವರ್ ಒಂದು ಪತ್ತೆ ಆಗುತ್ತದೆ. ಅದನ್ನು ತೆರೆದು ನೋಡಿದಾಗ ಕಿಯಿಯೋಲೆ ಇರೋದು ಬೆಳಕಿಗೆ ಬರುತ್ತದೆ. ಕಿವಿಯೋಲೆ ಕಂಡು ಖುಷಿ ಪಡಲಿಲ್ಲ. ಅಯ್ಯೋ ಯಾರೋ ಕವಿಯೋಲೆಯನ್ನೂ ತಂದು ಹಾಕಿದ್ದಾರೆ ಎಂದು ಬೆಸರಿಸಿಕೊಂಡರು.

ಅದಾದ ನಂತರ ಅದು ಯಾರದ್ದಿರಬಹುದು ಎಂದು ತಮ್ಮಲ್ಲಿಯೇ ಪ್ರಶ್ನೆ ಮಾಡಿಕೊಂಡಿದ್ದಾರೆ. ಯಾರದ್ದೇ ಆಗಿರಲಿ. ಅದನ್ನು ಜೋಪಾನವಾಗಿ ಮುಟ್ಟಿಸಬೇಕು ಎಂದು ಸುರಕ್ಷಿತವಾಗಿ ಎತ್ತಿಟ್ಟಿದ್ದಾರೆ. ನಂತರ ಅದು ಯಾರದ್ದಿರಬಹುದು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಕಸ ಎಸೆಯಲು ಬರೋರನ್ನೇ ವಿಚಾರಿಸಿದ್ದಾರೆ. ಆಗ ಕವಿತಾ ನಾಯ್ಕ್ ತಮ್ಮ ಕಿವಿಯೋಲೆ ಕಳೆದುಕೊಂಡಿರುವ ವಿಚಾರ ಗೊತ್ತಾಗಿದೆ.

ತಡ ಮಾಡಲಿಲ್ಲ. ಕವಿತಾ ನಾಯ್ಕ್ ಮನೆಗೆ ಹೋಗಿ ಅದನ್ನು ಸುರಕ್ಷಿತವಾಗಿ ಮರಳಿಸಿ ಬಂದಿದ್ದಾರೆ. ಇದೀಗ ಕಿವಿತಾ ಅವರಿಗೆ ಕಿವಿಯೋಲೆಯನ್ನು ಸುರಕ್ಷಿತವಾಗಿ ಮರಳಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಅರುಣ್ ಮತ್ತು ಮದನ್ ಅವರ ಪ್ರಾಮಾಣಿಕತೆಯನ್ನು ಕೊಂಡಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಪ್ರಾಮಾಣಿಕತೆ ಮರೆಯಾಗುತ್ತಿದೆ. ಅಂಥದ್ರಲ್ಲಿ ಅರುಣ್ ಮತ್ತು ಮದನ್ ವಿಭಿನ್ನವಾಗಿ ನಿಲ್ಲುತ್ತಾರೆ. ಅಲ್ಲದೇ ತನಗೂ ಬೇಕು, ತಮ್ಮ ಮಕ್ಕಳಿಗೂ ಬೇಕು ಅಂದುಕೊಂಡು ಸಿಕ್ಕಿದ್ದೆಲ್ಲ ಬಾಚಿಕೊಳ್ಳೋರ ಮಧ್ಯೆ ಬೇರೆಯವರ ವಸ್ತುಗಳನ್ನ ಮುಟ್ಟಬಾರದು. ಅದನ್ನು ಅವರಿಗೆ ತಲುಪಿಸಬೇಕು ಎಂಬ ನೈತಿಕತೆಯ ಪಾಠ ಮಾಡಿದ ಮದನ್ ಹಾಗೂ ಅರುಣ್‌ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

PREV
Read more Articles on
click me!

Recommended Stories

ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್: ನಾಳೆ ಬೆಳಗಿನ ಜಾವ 4 ಗಂಟೆವರೆಗೂ ದೇವಿ ದರ್ಶನಕ್ಕೆ ಅವಕಾಶ, ಸಚಿವರ ಘೋಷಣೆ!
ಗದಗದಲ್ಲಿ ಭಾವೈಕ್ಯತೆಯ ಬೆಳಕು, 35 ವರ್ಷಗಳಿಂದ ಮುಸ್ಲಿಂ ಕುಟುಂಬದಿಂದ ಲಕ್ಷ್ಮೀಯ ಆರಾಧನೆ