ಬೆಚ್ಚಿ ಬೀಳಿಸುತ್ತಿದೆ ಬೆಳಗಾವಿಯ ಸೋಂಕಿತ ಗರ್ಭಿಣಿ P-974 ಟ್ರಾವೆಲ್ ಹಿಸ್ಟರಿ| ಗರ್ಭಿಣಿ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 45 ಜನರಿಗೆ ಕ್ವಾರಂಟೈನ್| ಮೇ 5ರಂದು ಸೇವಾ ಸಿಂಧು ಇ ಪಾಸ್ ಪಡೆಯದೇ ಬೆಳಗಾವಿಗೆ ಎಂಟ್ರಿ ಕೊಟ್ಟಿದ್ದ ಗರ್ಭಿಣಿ| ಮೇ 5 ರಿಂದ ಮೇ 11ರವರೆಗೆ 6 ದಿನಗಳ ಕಾಲ ಬಡಾವಣೆಯ ವಿವಿಧೆಡೆ ಓಡಾಡಿದ್ದ ಮಾಹಿತಿ|
ಬೆಳಗಾವಿ(ಮೇ.15): ಮುಂಬೈನ ಧಾರಾವಿ ಪ್ರದೇಶದಿಂದ ಮರಳಿದ್ದ ಗರ್ಭಿಣಿಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಹೌದು, ಈಗಾಗಲೇ ಬೆಳಗಾವಿಯ ಸೋಂಕಿತ ಗರ್ಭಿಣಿಯ(P-974) ಸಂಪರ್ಕದಲ್ಲಿದ್ದ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 45 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.
ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 10 ಜನ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 35 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಗರ್ಭಿಣಿ ಮೇ 5ರಂದು ಸೇವಾ ಸಿಂಧು ಇ ಪಾಸ್ ಪಡೆಯದೇ ಬೆಳಗಾವಿಗೆ ಆಗಮಿಸಿದ್ದರು. ಮೇ 5 ರಿಂದ ಮೇ 11ರವರೆಗೆ 6 ದಿನಗಳ ಕಾಲ ಬಡಾವಣೆಯ ವಿವಿಧೆಡೆ ಓಡಾಡಿದ್ದಾಳೆ.
undefined
ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ
ಬಳಿಕ ಸೋಂಕಿತ ಗರ್ಭಿಣಿ ಚೆಕ್‌ಅಪ್‌ಗೆಂದು ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಮುಂಬೈನಿಂದ ಬಂದಿದ್ದಳೆಂಬ ಪ್ರಾಥಮಿಕ ಮಾಹಿತಿ ಹಿನ್ನೆಲೆಯಲ್ಲಿ ಕೋವಿಡ್-19 ಟೆಸ್ಟ್ ಮಾಡಿಸಿಕೊಂಡು ಬರುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಬಳಿಕ ಗರ್ಭಿಣಿ ಅಲ್ಲಿಂದ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ನಾರ್ಮಲ್ ಚೆಕ್‌ಅಪ್ ಮಾಡಿಸಿ ಮನೆಗೆ ತೆರಳಿದ್ದರು.
ಗರ್ಭಿಣಿ ಕುಟುಂಬಸ್ಥರ ಮಾಹಿತಿ ಮೇರೆಗೆ ಸಂಶಯಗೊಂಡ ಆಸ್ಪತ್ರೆಯ ಸಿಬ್ಬಂದಿ ಮನೆಗೆ ತೆರಳಿದ್ದ ಗರ್ಭಿಣಿಯನ್ನು ಮತ್ತೆ ಆಸ್ಪತ್ರೆಗೆ ಕರೆಯಿಸಿ ಕೋವಿಡ್- 19 ಟೆಸ್ಟ್ ಮಾಡಿದ್ದರು. ಗರ್ಭಿಣಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ನಿನ್ನೆ(ಗುರುವಾರ) ಈ ಬಂದ ವರದಿ ಬಂದಿದ್ದು ಗರ್ಭಿಣಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಮಹಿಳೆಯ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್‌ಗೆ ಹಾಕಲಾಗಿದೆ.
ಇ-ಪಾಸ್ ಪಡೆಯದೇ ಮುಂಬೈನಿಂದ ಬೆಳಗಾವಿಗೆ ಬಂದ ಹಿನ್ನಲೆಯಲ್ಲಿ ಗರ್ಭಿಣಿಯ ಪತಿ, ಸಹೋದರ, ಕಾರು ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ. ಈ ಸಂಬಂಧ ಬೆಳಗಾವಿ ನಗರದ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮತ್ತ ಇನ್ಯಾರು ಸಂಪರ್ಕಕ್ಕೆ ಬಂದಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.