ವಿವಾದಾತ್ಮಕ ಪೋಸ್ಟ್‌ : ಮಂಗಳೂರು ಪ್ರೊಫೆಸರ್‌ಗೆ ನೋಟಿಸ್‌

Kannadaprabha News   | Asianet News
Published : Sep 10, 2020, 11:09 AM IST
ವಿವಾದಾತ್ಮಕ ಪೋಸ್ಟ್‌ : ಮಂಗಳೂರು ಪ್ರೊಫೆಸರ್‌ಗೆ ನೋಟಿಸ್‌

ಸಾರಾಂಶ

ವಿವಾದಾತ್ಮಕ ಪೋಸ್ಟ್ ಹಾಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಓರ್ವರಿಗೆ ನೋಟಿಸ್ ಜಾರಿ ಮಾಡಲಾಗಿದೆ. 

 ಮಂಗಳೂರು (ಸೆ.10): ಕೆಲಸ ಇಲ್ಲದೆ ಸಂಬಳ ಪಡೆಯುುವುದು ಹೆಮ್ಮೆ ಎಂಬರ್ಥದಲ್ಲಿ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಮಾಡಿದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಗೋವಿಂದರಾಜ್‌ ಅವರಿಗೆ ಮಂಗಳೂರು ವಿವಿ ನೋಟಿಸ್‌ ನೀಡಿದೆ.

ಇವರು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಪ್ರೌಡ್‌ ಟು ಬಿ ಎ ಟೀಚರ್‌ ಬಿಕಾಸ್‌ ಡ್ರಾಯಿಂಗ್‌ ಎ ಗುಡ್‌ ಸ್ಯಾಲರಿ ವಿತೌಟ್‌ ವರ್ಕ್ ರಿಸ್ಕ್‌’ (ಕೆಲಸ, ಅಪಾಯವಿಲ್ಲದೆ ಉತ್ತಮ ಸಂಬಳ ಸಿಗುತ್ತಿದೆ, ಅದಕ್ಕೆ ಶಿಕ್ಷಕನಾಗಿರುವುದಕ್ಕೆ ಹೆಮ್ಮೆ ಇದೆ) ಎಂಬ ಪೋಸ್ಟ್‌ ಹಾಕಿದ್ದರು.

ಕೊನೆಗೂ ಶಾಲೆ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್: ಮಾರ್ಗಸೂಚಿ ಪ್ರಕಟ ...

ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ವಿವಿಯು ಪ್ರಾಧ್ಯಾಪಕರಿಗೆ ನೋಟಿಸ್‌ ನೀಡಿದ್ದು, 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದೆ. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಸದ್ಯಕ್ಕೆ ತೆರೆಯುವ ಮುನ್ಸೂಚನೆಗಳು ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ಪ್ರೊಫೆಸರ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.

PREV
click me!

Recommended Stories

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಾಗರ ಹಾವು ಆಯ್ತು, ಈಗ ದಿಢೀರ್ ಕೋತಿಗಳ ಸೈನ್ಯವೇ ಪ್ರತ್ಯಕ್ಷ!
ಮೈಷುಗರ್ ಕಾರ್ಖಾನೆ ಅವ್ಯವಹಾರ, ಮಹಾರಾಷ್ಟ್ರದ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಕರ್ನಾಟಕ ಆದೇಶ