ಸಂಡೂರು: 4 ತಿಂಗಳ ಮಗುವನ್ನೂ ಬಿಡದ ಕ್ರೂರಿ ಕೊರೋನಾ ವೈರಸ್‌..!

By Kannadaprabha News  |  First Published Jun 20, 2020, 11:27 AM IST

ನಾಲ್ಕು ತಿಂಗಳ ಮಗುವಿನಲ್ಲೂ ಕೊರೋನಾ ವೈರಸ್‌ ಪತ್ತೆ| ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸೋವೇನಹಳ್ಳಿಯ ಮಗುವಿಗೆ ಕೋವಿಡ್‌ ದೃಢ|  ತಂದೆ-ತಾಯಿ ಸೇರಿದಂತೆ ಕುಟುಂಬ ಸದಸ್ಯರಲ್ಲಿ ಕೊರೋನಾ ವೈರಸ್‌ ಇಲ್ಲ| ಮಗುವಿಗೆ ಹರಡಿದ್ದು, ಹೇಗೆ ಎಂಬುದರ ಬಗ್ಗೆ ಪತ್ತೆ ಕಾರ್ಯ| 


ಬಳ್ಳಾರಿ(ಜೂ.20): ಜಿಲ್ಲೆಯ ಸಂಡೂರು ತಾಲೂಕಿನ ಸೋವೇನಹಳ್ಳಿಯ ನಾಲ್ಕು ವರ್ಷದ ಗಂಡು ಮಗುವಿಗೂ ಕೊರೋನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ.

ಜ್ವರದಿಂದ ಬಳಲುತ್ತಿದ್ದ ಮಗುವನ್ನು ಹೊಸಪೇಟೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಂಡೂರು ಎಂದು ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆಯವರು ಒಳಗೆ ಕರೆದುಕೊಳ್ಳದೆ, ಸಂಚಾರಿ ಫೀವ​ರ್‌ ಕ್ಲಿನಿಕ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಚಾರಿ ಕ್ಲಿನಿಕ್‌ನ ಸಿಬ್ಬಂದಿ ಮಗುವಿನ ಆರೋಗ್ಯ ತಪಾಸಣೆ ನಡೆಸಿ, ಸ್ವಾಬ್‌ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಟ್ಟಿದ್ದು, ಮಗುವಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. 

Tap to resize

Latest Videos

ಹಗರಿಬೊಮ್ಮನಹಳ್ಳಿಗೂ ವಕ್ಕರಿಸಿದ ಮಹಾಮಾರಿ ಕೊರೋನಾ..!

ತಂದೆ-ತಾಯಿ ಸೇರಿದಂತೆ ಕುಟುಂಬ ಸದಸ್ಯರಲ್ಲಿ ಕೊರೋನಾ ವೈರಸ್‌ ಇಲ್ಲ. ಮಗುವಿಗೆ ಹರಡಿದ್ದು, ಹೇಗೆ ಎಂದು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ತಂದೆ-ತಾಯಿ ಹಾಗೂ ಮಗುವನ್ನು ಬಳ್ಳಾರಿಯ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
 

click me!