ಇಸ್ಕಾನ್‌ನಲ್ಲಿ ಜನರಿಗೆ ಪ್ರವೇಶ ನಿಷೇಧ

Kannadaprabha News   | Asianet News
Published : Mar 18, 2020, 10:10 AM IST
ಇಸ್ಕಾನ್‌ನಲ್ಲಿ ಜನರಿಗೆ ಪ್ರವೇಶ ನಿಷೇಧ

ಸಾರಾಂಶ

ರಾಜ್ಯದಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿರುವ ನಿಟ್ಟಿನಲ್ಲಿ  ವಿವಿಧ ದೇಗುಲಗಳ ಪ್ರವೇಶ ನಿಷೇಧಿಸಲಾಗಿದೆ. ಇಸ್ಕಾನ್ ದೇಗುಲದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 

ಬೆಂಗಳೂರು [ಮಾ.18]:  ಪ್ರಪಂಚವನ್ನು ಭಯಭೀತಗೊಳಿಸಿರುವ ಕೊರೋನಾ ವೈರಸ್‌ ಸೋಂಕು ದೇಶ ಹಾಗೂ ರಾಜ್ಯದಲ್ಲೂ ಕಂಡುಬಂದಿರುವುದರಿಂದ ಪ್ರಖ್ಯಾತ ಇಸ್ಕಾನ್‌ ಮಂದಿರದಲ್ಲಿ ಮಾ.18ರಿಂದ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.

ಬೆಂಗಳೂರಿನ ಇಸ್ಕಾನ್‌ ರಾಧಾಕೃಷ್ಣ ಮಂದಿರಕ್ಕೆ ನೂರಾರು ಜನರು ಆಗಮಿಸುತ್ತಾರೆ. ಈ ಪೈಕಿ ವಿದೇಶಿಯರೂ ಇರುತ್ತಾರೆ. ಪ್ರಸ್ತುತ ಕೊರೋನಾ ವೈರಸ್‌ ಸಾಂಕ್ರಾಮಿಕವಾಗಿ ವ್ಯಾಪಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮಂದಿರಕ್ಕೆ ಜನರ ಪ್ರವೇಶ ರದ್ದು ಮಾಡಲಾಗಿದೆ.

ರಾಜಾಜಿನಗರದ ಹರೇ ಕೃಷ್ಣಗಿರಿಯಲ್ಲಿರುವ ಇಸ್ಕಾನ್‌ ರಾಧಾಕೃಷ್ಣ ಮಂದಿರ ಮತ್ತು ಕನಕಪುರ ರಸ್ತೆಯಲ್ಲಿರುವ ಇಸ್ಕಾನ್‌ ವೈಕುಂಠ ಗಿರಿಮಂದಿರಗಳನ್ನು ಮಾ.18ರ ಮುಂಜಾನೆಯಿಂದ ಮುಂದಿನ ಸೂಚನೆ ನೀಡುವವರೆಗೂ ತಾತ್ಕಾಲಿಕವಾಗಿ ಭಕ್ತರು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಆದರೆ, ದೇವಸ್ಥಾನದಲ್ಲಿ ಭಗವಂತನಿಗೆ ಧಾರ್ಮಿಕ ಕೈಂಕರ್ಯಗಳು ಆಶ್ರಮದ ಅರ್ಚಕರಿಂದ ಖಾಸಗಿಯಾಗಿ ನೆರವೇರುತ್ತವೆ. ಇದರೊಂದಿಗೆ ಆಶ್ರಮದ ಭಕ್ತರು ಲೋಕಕಲ್ಯಾಣಕ್ಕಾಗಿ ಭಜನೆ ಮತ್ತು ಕೀರ್ತನೆ ಸೇವೆ ಮುಂದುವರೆಸುತ್ತಾರೆ. ಭಕ್ತಾದಿಗಳು ಮಂದಿರದ ಅಧಿಕೃತ ವೆಬ್‌ಸೈಟ್‌ ಅಥವಾ ಇಸ್ಕಾನ್‌ ಆನ್‌ಲೈನ್‌ ವೇದಿಕೆಗಳಿಂದ ನಿತ್ಯ ದರ್ಶನ ಪಡೆಯಹುದಾಗಿದೆ.

ಕೊರೋನಾ ಆಸ್ಪತ್ರೆಗೆ ಸುಧಾಮೂರ್ತಿ ನೆರವು : ಶಿವಾಜಿನಗರ ಬಳಿ ನಿರ್ಮಾಣ.

ವಿಶೇಷ ಪೂಜೆ ಮತ್ತು ಸೇವೆಯ ಮುಂಗಡ ನೋಂದಣಿಯು ನಿರ್ದಿಷ್ಟಸಂಖ್ಯೆಯಲ್ಲಿ ಮುಂದುವರೆಯಲಿದೆ. ಆಡಳಿತ ಮಂಡಳಿಯ ಆಹ್ವಾನಿತರು ಮಾತ್ರ ಈ ಪೂಜೆಗಳಲ್ಲಿ ಪಾಲ್ಗೊಳ್ಳಬಹುದು. ಈ ಕ್ರಮಗಳಿಂದ ಮಂದಿರಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಶೇ.98ರಷ್ಟುಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಇಸ್ಕಾನ್‌ ಪ್ರಕಟಣೆ ತಿಳಿಸಿದೆ.

ಭಕ್ತರ ಸಂಖ್ಯೆಯೂ ಇಳಿಮುಖ

ಕೊರೋನಾ ಸೋಂಕು ಭೀತಿಯಿಂದ ಜನರು ದೇವಾಲಯಗಳತ್ತಲೂ ಮುಖಮಾಡುತ್ತಿಲ್ಲ. ಪ್ರತಿ ಮುಂಜಾನೆಯಿಂದ ಸಂಜೆಯವರೆಗೆ ದೇವಾಲಯಗಳಲ್ಲಿ ಜನ ಜಂಗುಳಿ ಇರುತ್ತಿತ್ತು. ಆದರೆ, ರಾಜ್ಯದಲ್ಲಿ ಕೊರೋನಾ ಹರಡುತ್ತಿರುವುದರಿಂದ ದೇವರ ದರ್ಶನ ಪಡೆಯಲು ಆಗಮಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಬೆಂಗಳೂರು ನಗರದ ಬಹುತೇಕ ದೇವಾಲಯಗಳಿಗೆ ಭಕ್ತರು ಭೇಟಿ ನೀಡುತ್ತಿಲ್ಲ. ಕೆಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಉತ್ಸವ, ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನಗಳನ್ನು ರದ್ದುಪಡಿಸಲಾಗಿದೆ. ಆದರೆ, ಪ್ರತಿನಿತ್ಯ ಸಾಮಾನ್ಯ ದಿನಗಳಂತೆ ಪೂಜೆ ನೆರವೇರಿರುತ್ತಿವೆ. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಲ್ಲೇಶ್ವರ 14ನೇ ಅಡ್ಡರಸ್ತೆ (ಸಂಪಿಗೆ ರಸ್ತೆ)ಯಲ್ಲಿರುವ ಶ್ರೀ ಸಾಯಿ ಮಂದಿರವನ್ನು ಮಾ.19ರಂದು ಮುಚ್ಚಲಾಗುತ್ತಿದೆ. ಭಕ್ತರು ಸಹಕರಿಸಬೇಕು ಎಂದು ಶ್ರೀ ಸಾಯಿ ಮಂಡಳಿಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC