ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗುತ್ತಿಗೆದಾರ ಸಂತೋಷ ಪಾಟೀಲ ಪತ್ನಿ ಜಯಶ್ರೀ ಪಾಟೀಲ ಹಾಗೂ ಆತನ ತಾಯಿ ಪಾರ್ವತಿ ಪಾಟೀಲ, ಸಂತೋಷ ಪಾಟೀಲ ಸಾವಿನ ಪ್ರಕರಣವನ್ನು ಉನ್ನತಮಟ್ಟ ತನಿಖೆಗೆಗೊಳಪಡಿಸಿ, ಆತನ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದರು.
ಬೆಳಗಾವಿ(ಆ.12): ನನ್ನ ಮಗನ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಿ, ಆತನ ಸಾವಿಗೆ ನ್ಯಾಯ ಕಲ್ಪಿಸುವಂತೆ ಗುತ್ತಿಗೆದಾರ ಸಂತೋಷ ಪಾಟೀಲನ ತಾಯಿ ಪಾರ್ವತಿ ಹಾಗೂ ಪತ್ನಿ ಜಯಶ್ರೀ ಪಾಟೀಲ ಸಿಎಂ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿ ಮನವಿ ಮಾಡಿಕೊಂಡರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗುತ್ತಿಗೆದಾರ ಸಂತೋಷ ಪಾಟೀಲ ಪತ್ನಿ ಜಯಶ್ರೀ ಪಾಟೀಲ ಹಾಗೂ ಆತನ ತಾಯಿ ಪಾರ್ವತಿ ಪಾಟೀಲ, ಸಂತೋಷ ಪಾಟೀಲ ಸಾವಿನ ಪ್ರಕರಣವನ್ನು ಉನ್ನತಮಟ್ಟ ತನಿಖೆಗೆಗೊಳಪಡಿಸಿ, ಆತನ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದರು.
ಗ್ಯಾರಂಟಿ ಜಾರಿಯಿಂದ ಕರ್ನಾಟಕದ ಜಿಡಿಪಿ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ
ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸುವ ನಿಟ್ಟಿನಲ್ಲಿ ಸಿಐಡಿಗೆ ವಹಿಸುವಂತೆ ಮನವಿ ಮಾಡಿಕೊಂಡರು. ಈ ವೇಳೆ ನಮಗೆ ಇತ್ತ ಮಗನೂ ಇಲ್ಲ, ಅತ್ತ ಬಾಕಿ ಬಿಲ… ಕೂಡ ಬಂದಿಲ್ಲ. ನೌಕರಿ ಕೊಡಿಸುತ್ತೇವೆ ಎಂದಿದ್ದರೂ ಅದು ಆಗಿಲ್ಲ. ಸಣ್ಣ ಮಗನನ್ನು ಕಟ್ಟಿಕೊಂಡು ಹೇಗೆ ಜೀವನ ಮಾಡೋದು ಎಂದು ಕಣ್ಣೀರು ಹಾಕಿದರು.
ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಸಿಐಡಿ ಮೂಲಕ ಮರು ತನಿಖೆ ಮಾಡಿಸುವಂತೆ ಸಂತೋಷ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಪೊಲೀಸರು ಮತ್ತು ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ನನ್ನ ಬಳಿ ಪೆನ್‌ಡ್ರೈವ್ ಇರೋದು ನಿಜ, ಸಮಯ ಬಂದಾಗ ಬಿಡುಗಡೆ: ಲಕ್ಷ್ಮಣ ಸವದಿ
ನನ್ನ ಮಗನ ಜೀವ ಉಳಿಸಬೇಕಿತ್ತು, ಒಂದು ಸಹಿ ಮಾಡಿದ್ದರೆ ನನ್ನ ಮಗ ಬದುಕುತ್ತಿದ್ದ. ನನ್ನ ಮಗನ ಬದುಕಿಸಿದ್ದರೆ ಈಶ್ವರಪ್ಪನವರಿಗೆ ಏಳು ಕೋಟಿ ಪುಣ್ಯ ಬರುತ್ತಿತ್ತು. ಬಿ ರಿಪೋರ್ಚ್ ಬಂದ ಬಳಿಕ ಅವರು ಸಿಹಿ ತಿಂದರು. ಅವರ ಮನೆಯಲ್ಲಿ ಏನಾದರೂ ಆಗಿದ್ದರೇ ಈ ರೀತಿ ಸಿಹಿ ತಿನ್ನುತ್ತಿದ್ದರಾ? ನೌಕರಿ ಕೊಡುತ್ತೇವೆ ಎಂದು ಹೇಳಿದ್ದರು. ಬಾಕಿ ಬಿಲ… ಕೊಡ ಕೊಟ್ಟಿಲ್ಲ. ನನ್ನ ಮಗನಿಗೆ ಅನ್ಯಾಯ ಮಾಡಿದರು. ನನ್ನ ಮಗನ ಜೀವ ಯಾರು ಕೊಡುತ್ತಾರೆ? ಹುಲಿ ಅಂತ ನನ್ನ ಮಗನ ಯಾರು ತಂದ ಕೊಡುತ್ತಾರೆ? ಎಂದು ಗುತ್ತಿಗೆದಾರ ಸಂತೋಷ ತಾಯಿ ಪಾರ್ವತಿ ಪಾಟೀಲ ಹೇಳಿದ್ದಾರೆ.
ಸಿಐಡಿ ತನಿಖೆ ಮಾಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಗುತ್ತಿಗೆದಾರ ಸಂತೋಷ ಪತ್ನಿ ಜಯಶ್ರೀ ಪಾಟೀಲ ತಿಳಿಸಿದ್ದಾರೆ.