ಕೊರೋನಾ ಸೋಂಕಿನಿಂದ ಒಂದೇ ದಿನ ಪತಿ ಹಾಗೂ ಪತ್ನಿ ಇಬ್ಬರೂ ಮೃತಪಟ್ಟಿದ್ದಾರೆ. ಗಂಡ ಮೃತಪಟ್ಟ ಒಂದು ಗಂಟೆಯ ಅವಧಿಯಲ್ಲಿ ಹೆಂಡತಿಯು ಮೃತಪಟ್ಟಿದ್ದಾರೆ.
ಕೋಲಾರ (ಏ.29): ಕೊರೋನಾ ಸೋಂಕಿಗೆ ಪತಿ, ಪತ್ನಿ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕೋಲಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ನಡೆದಿದೆ.
ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆ ನಿವಾಸಿಗಳಾದ ಜೆಮಿನಿ ಸ್ಟುಡಿಯೋ ಮಾಲೀಕ ರಮೇಶ್ ಹಾಗೂ ಅವರ ಪತ್ನಿ ಅನುಸೂಯ ಮೃತರು. ಮೂರು ದಿನಗಳ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಪತಿ, ಪತ್ನಿ ಇಬ್ಬರೂ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕರ್ನಾಟಕದ ಹತ್ತು ಸೇರಿ ಒಟ್ಟು 150 ಜಿಲ್ಲೆ ಲಾಕ್‌ಡೌನ್ ಮಾಡಿ: ಕೇಂದ್ರಕ್ಕೆ ತಜ್ಞ ಸಲಹೆ! ...
ಉಸಿರಾಟದ ತೊಂದರೆಯಿಂದ ಬೆಳಗ್ಗೆ ಸುಮಾರು 10 ಗಂಟೆಗೆ ಪತಿ ರಮೇಶ್ ಮೃತಪಟ್ಟರು. ವಿಷಯ ತಿಳಿದ ಪತ್ನಿ ಅನುಸೂಯಾ ಕೂಡಾ 11ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona