ಭಾರತ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಹೊರಹೊಮ್ಮುತ್ತಿದೆ ಹಾಗೂ ರೈತರ ಆದಾಯ ದುಪ್ಪಟ್ಟುಗೊಳಿಸುವಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಬೀದರ್ (ಫೆ.19): ಭಾರತ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಹೊರಹೊಮ್ಮುತ್ತಿದೆ ಹಾಗೂ ರೈತರ ಆದಾಯ ದುಪ್ಪಟ್ಟುಗೊಳಿಸುವಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಔರಾದ್ ತಾಲೂಕಿನ ದಾಬಕಾ ಮತ್ತು ಹುಲಸೂರ ಪಟ್ಟಣದಲ್ಲಿ ಆಯೋಜಿಸಲಾದ ಕೀಟನಾಶಕಗಳ ಸುರಕ್ಷಿತ ಮತ್ತು ವಿವೇಚನಾಯುಕ್ತ ಬಳಕೆ ಮತ್ತು ತರಕಾರಿ ಬೆಳೆಗಳಿಗೆ ಬೆಳೆ ರಕ್ಷಣೆಗಾಗಿ ಹೊಸ ಪೀಳಿಗೆಯ ಸೂತ್ರಿಕರಣ ಅನುಷ್ಠಾನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿಶ್ವದ ಮಾರುಕಟ್ಟೆಯಲ್ಲಿ ಯೂರಿಯಾ, ಡಿಎಪಿ ಬೆಲೆ ಹೆಚ್ಚಳವಾದರೂ ನಮ್ಮ ಮೋದಿ ಸರ್ಕಾರದಿಂದ 2400 ರು. ಇರುವ ಡಿಎಪಿ 1350ಕ್ಕೆ ಹಾಗೂ 2000 ರು. ಇರುವ ಯೂರಿಯಾ 262 ರು.ಗೆ ನೀಡಲಾಗುತ್ತಿದೆ.
ಇದರ ಜೊತೆಗೆ ಪಿಎಮ್ ಕಿಸಾನ್ ಸಮ್ಮಾನ ಯೋಜನೆಯಡಿ ಪ್ರತಿ ವರ್ಷಕ್ಕೆ 6000 ರು. ನೀಡುತ್ತಿದ್ದೇವೆ. ಫಸಲ್ ಬಿಮಾ ಯೊಜನೆಯಂತು ರೈತರಿಗೆ ಆಪತ್ಭಾಂಧವವಾಗಿದೆ. ಈ ಎಲ್ಲಾ ಅನುದಾನ, ಪ್ರೋತ್ಸಾಹಧನ ಒಬ್ಬನೆ ದಲ್ಲಾಳಿಗಳಿಗೆ ಒಂದು ರು. ನೀಡದೆ, ನೇರವಾಗಿ ನಿಮ್ಮ ಖಾತೆಗೆ ಜಮೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಕೀಟನಾಶಕಗಳ ಅಗತ್ಯ ಬಳಕೆ ಹಾಗೂ ಹೆಚ್ಚಿನ ಮಟ್ಟದಲ್ಲಿ ಸಾವಯುವ ಗೊಬ್ಬರ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡುವಂತೆ ಕೋರಿದರು, ಸಾವಯುವ ಕೃಷಿಯಿಂದ ರೈತರು ಹೆಚ್ಚಿನ ಆದಾಯ ರೈತರಿಗೆ ಆದಾಯ ಸಿಗುತ್ತದೆ ಎಂದು ತಿಳಿಸಿದರು.
undefined
ಯುಗಾದಿ ನಂತರ ರಾಜ್ಯದಲ್ಲಿ ಧಾರ್ಮಿಕ ಮುಖಂಡನ ಸಾವಾಗಲಿದ್ದು, ಒಳ್ಳೆಯ ಮಳೆ-ಬೆಳೆಯಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ!
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಜೀವನ ಹಿಂಡುತ್ತಿದೆ. ಪಿಎಮ್ ಕಿಸಾನ್ ದುಡ್ಡು ನಿಲ್ಲಿಸಿದೆ, ನಮ್ಮ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲಾ, ಕೇವಲ ನಡೆದಂತೆ ನುಡಿದಿದ್ದೇವೆ ಎಂದು ಸುಳ್ಳು ಹೇಳುತ್ತಾ ತಿರುಗಾಡುತ್ತಿದೆ, ಅಭಿವೃದ್ದಿ ಕೆಲಸಗಳು ಪ್ರಾರಂಭ ಮಾಡಿಲ್ಲಾ, ಬೀದರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಯಾವೂದೇ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲಾ, ಆದರೆ ನಮ್ಮ ಕೇಂದ್ರ ಸರ್ಕಾರದಿಂದ ಹತ್ತಾರು ಯೋಜನೆಗಳ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.
ಬೀದರ ಜಿಲ್ಲೆಗೆ ಉಸ್ತುವಾರಿ ಸಚಿವರು ಸಿಕ್ಕರು ಯಾವುದೇ ಉಪಯೋಗವಾಗುತ್ತಿಲ್ಲಾ, ರಾಜ್ಯದಿಂದ ಬೀದರ ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ, ರಾಜ್ಯ ಮಟ್ಟದಲ್ಲಿ ಇವರ ವರ್ಚಸ್ಸು ಏನಿದೆ ಎಂಬುದು ಇವರು ಬೀದರ ಜಿಲ್ಲೆಗೆ ತಂದ ಅನುದಾನದಿಂದ ಗೊತ್ತಾಗುತ್ತಿದೆ ಎಂದು ತಿಳಿಸಿ, ಖಂಡ್ರೆ ಕಾರ್ಯವೈಖರಿ ಕುರಿತು ಹರಿಹಾಯ್ದರು, ಮೇಲಿಂದ ನನ್ನಂತ ಒಬ್ಬ ರೈತನ ಮಗ ಕೇಂದ್ರದಲ್ಲಿ ಮಂತ್ರಿಯಾಗಿರುವುದು ಇವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲಾ, ಕಾರಣ ಇವರಿಗೆ ಬಡವರ ಮಕ್ಕಳು ಬೆಳೆಯುವುದು ಇಷ್ಟವಿಲ್ಲ ಎಂದರು.
ಭವಿಷ್ಯದಲ್ಲಿ ಬಡವರಿಗಾಗಿ ಮತ್ತಷ್ಟು ಗ್ಯಾರಂಟಿ ಯೋಜನೆ: ಸಚಿವ ಡಿ.ಸುಧಾಕರ್
ಈ ಸಂದರ್ಭದಲ್ಲಿ ಐಪಿಎಫ್‌ಟಿ ನಿರ್ದೇಶಕ ಡಾ.ಮೋಹನ ಕೃಷ್ಣಾರೆಡ್ಡಿ, ಫಾರ್ಮಲೇಷನ್ ಡಿವಿಜನ್ ಮುಖ್ಯಸ್ಥ ಡಾ. ಅಮರಿಷ್ ಅಗರವಾಲ್, ವಿಜ್ಞಾನಿಗಳಾದ ಡಾ. ಶುಭಮ್ ಯಾದವ, ಮಂಗೇಶ ಪಾಂಡೆ, ರೈತ ಮುಖಂಡ ಪ್ರಶಾಂತ ಹೊಳಸಮುದ್ರ, ಬಿಜೆಪಿ ಮುಖಂಡರಾದ ಸುಧೀರ ಕಾಡಾದಿ, ಅನಿಲ್ ಭೂಸಾರೆ, ಅಶೋಕ ವಕಾರೆ, ರಾಜಹಂಶ ಶೇಟಕಾರ, ರಮೇಶ ಪಾಟೀಲ್, ನೀಖಿಲ್ ಜಾಧವ, ಸಿದ್ರಾಮ ಬಾರಾಳೆ, ಸತಿಷ ಶಿಂಧೆ ಹಾಗೂ ಇತರೆ ಎಫ.ಪಿ.ಓಗಳ ಮುಖ್ಯಸ್ಥರು ಉಪಸ್ಥಿತರಿದ್ದರು.