ಕಾಂಗ್ರೆಸ್‌ ಸಮಾವೇಶ ಯಶಸಿಗೆ ಸಹಕರಿಸಿ: ಪರಮೇಶ್ವರ್‌

By Kannadaprabha News  |  First Published Mar 5, 2023, 5:09 AM IST

ತಾಲೂಕಿನ ರಾಜೀವ ಭವನ ಉದ್ಘಾಟನೆಗೆ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಮಲ್ಲಿಕಾರ್ಜುನ ಖರ್ಗೆರವರು ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಮಾಚ್‌ರ್‍ 5ರಂದು ಬರಲಿದ್ದು, ಈ ಕಾರ್ಯಕ್ರಮವು ಐತಿಹಾಸಿಕ ಘಟನೆಯಾಗಿ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಿಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ ಪರಮೇಶ್ವರ್‌ ಮನವಿ ಮಾಡಿದರು.


 ಕೊರಟಗೆರೆ :  ತಾಲೂಕಿನ ರಾಜೀವ ಭವನ ಉದ್ಘಾಟನೆಗೆ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಮಲ್ಲಿಕಾರ್ಜುನ ಖರ್ಗೆರವರು ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಮಾಚ್‌ರ್‍ 5ರಂದು ಬರಲಿದ್ದು, ಈ ಕಾರ್ಯಕ್ರಮವು ಐತಿಹಾಸಿಕ ಘಟನೆಯಾಗಿ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಿಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ ಪರಮೇಶ್ವರ್‌ ಮನವಿ ಮಾಡಿದರು.

ಕೊರಟಗೆರೆಯ ತಾಲೂಕಿನ ರಾಜೀವ ಭವನ ಉದ್ಘಾಟನೆ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಾವೇಶದ ಸಿದ್ಧತೆಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷರು ಕನ್ನಡಿಗರು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಅಧ್ಯಕ್ಷರಾದ ನಂತರ ಖರ್ಗೆ ಅವರು ಜಿಲ್ಲೆಯ ಮೊದಲ ಭೇಟಿ ತಾಲೂಕಿಗೆ ಒದಗಿ ಬಂದ ಭಾಗ್ಯವಿದು. ಜೊತೆಗೆ ಈಗಾಗಲೇ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಚುನಾವಣ ದೃಷ್ಟಿಕೋನ ಇಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಇನ್ನಷ್ಟುಬಲಿಷ್ಠಗೊಳಿಸಲಿದೆ. ಹೆಲಿಪ್ಯಾಡ್‌ನಿಂದ ಇಳಿದು ತೆರದ ವಾಹನದಲ್ಲಿ ಮತ್ತು ಸಾವಿರಾರು ಬೈಕ್‌ ಮೂಲಕ ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸ್ವಾಗತ ಕೋರಲಿದೆ.

Tap to resize

Latest Videos

ಕಾರ್ಯಕ್ರಮಕ್ಕೆ ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷÜತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಮತ್ತು ರಾಜ್ಯದ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಮಧುಗಿರಿ ಮಾಜಿ ಶಾಸಕ ರಾಜಣ್ಣ ಮಾತನಾಡಿ, ಎಸ್‌.ನಿಜಲಿಂಗಪ್ಪರ ನಂತರ ಕನ್ನಡಿಗ ಎಐಸಿಸಿ ಅಧ್ಯಕ್ಷರಾಗಿದ್ದು ಮಲ್ಲಿಕಾರ್ಜುನ ಖರ್ಗೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ, ಎಐಸಿಸಿ ಅಧ್ಯಕ್ಷರಾಗಿರುವುದು ಅವರ ಪಕ್ಷ ನಿಷ್ಠ ಅಲ್ಲಿವರೆಗೆ ಕರೆದುಕೊಂಡು ಹೋಗಿದೆ. ಈ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ತಾಲೂಕಿನ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಯಶಸ್ವಿಗೊಳಿಸಬೇಕು ಎಂದರು.

