ಯಾದಗಿರಿ: KSRTC ಬಸ್‌ ಚಾಲಕ, ಶುಶ್ರೂಷಕಿ ಪತ್ನಿಗೂ ಕೊರೋನಾ ಸೋಂಕು ದೃಢ

Kannadaprabha News   | Asianet News
Published : Jun 21, 2020, 02:51 PM ISTUpdated : Jun 21, 2020, 11:05 PM IST
ಯಾದಗಿರಿ: KSRTC ಬಸ್‌ ಚಾಲಕ, ಶುಶ್ರೂಷಕಿ ಪತ್ನಿಗೂ ಕೊರೋನಾ ಸೋಂಕು ದೃಢ

ಸಾರಾಂಶ

ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ಹಾಗೂ ಶುಶ್ರೂಷಕಿ ಆಗಿರುವ ಆತನ ಪತ್ನಿಗೂ ಕೊರೋನಾ ಪಾಸಿಟಿವ್‌| ಚಾಲಕನ ಪತ್ನಿ ಸುರಪುರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದಾರೆ ಇವರ ಟ್ರಾವೆಲ್‌ ಹಿಸ್ಟರಿ ಕಲೆ ಹಾಕಲಾಗುತ್ತಿದೆ|

ಯಾದಗಿರಿ(ಜೂ.21): ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ಹಾಗೂ ಶುಶ್ರೂಷಕಿ ಆಗಿರುವ ಆತನ ಪತ್ನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಸುರಪುರ ಪಟ್ಟಣದ ದೀವಳಗುಡ್ಡ ನಿವಾಸಿಯಾಗಿರುವ ಸೋಂಕಿತ ವ್ಯಕ್ತಿ ಯಾದಗಿರಿ-ಬೆಂಗಳೂರು ನಡುವೆ ಸಂಚರಿಸುವ ಬಸ್‌ನ ಚಾಲಕನಾಗಿ ಕಾರ್ಯಹಿಸುತ್ತಿದ್ದಾರೆ. 

ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಇವರ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದಾಗ ಸೋಂಕಿರುವುದು ಪತ್ತೆಯಾಗಿದೆ. 

ಕಣ್ಣಿಗೆ ಖಾರದ ಪುಡಿ ಎರಚಿ ಆಶಾ ಕಾರ್ಯಕರ್ತೆ ಮೇಲೆ ಸೋಂಕಿತ ಕುಟುಂಬದಿಂದ ಹಲ್ಲೆ..!

ಚಾಲಕನ ಪತ್ನಿ ಸುರಪುರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದಾರೆ. ಇವರ ಟ್ರಾವೆಲ್‌ ಹಿಸ್ಟರಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಇವರ ಇಬ್ಬರು ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ.

"

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!