ಹಾಸನದಲ್ಲಿ ಕೊರೋನಾ ಶಂಕೆ : ಮಹಿಳೆ ಅಡ್ಮಿಟ್

Published : Mar 11, 2020, 10:21 AM IST
ಹಾಸನದಲ್ಲಿ ಕೊರೋನಾ ಶಂಕೆ : ಮಹಿಳೆ ಅಡ್ಮಿಟ್

ಸಾರಾಂಶ

ವಿಶ್ವದಾದ್ಯಂತ ಸಾವಿರಾರು ಮಂದಿಯನ್ನು ಬಲಿ ಪಡೆದ ಕೊರೋನಾ ವೈರಸ್ ಸೋಂಕು ಶಂಕೆ ಇದೀಗ ಹಾಸನ ಜಿಲ್ಲೆಗೂ ತಟ್ಟಿದೆ. ಇಲ್ಲಿ ಮಹಿಳೆಯೋರ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಹಾಸನ [ಮಾ.11]: ಹಾಸನದಲ್ಲಿ ಕೊರೋನಾ ಭೀತಿ ಕೊಂಚ ದೂರವಾಗಿದ್ದ ಬೆನ್ನಲ್ಲೇ ಮತ್ತೊಬ್ಬರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. 

ಫ್ರಾನ್ಸ್ ನಿಂದ ಬಂದ ವ್ಯಕ್ತಿ ಮಂಗಳವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದರ ಬೆನ್ನಲ್ಲೇ ಮತ್ತೋರ್ವ ಮಹಿಳೆ ಆಸ್ಪತ್ರೆಗೆ ಸೇರಿದ್ದಾರೆ. 

ಮೆಕ್ಕಾಗೆ ತೆರಳಿದ್ದ ಮಹಿಳೆ ವಾಪಸಾಗಿದ್ದು, ಈ ವೇಳೆ ಮಹಿಳೆಗೆ  ಜ್ವರ ಕಾಣಿಸಿಕೊಂಡಿದ್ದು, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಕೊರೊನಾ ಭೀತಿ : 9,500 ಕೋಳಿ ಜೀವಂತ ಸಮಾಧಿ...

ಮಹಿಳೆಯರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನಿಡಲಾಗುತ್ತಿದೆ. 

ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. 

PREV
click me!

Recommended Stories

Belagavi: ಕಾಡಿನಲ್ಲೊಂದು ಗುರುದೀಪ: ಅಕ್ಷರ ಸಂತ ನಿಂಗಪ್ಪ ಮೇಷ್ಟ್ರು, 29 ವರ್ಷಗಳಿಂದ ಸೇವೆ
ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?