ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಪ್ರತಿವರ್ಷ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂ ಹರಿದುಬರುತ್ತಿದೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲು ಕೋಟಿ ಕೋಟಿ ರೂಪಾಯಿ ಹಣ ಗ್ರಾಮೀಣ ಭಾಗದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಕೊಟ್ಟು ಹೊಟ್ಟೆ ತುಂಬಿಸಲು ಬರುತ್ತಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಮೇ.25): ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಪ್ರತಿವರ್ಷ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂ ಹರಿದುಬರುತ್ತಿದೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲು ಕೋಟಿ ಕೋಟಿ ರೂಪಾಯಿ ಹಣ ಗ್ರಾಮೀಣ ಭಾಗದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಕೊಟ್ಟು ಹೊಟ್ಟೆ ತುಂಬಿಸಲು ಬರುತ್ತಿದೆ. ಆದ್ರೆ ನರೇಗ ಗ್ರಾಮ ಪಂಚಾಯ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಪಿಡಿಓಯಿಂದ ಹಿಡಿದು ಜಿಲ್ಲಾ ಪಂಚಾಯ್ತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರೆಗು ಪ್ರತಿ ಹಂತದಲ್ಲು ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಆಡಿಟ್‌ಗಳಲ್ಲೇ ದಾಖಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ನಡೆದಿರುವ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆ ಇಲ್ಲಿದೆ.
ಸೋಷಿಯಲ್ ಆಡಿಟ್‌ನಲ್ಲಿ ಬಯಲಾಯ್ತು ಕೋಟಿ ಕೋಟಿ ಹಗರಣ: ದಾವಣಗೆರೆ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಧೃಡವಾಗಿದೆ. ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕೇಳಿದ್ರೆ ಎಂತವರು ಬೆಚ್ಚಿಬೀಳಿಸುತ್ತಿದೆ. ದಾವಣಗೆರೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 2017-18 ರಿಂದ 2021 -22 ರವರೆಗು 5114 ಪ್ರಕರಣಗಳಲ್ಲಿ 23.60 ಕೋಟಿ ರೂ ಗಳ ಹಣ ದುರುಪಯೋಗವಾಗಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನಾ ವರದಿ ನೀಡಿದೆ. ಅದರಲ್ಲು ಜಗಳೂರು ತಾಲ್ಲೂಕಿನ 22 ಪಂಚಾಯ್ತಿಗಳಲ್ಲಿ 3581 ಪ್ರಕರಣಗಳಲ್ಲಿ 20.71 ಕೋಟಿ ಭ್ರಷ್ಟಾಚಾರ ನಡೆದಿರುವುದು ಕೂಲಿ ಕಾರ್ಮಿಕರ ಹಣ ಅಧಿಕಾರಿಗಳ ಜೇಬು ಸೇರುತ್ತಿರುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ.
Davanagere Crime: ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಕಾರಣ?
ಇಡೀ ಜಿಲ್ಲೆಯ ನರೇಗ ಕಾಮಗಾರಿ ಭ್ರಷ್ಟಾಚಾರದಲ್ಲಿ ಜಗಳೂರಿನದ್ದೇ ಸಿಂಹಪಾಲು: ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ ನ್ಯಾಮತಿ, ಚನ್ನಗಿರಿ ಸೇರಿ ಐದು ತಾಲ್ಲೂಕಿಗಳಲ್ಲಿ ಇಲ್ಲದ ಅಕ್ರಮ ಜಗಳೂರಿನಲ್ಲೇ ನಡೆಯುತ್ತಿದೆ. ಜಗಳೂರು ರಾಜ್ಯದ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಆದ್ರು ಜಗಳೂರು ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರ ಹಣ ದುರಪಯೋಗವಾಗುತ್ತಿರುವುದಕ್ಕೆ ಯಾವುದೇ ಬ್ರೇಕ್ ಇಲ್ಲ. ಅಲ್ಲಿನ 22 ಗ್ರಾಮ ಪಂಚಾಯ್ತಿಗಳಲ್ಲಿ ಅಲ್ಲಿನ ಪಿಡಿಓ ಗಳೆ ಗ್ರಾಮೀಣಾಭಿವೃದ್ಧಿ ಅಧಿಕಾರಿ ಅಕ್ರಮದ ರೂವಾರಿಗಳಾಗಿದ್ದು, ಒಂದೊಂದು ಪಂಚಾಯ್ತಿಯಲ್ಲಿ ಕೋಟಿ ಕೋಟಿ ಹಣ ದುರಪಯೋಗವಾಗಿದೆ. 20177- ರಿಂದ 2022 ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ನೀಡಿರುವ ಹಣ ದುರುಪಯೋಗದ ಪಟ್ಟಿ ಇಲ್ಲಿದೆ ನೋಡಿ..
ಜಗಳೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿರುವ ಕೋಟಿ ಕೋಟಿ ಹಗರಣ
ಬಿಸ್ತುವಳ್ಳಿ ಗ್ರಾಮ ಪಂಚಾಯ್ತ್ -- 1.79 ಕೋಟಿ
ದೇವಿಕೆರೆ ಪಂಚಾಯ್ತ್ -- 1.65 ಕೋಟಿ
ದೊಣ್ಣೆಹಳ್ಳಿ ಪಂಚಾಯತ್ -- 2.63 ಕೋಟಿ
ಗುರುಸಿದ್ಧಾಪುರ ಪಂಚಾಯತ್ - 2. 7 ಕೋಟಿ
ಗುತ್ತಿದುರ್ಗ ಪಂಚಾಯತ್ --1.21 ಕೋಟಿ
ಹಿರೇ ಮಲ್ಲನಹೊಳೆ ಪಂಚಾಯಿತಿ -4.31 ಕೋಟಿ
ಹೊಸಕೆರೆ ಪಂಚಾಯತಿ - 1.11 ಕೋಟಿ
ಕ್ಯಾಸನಹಳ್ಳಿ ಪಂಚಾಯಿತಿ --1.74 ಕೋಟಿ
ಗ್ರಾಮಸ್ಥರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಬಸ್ ಚಾಲನೆ ಮಾಡಿಕೊಂಡು ಬಂದ ರೇಣುಕಾಚಾರ್ಯ
ಹೀಗೆ 22 ಪಂಚಾಯ್ತಿಗಳಲ್ಲಿ23.48 ಕೋಟಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸಾಮಾಜಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಬಯಲಾದ ಅಕ್ರಮದಲ್ಲಿ ಪಿಡಿಓಗಳೇ ರೂವಾರಿಗಳು. ಈ ಭ್ರಷ್ಟಾಚಾರದಲ್ಲಿ ಪ್ರಮುಖ ಪಾತ್ರದಾರಿಗಳೇ ಪಂಚಾಯ್ತಿ ಪಿಡಿಗಳು. ಬಹುತೇಕ ಪಂಚಾಯ್ತಿಗಳಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ, ಇಲ್ಲವೇ ಕೂಲಿಕಾರ್ಮಿಕರ ಆಧಾರ್ ಕಾರ್ಡ್ ಬಳಸಿಕೊಂಡು ಯಂತ್ರೋಪಕರಣಗಳನ್ನ ಬಳಸಿ ಬಿಲ್ ಮಾಡಿಸಿಕೊಂಡು ಸಾಕಷ್ಟು ಉದಾಹರಣೆಗಳಿವೆ. ಸಾಮಾಜಿಕ ಲೆಕ್ಕ ಪರಿಶೋಧನಾ ವರದಿ ಆಧರಿಸಿ ಇಬ್ಬರು ಪಿಡಿಓಗಳ ಅಕ್ರಮ ಸಾಬೀತಾಗಿದ್ದು ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಪ್ರಸ್ತುತ 11 ಜನ ಪಿಡಿಓಗಳ ಮೇಲೆ ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.