ಕುರಿ ಕಾಯುತ್ತಿದ್ದ ಹುಡುಗನೀಗ ಅಸಿಸ್ಟೆಂಟ್ ಕಮಿಷನರ್..!

By Kannadaprabha NewsFirst Published Jan 4, 2020, 3:09 PM IST
Highlights

ಗುಡ್ಡದಲ್ಲಿ ಕುರಿ ಮೇಯಿಸಿಕೊಂಡು, ಕೂಲಿ ಕೆಲಸ ಮಾಡುತ್ತಿದ್ದ ಯುವಕನೀಗ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಯುಕ್ತ. ಬಡತನದಲ್ಲಿಯೇ ಬೆಳೆದು ಬಂದ ಯುವಕ ಸ್ವಂತ ಶ್ರಮದಿಂದಲೇ ಉನ್ನತ ಹುದ್ದೆಗೇರಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

ತುಮಕೂರು(ಜ.04): ಕೂಲಿ ಹಾಗೂ ಕುರಿ ಮೇಯಿಸಲು ತೆರಳುತ್ತಿದ್ದ ತಾಲೂಕಿನ ವೀರ್ಲಗೊಂದಿ ಗ್ರಾಮದ ಯುವಕ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಈಗ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಯುಕ್ತರಾಗಿ ನೇಮಕಗೊಳ್ಳುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆಂದು ನಾಗರಿಕರು, ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಪಾವಗಡ ತಾಲೂಕು ಕಸಬಾ ವ್ಯಾಪ್ತಿಯ ಕನ್ನಮೇಡಿ ಗ್ರಾಪಂ ವೀರ್ಲಗೊಂದಿ ಗ್ರಾಮದ ವಾಸಿ ಜೋಗಪ್ಪ ಹಾಗೂ ನಾಗಮ್ಮ ಎಂಬುವರ ಪುತ್ರ ಜೆ. ಶಿವಕುಮಾರ್‌ ಇತ್ತೀಚೆಗೆ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ 39ನೇ ರ‍್ಯಾಂಕ್‌ ಪಡೆಯುವ ಮೂಲಕ ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ನೇಮಕಗೊಂಡಿರುವ ವಿಚಾರ ಹೊರ ಬೀಳುತ್ತಿದ್ದಂತೆ ಹೆಮ್ಮೆಯ ವಿಚಾರವೆಂದು ಸ್ವಗ್ರಾಮ ಮತ್ತು ತಾಲೂಕಿನಲ್ಲಿ ಹರ್ಷ ವ್ಯಕ್ತವಾಗಿದೆ.

ತುಮಕೂರಲ್ಲಿ ಸಿಕ್ತು ಕೆಜಿ ಕೆಜಿ ಜಿಂಕೆ ಮಾಂಸ..ಬೆಳಗಾವಿಯ ಗ್ರಾಪಂ ಅಧ್ಯಕ್ಷ ಬರ್ಬರ ಹತ್ಯೆ

ಈ ಕುರಿತು ಶಿವಕುಮಾರ್‌ ಗುರುಗಳಾದ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್‌ ಮಾತನಾಡಿ, ನನ್ನ ಶಿಷ್ಯ ಶಿವಕುಮಾರ್‌ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದು, ಅತ್ಯಂತ ಖುಷಿ ತಂದಿದೆ. ಕಡು ಬಡತನದಲ್ಲಿ ಬೆಳೆದು ಬಂದ ಯುವಕ, ಕಿತ್ತುತಿನ್ನುವ ಬಡತನದ ಮಧ್ಯೆಯು ಶಾಲೆಗೆ ಕಡ್ಡಾಯವಾಗಿ ಆಗಮಿಸುತ್ತಿದ್ದರು. ರಜೆ ಮತ್ತು ಬಿಡುವಿನ ವೇಳೆ ಕುರಿ ಕಾಯುವುದು ಮತ್ತು ಕೂಲಿ ಕೆಲಸ ಮಾಡುವುದು ಈತನ ಕಾಯಕವಾಗಿತ್ತು.

ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!

ಬಡತನದ ಮಧ್ಯೆ ವಿದ್ಯಾಭ್ಯಾಸ ಮುಂದುವರಿಸಿದ ವಿಚಾರ ಕಣ್ಣಿಗೆ ಕಟ್ಟಿದಂತಿದೆ. ಕಷ್ಟುಪಟ್ಟು ವ್ಯಾಸಂಗ ಮಾಡಿದರೆ ಎಂತಹ ಹುದ್ದೆಗಾದರೂ ಹೋಗಬಹುದೆಂಬ ಭರವಸೆಗೆ ಶಿವಕುಮಾರ್‌ ಸಾಕ್ಷಿಯಾಗಿದ್ದಾರೆ. ಪೊಲೀಸ್‌ ಪೇದೆ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಆಂಕಗಳೊಂದಿಗೆ ತೇರ್ಗಡೆಯಾಗಿ ಈಗ ಕರ್ನಾಟಕ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

click me!