ಹಾವೇರಿ: ಶಿಗ್ಗಾಂವಿ ತಹಸೀಲ್ದಾರ್‌ಗೆ ಕೊರೋನಾ, ಕಚೇರಿ ಸೀಲ್‌ಡೌನ್‌

By Kannadaprabha NewsFirst Published Jul 19, 2020, 8:21 AM IST
Highlights

ಮುಂದಿನ ಆದೇ​ಶ​ದ ವರೆಗೆ ಕಚೇರಿ ಬಂದ್‌| ಹಾವೇರಿ ಜಿಲ್ಲೆಯ ಶಿಗ್ಗಾಂಪಿ ಪಟ್ಟಣ| ಸವಣೂರ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಶಿಗ್ಗಾಂವಿ ತಾಲೂಕಿನ ಪ್ರಭಾರಿ ಜವಾಬ್ದಾರಿ| 

ಶಿಗ್ಗಾಂವಿ(ಜು.19): ತಹಸೀಲ್ದಾರ್‌ಗೆ ಕೊರೋನಾ ಸೋಂಕು ದೃಢ​ಪ​ಟ್ಟಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅವರನ್ನು ಸೇರಿಸಲಾಗಿದ್ದು, ಕಾರ್ಯಾಲಯವನ್ನು ಸೀಲ್‌ಡೌನ್‌ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ತಹಶೀಲ್ದಾರ ಕಚೇರಿಯ ಸಿಬ್ಬಂದಿಗೆ ಮುಂದಿನ ಆದೇಶದವರೆಗೆ ರಜೆ ನೀಡಲಾಗಿದ್ದು, ಸವಣೂರ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಶಿಗ್ಗಾಂವಿ ತಾಲೂಕಿನ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರದಿಂದಲೇ ಅವರು ಪ್ರಭಾರಿ ತಹಸೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಾವೇರಿ: ಕೊರೋನಾ ಮಧ್ಯೆ ಜಿಲ್ಲೆಯಲ್ಲಿ ಡೆಂಘೀ ಹಾವಳಿ, ಹೆಚ್ಚುತ್ತಿದೆ ಸಾಂಕ್ರಾಮಿಕ ರೋಗ

ಸವ​ಣೂ​ರು ತಹಸೀಲ್ದಾರರು ಪ್ರತಿದಿನ ಮಧ್ಯಾಹ್ನ 3ರಿಂದ ಶಿಗ್ಗಾಂವಿಯ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಮತ್ತು ಕುಂದುಕೊರತೆಗಳನ್ನು ಸ್ವೀಕರಿಸುತ್ತಾ​ರೆ. ತಹಸೀಲ್ದಾರ್‌ ಕಚೇರಿಯನ್ನು ನಿಯಮಾನುಸಾರವಾಗಿ ಸ್ಯಾನಿಟೈಸ್‌ ಮಾಡಲಾಗಿದ್ದು, ಕಚೇರಿಯ ದ್ವಾರಕ್ಕೆ ಬೇಲಿ ಹಾಕಿ ಬಂದ್‌ ಮಾಡ​ಲಾ​ಗಿ​ದೆ.
 

click me!