ಬೆಂಗಳೂರು: 10 ದಿನದಲ್ಲಿ 46000 ಮಂದಿಗೆ ಕೊರೋನಾ ಲಸಿಕೆ

By Kannadaprabha News  |  First Published Jan 26, 2021, 7:28 AM IST

ಬೆಂಗಳೂರಿನಲ್ಲಿ ಸೋಮವಾರ 7622 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ| ಹತ್ತು ದಿನ ಪೂರೈಸಿದ ಕೋವಿಡ್‌ ಲಸಿಕೆ ಅಭಿಯಾನ| ಒಟ್ಟು 46,606 ಮಂದಿಗೆ ಲಸಿಕೆ|


ಬೆಂಗಳೂರು(ಜ.26): ನಗರದಲ್ಲಿ ಸೋಮವಾರ 221 ಕೋವಿಡ್‌ ಲಸಿಕಾ ಕೇಂದ್ರದಲ್ಲಿ 7,622 (ಶೇ.38) ಮಂದಿ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ನಗರದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಹತ್ತು ದಿನ ಪೂರೈಸಿದ್ದು, ಒಟ್ಟು 46,606 ಮಂದಿಗೆ ಲಸಿಕೆ ನೀಡಲಾಗಿದೆ.

ಸೋಮವಾರ ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಯ 47 ಹಾಗೂ ಖಾಸಗಿ ಆಸ್ಪತ್ರೆಯ 174 ಲಸಿಕಾ ಕೇಂದ್ರದಲ್ಲಿ 19,457 ಆರೋಗ್ಯ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಹಾಕುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಸರ್ಕಾರಿ ಮತ್ತು ಬಿಬಿಎಂಪಿ ಆಸ್ಪತ್ರೆಯ 1,560 ಹಾಗೂ ಖಾಸಗಿ ಆಸ್ಪತ್ರೆಯ 6,062 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ.

Latest Videos

undefined

ಬ್ರಿಟನ್‌ ವೈರಸ್‌ ಬಗ್ಗೆ ಯಾವುದೇ ಆತಂಕ ಇಲ್ಲ: ಸಚಿವ ಸುಧಾಕರ್‌

ದಿನಾಂಕ ಗುರಿ ಲಸಿಕೆ ಪಡೆದವರು ಶೇಕಡ

ಜ.16 816 497 60
ಜ.17 6,277 3,569 58
ಜ.18 20,226 8,489 42
ಜ.19 10,343 3,978 38
ಜ.20 6,836 3,803 56
ಜ.21 10,469 5,410 52
ಜ.22 15,562 7,590 49
ಜ.23 10,065 4,568 45
ಜ.24 3,049 1,080 35
ಜ.25 19,457 7,622 28
ಒಟ್ಟು 1,03,100 46,606 45.20
 

click me!