ACB Raid: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ನ್ಯಾಯಾಲಯ ಸಿಬ್ಬಂದಿ

By Girish Goudar  |  First Published Mar 11, 2022, 9:49 AM IST

*  ವಿರಾಜಪೇಟೆ ನಗರದ ನ್ಯಾಯಾಲಯದಲ್ಲಿ ನಡೆದ ಘಟನೆ
*  ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವ್ಯಾಜ್ಯ
*  ಎಸಿಬಿಗೆ ದೂರು ಸಲ್ಲಿಸಿದ್ದ ಅರ್ಜಿದಾರ ವಂಸತ್‌ 


ವಿರಾಜಪೇಟೆ(ಮಾ.11): ನ್ಯಾಯಾಲಯದಲ್ಲಿದ್ದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಲಂಚದ(Bribe) ಬೇಡಿಕೆಯನ್ನಿಟ್ಟಿದ ನ್ಯಾಯಾಲಯದ ಸಿಬ್ಬಂದಿ ಲಂಚ ಸ್ವೀಕರಿಸುವಾಗ ಎಸಿಬಿ(ACB) ಬಲೆ ಬಿದ್ದ ಪ್ರಕರಣ ವಿರಾಜಪೇಟೆ ನಗರದಲ್ಲಿರುವ ನ್ಯಾಯಾಲಯದಲ್ಲಿ(Court) ನಡೆದಿದೆ. ವಿರಾಜಪೇಟೆ ನಗರದ ಜೆಎಂಎಫ್‌ಸಿ ನ್ಯಾಯಾಲಯದ ಸಿಬ್ಬಂದಿಯಾದ ವಿನಯ್‌ ಮತ್ತು ಲವಕುಮಾರ್‌ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಬಂಧಿತರಾದ ವ್ಯಕ್ತಿಗಳು.

ವಿರಾಜಪೇಟೆ ಸಿದ್ದಾಪುರ ಗುಹ್ಯ ಗ್ರಾಮದ ನಿವಾಸಿ ಮತ್ತು ಈ ಹಿಂದೆ ಪ್ರತಿಕೆಯೊಂದರ ವರದಿಗಾರರಾಗಿದ್ದ ವಸಂತ್‌ ಕುಮಾರ್‌ ಎಂಬವವರು ಜಿಲ್ಲೆಯ ಸ್ಥಳೀಯ ದಿನ ಪತ್ರಿಕೆಯೋಂದರಲ್ಲಿ ವರದಿಯೊಂದನ್ನು ಪ್ರಕಟಿಸಿದ್ದರು. ಪ್ರಕಟವಾದ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕೆ ಮತ್ತು ವರದಿ ಮಾಡಿದ ವರದಿಗಾರನ ಮೇಲೆ ಶ್ರೀ ಗುಹ್ಯ ಅಗಸ್ತೇಶ್ವರ ಸಹಕಾರ ಸಂಘ ನಿಯಮಿತ ಅಡಳಿತ ಮಂಡಳಿಯ ತೀರ್ಮಾನದಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಕೀಲ ಎಂ.ಎಸ್‌. ವೆಂಕಟೇಶ್‌ ಅವರು ಮಾನನಷ್ಟ ಕೇಸು(Defamation Case) ದಾಖಲು ಮಾಡಿದ್ದರು.

Tap to resize

Latest Videos

BBMP Corruption: ತ್ಯಾಜ್ಯದ ಹಣವನ್ನೂ ತಿಂದು ತೇಗಿದ ಪಾಲಿಕೆ ಭ್ರಷ್ಟರು!

ವಿರಾಜಪೇಟೆ(Virajpet) ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ನ್ಯಾಯಾಲಯವು ಸಂಸ್ಥೆಯ ಪರವಾಗಿ ಒಂದು ಲಕ್ಷದ 18 ಸಾವಿರ ರು.ಗಳನ್ನು ಪರಿಹಾರ(Compensation) ಹಣದ ರೂಪದಲ್ಲಿ ನೀಡಬೇಕು ಎಂದು ತೀರ್ಪು ನೀಡಿತ್ತು. ನ್ಯಾಯಾಲಯದ ಆದೇಶದಂತೆ ಹಣ ನೀಡಲು ಶಕ್ತವಾಗದಿದ್ದಲ್ಲಿ ವಸ್ತುಗಳನ್ನು ಜಪ್ತಿ ಮಾಡುವ ಆದೇಶವಾದ ಹಿನ್ನೆಲೆಯಲ್ಲಿ ಮನೆ ಜಪ್ತಿಗೆ ನ್ಯಾಯಾಲಯದ ಸಿಬ್ಬಂದಿ ಮುಂದಾಗಿದ್ದರು. ಜಪ್ತಿಯ ಆದೇಶಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನ ಮಾಡುತ್ತೇವೆ ಎಂದು ಅದಕ್ಕೆ ಹಣದ ಬೇಡಿಕೆಯನ್ನು ಇಟ್ಟಿದ್ದರು. ಮೊದಲು 10 ಸಾವಿರ ಹಣ ನೀಡುವಂತೆ, ನಂತರದಲ್ಲಿ 5 ಸಾವಿರ ರು. ನೀಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು ಎನ್ನಲಾಗಿದೆ.