ತುಮಕೂರು ಮಾಜಿ ಶಾಸಕ ರಫೀಕ್‌ ಅಹಮದ್‌ ಮಾತನಾಡಿ, ರಾಜ್ಯದ ಮತ್ತು ಜಿಲ್ಲೆಯ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಈ ವೇದಿಕೆ ಮುಖಾಂತರ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಮಾಜಿ ಶಾಸಕರ ನಿಂಗಪ್ಪ ಮಾತನಾಡಿದರು.

ಸಭೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ತುಮಕೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಗೌಡ, ತುಮಕೂರು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರವಿಕುಮಾರ ರಾಯಸಂದ್ರ, ಮುರಳಿಧರ್‌ ಹಾಲಪ್ಪ, ಜಿ.ಎಸ್‌.ಪ್ರಸನ್ನ ಕುಮಾರ್‌ ಮತ್ತು ತಾಲೂಕಿನ ವಿವಿಧ ಮುಖಂಡರು ಉಪಸ್ಥಿತರಿದ್ದರು.

ದುರಾಡಳಿತದ ಕಡೆ ಬಿಜೆಪಿ ಆಡಳಿತ: ಪರಂ

ಬಿಜೆಪಿಯ ಆಡಳಿತ ದುರಾಡಳಿತದ ಕಡೆಗೆ ವಾಲಿದೆ. ಚನ್ನಗಿರಿ ಬಿಜೆಪಿ ಶಾಸಕರ ಕಚೇರಿಯಲ್ಲಿ ಲಕ್ಷ ಲಕ್ಷ ನಗದು ಹಣ ಸಿಕ್ಕಿದೆ. ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದ ಬಿಜೆಪಿಯವರಿಗೆ ಇದಕ್ಕಿಂತ ಸಾಕ್ಷಿ ಬೇಕಾ. ಗ್ಯಾಸ್‌ ನ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲೆ ಇದೆ. ಜನ ಸಾಮಾನ್ಯರ ಬಗ್ಗೆ ಸ್ವಲ್ಪವೂ ಯೋಚನೆ ಮಾಡದ ಜನವಿರೋಧಿ ಸರ್ಕಾರ ಇದಾಗಿದೆ. ಒಬ್ಬ ಐಎಎಸ್‌ ಮತ್ತು ಐಪಿಎಸ್‌ನ ಕಲಹವನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ಬಿಜೆಪಿ ಸರ್ಕಾರದ ಆಡಳಿತ ಯಂತ್ರ ಕುಸಿದು ಬಿದ್ದಿದೆ. ಕರ್ನಾಟಕದಲ್ಲಿ ಈ ಬಿಜೆಪಿ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ದಾಗಿ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕೋಟ್‌....

ದಿ.ರಾಜೀವ ಗಾಂಧಿಯವರು ಭವಿಷ್ಯದಲ್ಲಿ ಸುಂದರವಾದ, ಬಲಿಷ್ಠ ಭವ್ಯ ಭಾರತ ನಿರ್ಮಿಸುವುದಾಗಿ ಕನಸು ಕಂಡಿದ್ದರು. 21ನೇ ಶತಮಾನದಲ್ಲಿ ಯಾವ ಒಬ್ಬ ಭಾರತೀಯನ ಕಣ್ಣಲ್ಲಿ ನೀರು ಬರಬಾರದು ಎಂಬ ಆಶಯ ಅವರದಾಗಿತ್ತು. ಮತ್ತು ನನಗೆ ರಾಜಕೀಯವಾಗಿ ಆಶೀರ್ವಾದ ಮಾಡಿದ್ದೆ ರಾಜೀವ್‌ ಗಾಂಧಿಯವರು. ಅದರ ಸವಿ ನೆನಪಿಗಾಗಿ ತಾಲೂಕಿನ ಕಾಂಗ್ರೆಸ್‌ ಕಚೇರಿಗೆ ರಾಜೀವ ಭವನ ಎಂಬ ಹೆಸರು ಇಟ್ಟಿದ್ದೇವೆ.

ಡಾ. ಜಿ. ಪರಮೇಶ್ವರ್‌

ಶಾಸಕ, ಕೊರಟಗೆರೆ ಕ್ಷೇತ್ರ

click me!