ಕೋವಿಡ್ ತೀವ್ರಗೊಳ್ಳುತ್ತಿರುವುದರಿಂದ ಬೆಂಗಳೂರು ನಗರ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಇಲಾಖೆಗಳ 55 ವರ್ಷದೊಳಗಿನ ಶೇ.75ರಷ್ಟುಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು(ಜು.26): ಕೋವಿಡ್ ತೀವ್ರಗೊಳ್ಳುತ್ತಿರುವುದರಿಂದ ಬೆಂಗಳೂರು ನಗರ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಇಲಾಖೆಗಳ 55 ವರ್ಷದೊಳಗಿನ ಶೇ.75ರಷ್ಟುಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು (ಗರ್ಭಿಣಿ, ಬಾಣಂತಿ, ಅಂಗವಿಕಲರನ್ನು ಬಿಟ್ಟು) ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಗೃಹ, ಆರ್ಥಿಕ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ (ವಿಪತ್ತು ನಿರ್ವಹಣೆ), ಸಾರಿಗೆ ಆಯುಕ್ತಾಲಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳಲ್ಲಿ ಶೇ.25ರಷ್ಟುಸಿಬ್ಬಂದಿಯನ್ನು ಮಾತ್ರ ಇಲಾಖೆಗಳ ಕಾರ್ಯಗಳಿಗೆ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!
ಉಳಿದ ಶೇ.75ರಷ್ಟುಅಧಿಕಾರಿಗಳು ಮತ್ತು ಸಿಬ್ಬಂದಿ ಮಾಹಿತಿಯನ್ನು ಬಿಬಿಎಂಪಿ ಆಯುಕ್ತರಿಗೆ ಇ-ಮೇಲ್ ಮೂಲಕ ಜುಲೈ 28ರ ಸಂಜೆ 5ರೊಳಗೆ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶಿಸಿದ್ದಾರೆ.