ಪೊಲೀಸ್ ಅಧಿಕಾರಿ ರವಿ ರೌದ್ರಾವತಾರ: ತ್ರಿಬಲ್ ರೈಡ್ ಮಾಡಿದ ಯುವಕರಿಗೆ ಥಳಿತ!

Published : Sep 04, 2018, 04:19 PM ISTUpdated : Sep 09, 2018, 09:55 PM IST
ಪೊಲೀಸ್ ಅಧಿಕಾರಿ ರವಿ ರೌದ್ರಾವತಾರ: ತ್ರಿಬಲ್ ರೈಡ್ ಮಾಡಿದ ಯುವಕರಿಗೆ ಥಳಿತ!

ಸಾರಾಂಶ

ತ್ರಿಬಲ್ ರೈಡ್ ಮಾಡಿದ ಯುವಕರಿಗೆ ಅಧಿಕಾರಿ ಥಳಿತ! ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ ಅಧಿಕಾರಿ! ರಾಡ್ ನಿಂದ ಯುವಕರ ಮೇಲೆ ಹಲ್ಲೆ ಮಾಡಿದ ಪಿಎಸ್ ಐ! ಹಲ್ಲೆಗೊಳಗಾದ ಯುವಕರು ಆಸ್ಪತ್ರೆಗೆ ದಾಖಲು

ವಿಜಯಪುರ(ಸೆ.4): ತ್ರಿಬಲ್ ರೈಡ್ ಮಾಡಿದ್ದಕ್ಕೆ  ಪಿಎಎಸ್‌ಐ ಯುವಕರನ್ನು ಮನಬಂದಂತೆ ಥಳಿಸಿದ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.  

ಪಟ್ಟಣದಲ್ಲಿ ನಿನ್ನೆ ಸಾಯಂಕಾಲ ತ್ರಿಬಲ್ ರೈಡ್ ಹೊರಟಿದ್ದ ಯುವಕರನ್ನು ತಡೆದ ಪಿಎಸ್‌ಐ ರವಿ ಯಡವಣ್ಣವರ್, ಮೂವರನ್ನು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ.

ಸುದೀಪ ಪೋತೆ ಹಾಗೂ ಸಚಿನ್ ಕುಮಾರ ಪೋತೆ ಹಲ್ಲೆಗೊಳಗಾದ ಯುವಕರು. ರಾಡ್ ನಿಂದ ಹಲ್ಲೆ ಮಾಡಿದ್ದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಇಬ್ಬರೂ ಯುವಕರನ್ನು ವಿಜಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಅಧಿಕಾರಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಬದಲು ಈ ರೀತಿ ಅಮಾನವೀಯವಾಗಿ ಹಲ್ಲೆ ಮಾಡಿದ್ದೇಕೆ ಎಂದು ಪ್ರಶ್ನಸಿದ್ದಾರೆ. ಅಲ್ಲದೇ ಅಧಿಕಾರಿ ರವಿ ಯಡವಣ್ಣವರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

PREV
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