ಉಪಹಾರದ ಅವ್ಯವಸ್ಥೆಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೊರೋನಾ ಸೋಂಕಿತರು| ಆಹಾರ ಪೂರೈಕೆಯಲ್ಲಿನ ಅವ್ಯವಸ್ಥೆ ಹಾಗೂ ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ಕೊರತೆ, ಸ್ನಾನಕ್ಕೆ ಬಕೆಟ್ ಹಾಗೂ ಚಂಬುಗಳ ವ್ಯವಸ್ಥೆಯಿಲ್ಲ|
ಬಾಗಲಕೋಟೆ(ಜು.22): ಜಿಲ್ಲಾ ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಮತ್ತೆ ಮುಂದುವರೆದಿದ್ದು ಸೋಮವಾರ ಬೆಳಿಗ್ಗೆ ನೀಡುವ ಆಹಾರ ಗುಣಮಟ್ಟದಿಲ್ಲ ಹಾಗೂ ಹಳಸಿದ ಅನ್ನವನ್ನು ನೀಡಲಾಗಿದೆ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆರೋಪಿಸಿದ್ದಾರೆ.
ಬೆಳಗಿನ ಉಪಹಾರದ ಅವ್ಯವಸ್ಥೆಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸೋಂಕಿತರು ಆಹಾರ ಪೂರೈಕೆಯಲ್ಲಿನ ಅವ್ಯವಸ್ಥೆ ಹಾಗೂ ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ಕೊರತೆ, ಸ್ನಾನಕ್ಕೆ ಬಕೆಟ್ ಹಾಗೂ ಚಂಬುಗಳ ವ್ಯವಸ್ಥೆಯಿಲ್ಲ. ಹಳಿಸಿದ ಆಹಾರ ನೀಡುತ್ತಿರುವುದರಿಂದ ಆತಂಕವಾಗುತ್ತಿದೆ. ಆಹಾರ ಪೂರೈಕೆಯನ್ನು ಹೊರಗುತ್ತಿಗಿಗೆ ನೀಡಿದ್ದರೂ ಸಹ ಗುಣಮಟ್ಟದ ಆಹಾರ ದೊರಕುತ್ತಿಲ್ಲ ಎಂದಿರುವ ರೋಗಿಗಳು ನಿರಂತರವಾಗಿ ಒಂದಿಲ್ಲ ಒಂದು ಸಮಸ್ಯೆ ಇದ್ದೆ ಇರುತ್ತದೆ ಎಂದು ಹೇಳಿ ವಿಡಿಯೋ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಲಾಕ್‌ಡೌನ್ ಫ್ರೀ ಇಲ್ಲ..! ಬೆಳಿಗ್ಗೆ 9 ರಿಂದ 2 ಗಂಟೆಯವರೆಗೆ ಮಾತ್ರ ಅವಕಾಶ
ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಸೋಮವಾರ ಬೆಳಿಗ್ಗೆ ನೀಡಲಾದ ಉಪಹಾರ ಲೆಮನ್ ರೈಸ್ ಆಗಿದೆ. ಅದಕ್ಕೆ ಸ್ವಲ್ಪ ಹುಳಿ ಜಾಸ್ತಿಯಾಗಿರುವುದರಿಂದ ರೋಗಿಗಳು ಅದನ್ನು ಹಳಿಸಿದೆ ಎಂದು ಭಾವಿಸಿದ್ದಾರೆ. ವಿಷಯ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಹಾಗೂ ನಾನು ರೈಸ್ ತರಿಸಿ ಪರಿಶೀಲಿಸಿದ್ದೇವೆ ಎಂದು ಶಾಸಕ ವೀರಣ್ಣ ಚರಂತಿಮಠ ಅವರು ತಿಳಿಸಿದ್ದಾರೆ.