ಮದ್ಯದ ಮೇಲೆ ಕೋವಿಡ್ 19 ಶುಲ್ಕ ವಿಧಿಸಿ ಆದೇಶ/ ಶೇ. 11 ಹೆಚ್ಚುವರಿಯಾಗಿ ಮದ್ಯದ ಮೇಲೆ ಶುಲ್ಕ/ ಗೆಜೆಟ್ ನಲ್ಲಿ ಪ್ರಕಟಿಸಿ ಆದೇಶ ಹೊರಡಿಸಿದ ಸರ್ಕಾರ/ ಮೇ 7 ರಿಂದಲೇ ಜಾರಿ?
ಬೆಂಗಳೂರು(ಮೇ. 06) ಮದ್ಯದ ಮೇಲೆ ಕೋವಿಡ್ 19 ಶುಲ್ಕ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೆಚ್ಚುವರಿಯಾಗಿ ಮದ್ಯದ ಮೇಲೆ 11 ಶೇಕಡಾ ಶುಲ್ಕ ವಿಧಿಸಲಾಗಿದೆ. ಗೆಜೆಟ್ ನಲ್ಲಿ ಪ್ರಕಟಿಸಿ ಆದೇಶ ಹೊರಡಿಸಲಾಗಿದ್ದು ಮೇ 07 ರಿಂದ ಮದ್ಯದ ದರ ಹೆಚ್ಚಳವನ್ನು ಮದ್ಯ ಪ್ರಿಯರು ಅನುಭವಿಸಲೇಬೇಕಾಗಿದೆ
ಮದ್ಯದ ಮೇಲಿನ ಶುಲ್ಕ ಹೆಚ್ಚಳ ಆದೇಶ ಇನ್ನು ಬಾರ್ ಮಾಲಿಕರ ಕೈ ಸೇರಿಲ್ಲ ಹಾಗಾಗಿ ಸದ್ಯ ಶೇ. 6 ಶುಲ್ಕ ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ. ಶೇ. 11 ಹೆಚ್ಚಳದ ಬಗ್ಗೆ ಇನ್ನು ಆದೇಶ ಸಿಕ್ಕಿಲ್ಲ.
ತಪ್ಪೇನು ಇಲ್ಲ ಬಿಡಿ.. ಈ ಹುಡುಗಿ ತಂದೆ ಜೊತೆ ಕುಳಿತು ಎಣ್ಣೆ ಹೊಡೆಯುತ್ತಾಳಂತೆ
ಜನ ರೇಟ್ ಜಾಸ್ತಿ ಆದ್ರೆ ತಲೆಕೆಡಿಸಿಕೊಳ್ಳಲ್ಲ ಆದ್ರ ಬಾಟಲ್ ಮೇಲೆ ಒಂದು ರೇಟ್ ತಗೋಳೊದು ಒಂದು ರೇಟ್ ಆದರೆ ಗಲಾಟೆ ಮಾಡ್ತಾರೆ. ಬಾಟಲ್ ಮೇಲೆ ಇನ್ನು ಹಳೇ ರೇಟೇ ಇದೆ. ಆದ್ರೆ ನಮಗೆ ಇನ್ ವೈಸ್ ಬಿಲ್‌ಮಾತ್ರ ಜಾಸ್ತಿ ಇರುತ್ತೆ. ಶೇ. 11 ರೇಟ್ ಜಾಸ್ತಿ ಆಗೋಕೆ ಒಂದು ವಾರ ಆಗಬಹುದು ಎಂದು ಮದ್ಯದಂಗಡಿ ಮಾಲೀಕರೊಬ್ಬರು ಹೇಳುತ್ತಾರೆ.
ಗ್ರಾಹಕರಲ್ಲೂ ರೇಟ್ ಬಗ್ಗೆ ಗೊಂದಲವಿದೆ. ರೇಟ್ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ . ಊಟ ಫ್ರೀ ಕೊಡಬೇಕು ಆದರೆ ಅದಕ್ಕೆ ರೂ ತಗೊತಿದ್ದಾರೆ ಅಂತ ಒಬ್ಬರು ಹೇಳಿದರೆ, ರೇಟ್ ಜಾಸ್ತಿ ಆದ್ರೆ ಕುಡಿಯೋದೆ ಇಲ್ಲ ಅಂತ ಹೇಳುವವರು ಇದ್ದಾರೆ. ಆದರೆ ಇದೆಲ್ಲ ಏನೇ ಇದ್ದರೂ ಮೇ 7 ರಿಂದ ಮದ್ಯದ ದರ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ.