ನೈಸ್‌ ರೋಡ್‌ ಮಾದರಿ ಎಂಟ್ರಿ, ಎಗ್ಸಿಟ್‌ ರಸ್ತೆ ನಿರ್ಮಾಣ: ಸಂಸದ ಪ್ರತಾಪ್‌ ಸಿಂಹ

By Kannadaprabha News  |  First Published Jan 23, 2023, 3:00 AM IST

ಹೆದ್ದಾರಿಯಲ್ಲಿ ಎಂಟ್ರಿ, ಎಗ್ಸಿಟ್‌ ಕೇಳಿದ್ದರು. 1201 ಕೋಟಿ ರು. ವೆಚ್ಚದ ಕಾಮಗಾರಿಗೆ ಅಪ್ರುವಲ್‌ ಆಗಿದೆ. ಅದರ ಡಿಸೈನ್‌ ಕೂಡ ಮುಗಿದಿದೆ. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ: ಮೈಸೂರು ಸಂಸದ ಪ್ರತಾಪ್‌ ಸಿಂಹ


ಮದ್ದೂರು(ಜ.23):  ಬೆಂಗಳೂರು- ಮೈಸೂರು ದಶಪಥದಲ್ಲಿ ರಾಮನಗರ, ಮದ್ದೂರು ಹಾಗೂ ಮಂಡ್ಯದಲ್ಲಿ ವಾಹನಗಳು ಹೊರ ಹೋಗುವ, ಒಳ ಬರಲು ನೈಸ್‌ರೋಡ್‌ ಮಾದರಿ ರಸ್ತೆ ನಿರ್ಮಿಸಲಾಗುವುದು ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದರು. ತಾಲೂಕಿನ ಕುದುರಗುಂಡಿ ಗ್ರಾಮದ ಬಳಿ ಹೆದ್ದಾರಿ ವೀಕ್ಷಣೆ ವೇಳೆ ಮಾತನಾಡಿದ ಬೆಂಗಳೂರು- ಮೈಸೂರು ಬೈಪಾಸ್‌ ರಸ್ತೆ ಇನ್ನು 3 ದಿನಗಳಲ್ಲಿ ಓಪನ್‌ ಆಗಲಿದೆ. ಸಾರ್ವಜನಿಕರು ಅದನ್ನು ಬಳಸಬಹುದು ಎಂದರು.

ಹೆದ್ದಾರಿಯಲ್ಲಿ ಎಂಟ್ರಿ, ಎಗ್ಸಿಟ್‌ ಕೇಳಿದ್ದರು. 1201 ಕೋಟಿ ರು. ವೆಚ್ಚದ ಕಾಮಗಾರಿಗೆ ಅಪ್ರುವಲ್‌ ಆಗಿದೆ. ಅದರ ಡಿಸೈನ್‌ ಕೂಡ ಮುಗಿದಿದೆ. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಶಾಸಕ ಡಿ.ಸಿ.ತಮ್ಮಣ್ಣ ಮನವಿ ಜೊತೆಗೆ, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮದ್ದೂರಿನ ಶಿಂಷಾ ನದಿಗೆ ಮೇಲುಸೇತುವೆ ನಿರ್ಮಿಸಲಾಗುತ್ತಿದೆ. ಸದ್ಯದಲ್ಲೇ ಕಾಮಗಾರಿ ಮುಗಿಯಲಿದೆ ಎಂದರು.

Tap to resize

Latest Videos

ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಟ್ವಿಸ್ಟ್: ರಾಜಕೀಯದ ದಿಕ್ಕು ಬದಲಿಸುತ್ತಾ ಈ ಸುದ್ದಿ?

ಹನಕೆರೆ, ಗೆಜ್ಜಲಗೆರೆ ಹಾಗೂ ಇಂಡುವಾಳು ಗ್ರಾಮದಲ್ಲಿ ಗ್ರಾಮಸ್ಥರು ಹೊಸ ಅಂಡರ್‌ ಪಾಸ್‌ ಕೇಳಿದ್ದರು. ರಸ್ತೆ ಮುಗಿಯೋ ಅಂತಕ್ಕೆ ಬಂದಿರುವುದರಿಂದ ಅವರ ಮನವಿಗೆ ಸ್ಪಂದಿಸಲು ಕಷ್ಟವಾಗಿದೆ. ಕೊಳ್ಳೆಗಾಲ ಮಾರ್ಗದ ರಸ್ತೆ ಕೂಡ 4 ಲೈನ್‌ ರಸ್ತೆ ಆಗಬೇಕಿದೆ. ಅದನ್ನು ಕೂಡ ಭಾರತ್‌ ಮಾಲಾದಲ್ಲಿ ಸೇರಿಸಿ 4 ಲೈನ್‌ ಮಾಡಲಾಗುವುದು ಎಂದರು.

ಕುದುರಗುಂಡಿ ಗ್ರಾಮದಲ್ಲಿ ಜಮೀನಿಗೆ ಸಂಬಂಧಿಸಿದಂತೆ ರೈತರು ಮತ್ತು ಡಿಬಿಎಲ… ಕಂಪನಿ ನಡುವೆ ಭಿನ್ನಾಭಿಪ್ರಾಯವಿದೆ. ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡರು ಈ ಸಮಸ್ಯೆ ಬಗೆ ಹರಿಸುವಂತೆ ಕೋರಿದ್ದಾರೆ. ಇದಕ್ಕಾಗಿ ಸ್ಥಳಕ್ಕೆ ಬಂದು ಪರಿಶೀಲಿಸಿದ್ದೇನೆ ಎಂದರು.

Assembly election: ರಾಜ್ಯ ರಾಜಕಾರಣಕ್ಕೆ ಸುಮಲತಾ: ಕ್ಷೇತ್ರ ಆಯ್ಕೆ ಯಾವುದು?

ರೈತರು ಕಂಪನಿಗೆ ಬಂದ ಕೊಟ್ಟಜಾಗವನ್ನು ಸರಿಪಡಿಸಿ ಅಳತೆ ಕೂಡ ಮಾಡಿಸಬೇಕಿದೆ. 15 ಕ್ಯೂಬಿಕ್‌ ಕೃಷಿಗೆ ಯೋಗ್ಯವಾದ ಮಣ್ಣನ್ನು ಇಲ್ಲಿಗೆ ತಂದು ಹಾಕಬೇಕು. ಈ ಬಗ್ಗೆ ಸ್ಪಷ್ಟವಾದ ನಿರ್ದೇಶನವನ್ನು ನೀಡಲಾಗಿದೆ. ಇನ್ನು 15 ದಿನಗಳಲ್ಲಿ ಜಮೀನ್‌ ಕ್ಲೀನ್‌ ಮಾಡಲಿಲ್ಲ ಅಂದ್ರೆ ರೈತರಿಗೆ ಬಾಡಿಗೆ ನೀಡಬೇಕು ಎಂದು ಡಿಬಿಎಲ… ಕಂಪನಿಯವರಿಗೆ ಮಧು ಜಿ.ಮಾದೇಗೌಡರು ಸೂಚಿಸಿದ್ದಾರೆ. ಇದಕ್ಕೆ ನನ್ನ ಸಹಮತವಿದೆ ಎಂದರು.

ಚನ್ನಪಟ್ಟಣದ ಬಳಿ 30 ಎಕರೆ ಜಾಗದಲ್ಲಿ ಐಲೆಂಡ್‌ ರೆಸ್ವ್‌ ಏರಿಯಾ ಮಾಡಲಿದ್ದೇವೆ. ಇದನ್ನು 50 ಎಕರೆಗೆ ಏರಿಸುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿಯವರು ಆಸ್ಪತ್ರೆ ಮಾಡೋದಿಲ್ಲ. ತುರ್ತು ಚಿಕಿತ್ಸೆ ಬೇಕಾದರೆ ಅದನ್ನು ರಾಜ್ಯ ಸರ್ಕಾರ ಮಾಡಬೇಕು. ರೋಗಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಬೆಂಗಳೂರಿಗೆ ರವಾನಿಸಬೇಕಾಗುತ್ತದೆ. ಟ್ರಾಮ ಸೆಂಟರ್‌ ಅವಶ್ಯಕತೆ ಇದೆ. ಪ್ರಯಾಣಿಕರಿಗೋಸ್ಕರ 100 ಬೆಡ್ಡಿನ ಆಸ್ಪತ್ರೆ ಬೇಕಿಲ್ಲ. ಚನ್ನಪಟ್ಟಣಕ್ಕೊ, ರಾಮನಗರಕ್ಕೋ ಅಥವಾ ಮದ್ದೂರಿಗೆ 100 ಬೆಡ್ಡಿನ ಆಸ್ಪತ್ರೆ ಬೇಕು ಎಂದರೆ ಅದನ್ನ ಒಪ್ಪಕೊಳ್ಳಬಹುದು ಎಂದರು.

click me!