ಅರ್ಜಿದಾರ ವಂಸತ್‌ ಅವರು ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಸಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 1-30 ಗಂಟೆಯ ವೇಳೆ ನ್ಯಾಯಾಲಯದ ಅವರಣದ ಮುಂಭಾಗದಲ್ಲಿ ನ್ಯಾಯಾಲಯದ ಸಿಬ್ಬಂದಿಗೆ ಹಣ ನೀಡುವ ಸಂದರ್ಭ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಹಣದೊಂದಿಗೆ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರ ಮೇಲೆ 7/ಎ 1988ರ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ಕ್ರಮಕೈಗೊಂಡಿದ್ದಾರೆ.

ಧಾರವಾಡದಲ್ಲಿ ಲಂಚ ಸಮೇತ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿಗಳು..!

ಧಾರವಾಡ(ಮಾ.09): ಸಣ್ಣ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ತಮ್ಮದೇ ಇಲಾಖೆಯ ಮತ್ತೊಬ್ಬ ಅಧಿಕಾರಿಯ ಮನೆಯಿಂದ ಲಂಚದ(Bribe) ಹಣವನ್ನು ಸಂಬಂಧಿ ಮೂಲಕ ಬೇರೆಡೆ ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ಅಧಿಕಾರಿಗಳು ಹಣದ ಜೊತೆಗೆ ಲಂಚಕೋರರನ್ನು ಬಂಧಿಸಿದ(Arrest) ಘಟನೆ ಮಂಗಳವಾರ ನಡೆದಿದೆ.

ಇಲ್ಲಿಯ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಕಾರ್ಯ ನಿರ್ವಾಹಕ ಕಚೇರಿಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಆಗಿರುವ ಶಿವಪ್ಪ ಸಂಗಪ್ಪ ಮಂಜಿನಾಳ ಲಂಚದ ಮೂಲಕ ಪಡೆದ ಹಣವನ್ನು ನೀರಾವರಿ ತನಿಖಾ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಪ್ರಶಾಂತ ಶಾಮರಾವ್‌ ಅವರ ಸತ್ತೂರಿನ ನಿವಾಸದಲ್ಲಿ ಇಟ್ಟಿದ್ದರು. ಮಂಗಳವಾರ ಬೆಳಗ್ಗೆ ಮಂಜಿನಾಳ ಸಹೋದರನ ಮಗ ಮಹಾಂತೇಶ ರೇವಣಪ್ಪ ಮಂಜಿನಾಳ ಮೂಲಕ ಸಾಗಿಸುವ ಸಮಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ACB Raid: ರೈತನಿಂದ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

ಶಿವಪ್ಪ ಮಂಜಿನಾಳ ಭ್ರಷ್ಟಾಚಾರ(Corruption) ನಡೆಸಿ ಅಕ್ರಮ ಹಣ ಸಂಗ್ರಹಿಸಿದ್ದು, ಮಂಗಳವಾರ ಬೇರೆ ಕಡೆಗೆ ಸಾಗಿಸಲಿದ್ದಾರೆ ಎಂಬ ಖಚಿತ ಮಾಹಿತಿ ಎಸಿಬಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದು, ಸತ್ತೂರಿನ ಪ್ರಶಾಂತ ಶಾಮರಾವ್‌ ಅವರ ಮನೆಯಿಂದ ಹೊರ ಬಂದ ಮಹಾಂತೇಶ ಮಂಜಿನಾಳ ಅವರನ್ನು ತನಿಖೆ ನಡೆಸಿದಾಗ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ.

ಒಟ್ಟು 17.80 ಲಕ್ಷ ಹಣದ(Money) ಚೀಲದೊಂದಿಗೆ ತೆರಳುತ್ತಿದ್ದ ಮಹಾಂತೇಶ ಅವರ ವಿಚಾರಣೆ ನಡೆಸಿದಾಗ, ತಮ್ಮ ಊರಾದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕಂದಗನೂರ ಗ್ರಾಮದ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. 

ತಕ್ಷಣ ಪ್ರಕರಣ ದಾಖಲಿಸಿಕೊಂಡು, ಪ್ರಶಾಂತ ಅವರ ಸತ್ತೂರಿನ ಮನೆಗೆ ತೆರಳಿ ಶೋಧ ಕಾರ್ಯ ನಡೆಸಿದಾಗ ಚೀಲದಲ್ಲಿ 16 ಲಕ್ಷ ಹಾಗೂ ಮನೆಯಲ್ಲಿ 1.80 ಲಕ್ಷ ಹಣ ಸೇರಿ ಒಟ್ಟು ರು. 17.80 ಲಕ್ಷ ಪತ್ತೆಯಾಗಿದೆ. ಬಳಿಕ ಅಕ್ರಮ ಹಣ ಮತ್ತು ಮೂವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಡಿಎಸ್ಪಿ ಮಹಾಂತೇಶ ಮಹಾಂತೇಶ ಜಿದ್ದಿ ತಿಳಿಸಿದ್ದಾರೆ.
 

click me!