ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಕಾಡಾನೆ ಉಪಟಳ ನಿರಂತರವಾಗಿದ್ದು ಕಾಡಾನೆ ಸೆರೆಗೆ ಅರಣ್ಯ ಇಲಾಖೆಯಿಂದ ನಿರಂತರ ಶೋಧ ಕಾರ್ಯನಡೆಯುತ್ತಿದೆ. ಕಾಡಾನೆ ಸೆರೆಗೆ ಕೂಂಬಿಂಗ್ ಮಾಡಿದ್ದ ಅರಣ್ಯ ಇಲಾಖೆ ಎರಡು ದಿನ ಬಿಡುವು ನೀಡಿ ಮತ್ತೆ ಇಂದಿನಿಂದ ಕಾಡಾನೆ ಸೆರೆಗೆ ಮುಂದಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.2) : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಕಾಡಾನೆ ಉಪಟಳ ನಿರಂತರವಾಗಿದ್ದು ಕಾಡಾನೆ ಸೆರೆಗೆ ಅರಣ್ಯ ಇಲಾಖೆಯಿಂದ ನಿರಂತರ ಶೋಧ ಕಾರ್ಯನಡೆಯುತ್ತಿದೆ. ಕಾಡಾನೆ ಸೆರೆಗೆ ಕೂಂಬಿಂಗ್ ಮಾಡಿದ್ದ ಅರಣ್ಯ ಇಲಾಖೆ ಎರಡು ದಿನ ಬಿಡುವು ನೀಡಿ ಮತ್ತೆ ಇಂದಿನಿಂದ ಕಾಡಾನೆ ಸೆರೆಗೆ ಮುಂದಾಗಿದೆ.
ಮಲೆನಾಡಿನ ನರಹಂತಕ ಕಾಡಾನೆ ಜೊತೆಗೆ ಮತ್ತೊಂದು ಹೆಣ್ಣಾನೆ ಸೇರಿದಂತೆ ಎರಡು ಕಾಡಾನೆಗಳು ಕೆಂಜಿಗೆ ಅರಣ್ಯಪ್ರದೇಶದಲ್ಲಿವೆ ಎಂದು ಸ್ಥಳೀಯರಿಂದ ಮಾಹಿತಿ ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಬೆಳಗ್ಗೆ ದೊಡ್ಡಹಳ್ಳ ಗ್ರಾಮದ ತಾತ್ಕಾಲಿಕ ಆನೆ ಶಿಬಿರದಿಂದ 5 ದಸರಾ ಆನೆಗಳನ್ನು ಲಾರಿಯಲ್ಲಿ ಕೆಂಜಿಗೆ ಅರಣ್ಯಪ್ರದೇಶಕ್ಕೆ ಕರೆತರಲಾಗಿದೆ.
ಬೆಳಗ್ಗೆಯಿಂದಲೂ ಅರಣ್ಯ ಪ್ರದೇಶದಲ್ಲಿ 100 ಮಂದಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಕಾಡಾನೆ ಪತ್ತೆಯಾಗಲಿಲ್ಲ. ಕಳೆದ ಸೋಮವಾರ ಕಾರ್ಯಾಚರಣೆಯ ಮೊದಲ ದಿನದಂದು ಸಣ್ಣ ಕಾಡಾನೆಯೊಂದನ್ನು ಸಕ್ರೆಬೈಲು ಆನೆ ಶಿಬಿರಕ್ಕೆ ಸಾಗಿಸಿದ ಬಳಿಕ ನಿನ್ನೆವರೆಗೂ ಕಾರ್ಯಚಾರಣೆ ಸ್ಥಗಿತವಾಗಿತ್ತು. ನಿನ್ನೆ ಭೈರಿಗದ್ದೆಯ ಪೂರ್ಣೇಶ್ ಎಂಬುವವರ ಮನೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ನರಹಂತಕ ಕಾಡಾನೆ ಇದೆ ಎಂದು ಸ್ಥಳೀಯರಿಂದ ಮಾಹಿತಿ ದೊರೆತಾಗ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ನರಹಂತಕ ಆನೆ ಸೇರಿ ಇನ್ನೂ ಎರಡು ಕಾಡಾನೆಗಳ ಸೆರೆ ಕಾರ್ಯಾಚರಣೆ ನಿರತರಾಗಿ ಮುಂದುವರಿಯಲಿದೆ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
Chikkamagaluru: ನಿವೇಶನಕ್ಕೆ ಆಗ್ರಹಿಸಿ ಸಿಪಿಐ ಧರಣಿ; ಅಪರ ಜಿಲ್ಲಾಧಿಕಾರಿಗೆ ಮನವಿ
ಹುಣಸೆಮಕ್ಕಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ:
ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರು ಸಮೀಪದ ಹುಣಸೆಮಕ್ಕಿ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂಟಿ ಸಲಗ ಕಾಣಿಸಿಕೊಂಡಿದ್ದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಕಾಫಿ ಕಟಾವು ಪ್ರಾರಂಭವಾಗಿದ್ದು ಸುತ್ತಲಿನ ಕಾಫಿ ತೋಟಗಳಲ್ಲಿ ಬೆಳಗ್ಗೆಯೇ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು. ಹುಣಸೆಮಕ್ಕಿಯ ಅನಿಲ್ ಅವರ ಮನೆಯ ಅಂಗಳದಲ್ಲೇ ಬೆಳಗ್ಗೆ 7 ಗಂಟೆ ಸಮಯದಲ್ಲಿ ಒಂಟಿ ಸಲಗ ಹಾದು ಹೋಗಿದ್ದು ತಕ್ಷಣ ಅವರು ಸುತ್ತಲಿನ ಕಾಫಿ ತೋಟಗಳ ಮಾಲೀಕರಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೆಲ ತೋಟದ ಮಾಲೀಕರು ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ವಾಪಾಸ್ ಕಳುಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಉಪ ವಲಯ ಅರಣ್ಯಾಧಿಕಾರಿ ಗೌತಮ್, ಸಿಬ್ಬಂದಿ ಚೇತನ್, ಅಜೀಂಖಾನ್ ಪರಿಶೀಲನೆ ನಡೆಸಿದರು. ಹುಣಸೆಮಕ್ಕಿ ಗ್ರಾಮದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಸುಮಾರು 26 ವರ್ಷದ್ದಾಗಿರಬಹುದು. 20 ಮೀ ದೂರದ ಅಂತರದಿಂದ ಆನೆಯನ್ನು ನೋಡಿದ್ದು ನಮ್ಮ ಮೇಲೆ ದಾಳಿಗೆ ಪ್ರಯತ್ನಿಸಲಿಲ್ಲ ಎಂದು ಗೌತಮ್ ತಿಳಿಸಿದ್ದಾರೆ.
ಚಿಕ್ಕಮಗಳೂರು: ಅರಣ್ಯ ಇಲಾಖೆ ಕಾರ್ಯಾಚರಣೆ, ಕಾಡಾನೆ ಸೆರೆ
ಆಣೂರು ಗ್ರಾಮ ಪಂಚಾಯಿತಿಯವರು ಒಂಟಿ ಸಲಗ ತೋಟಗಳಲ್ಲಿ ಅಡ್ಡಾಡುತ್ತಿರುವ ಬಗ್ಗೆ ಮೈಕ್ ಮೂಲಕ ಪ್ರಚಾರ ಮಾಡಿಸಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು.