ಬಳ್ಳಾರಿ: ಸಚಿವ ಆನಂದ್‌ ಸಿಂಗ್‌ಗೂ ಕೊರೋನಾ ದೃಢ

By Suvarna News  |  First Published Jul 26, 2020, 10:01 AM IST

ಸ್ವಯಂ ಪ್ರೇರಿತರಾಗಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್‌| ಸಚಿವರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲದಿದ್ದರೂ ಕೊರೋನಾ ಧೃಡ| ಮೊನ್ನೆಯಷ್ಟೇ ಸಚಿವ ಆನಂದ್‌ ಸಿಂಗ್ ಕಾರು ಚಾಲಕನಿಗೂ ಕೊರೋನಾ ಧೃಡಪಟ್ಟಿತ್ತು|


ಬಳ್ಳಾರಿ(ಜು.26): ಮಹಾಮಾರಿ ಕೊರೋನಾ ವೈರಸ್‌ನಿಂದ ಪ್ರವಾಸೋಧ್ಯಮ ಸಚಿವ ಸಿ. ಟಿ.ರವಿ ಅವರು ಗುಣಮುಖರಾದ ಬೆನ್ನಲ್ಲೇ ಮತ್ತೋರ್ವ ಸಚಿವರಿಗೆ ಡೆಡ್ಲಿ ಕೋವಿಡ್‌ ವೈರಸ್‌ ವಕ್ಕರಿಸಿದೆ. ಹೌದು, ಅರಣ್ಯ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ ಅವರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ.  

"

Tap to resize

Latest Videos

ಶುಕ್ರವಾರ ಸ್ವಯಂ ಪ್ರೇರಿತರಾಗಿ ಟೆಸ್ಟ್ ಮಾಡಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್‌ಗೆ ನಿನ್ನೆ(ಶನಿವಾರ) ರಾತ್ರಿ ಕೊರೋನಾ ಧೃಡವಾಗಿರುವ ಬಗ್ಗೆ ವರದಿ ಬಂದಿದೆ. ಸಚಿವರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲದಿದ್ದರೂ ಕೊರೋನಾ ಧೃಡಪಟ್ಟಿದೆ. 

ವೈದ್ಯ ಗಿರಿಧರ್‌ ಕಜೆ ಬಳಿ ಆಯುರ್ವೇದ ಮೆಡಿಸಿನ್‌ ತೆಗೆದುಕೊಂಡೆ: ಕೊರೋನಾ ಗೆದ್ದ ಸಚಿವ ಸಿ. ಟಿ. ರವಿ!

ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಸಚಿವ ಆನಂದ್‌ ಸಿಂಗ್‌ ಅವರಿಗೆ ಜಿಲ್ಲೆಯ ಹೊಸಪೇಟೆ ನಗರದರಲ್ಲಿರುವ ಅವರ ನಿವಾಸದಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಸಚಿವ ಆನಂದ್‌ ಸಿಂಗ್ ಆರೋಗ್ಯವಾಗಿದ್ದಾರೆ, ಪಾಸಿಟಿವ್ ಬಂದಿರುವುದು ನಿಜ ಅವರ ಕುಟುಂಬ ಮೂಲಗಳ ಸ್ಪಷ್ಟನೆ ನೀಡಿವೆ. ಮೊನ್ನೆಯಷ್ಟೇ  ಸಚಿವ ಆನಂದ್‌ ಸಿಂಗ್ ಅವರ ಕಾರು ಚಾಲಕನಿಗೂ ಕೊರೋನಾ ಧೃಡಪಟ್ಟಿತ್ತು. 

click me!