ಪೊಲೀಸ್ ಇಲಾಖೆಯಲ್ಲಿ ಕೆಲಸ, ಪಾಕಿಸ್ತಾನದ ಮೇಲೆ ಪ್ರೇಮ| ವಾಟ್ಸಾಪ್ ಗ್ರೂಪ್‌ನಲ್ಲಿ ದೇಶವಿರೋಧಿ ಪೋಸ್ಟ್ ಹಾಕಿದ ಪೇದೆ| ಈ ಹಿಂದೆ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪಂಡ್ ಆಗಿದ್ದ ಪೊಲೀಸ್ ಪೇದೆ|
ದಾವಣಗೆರೆ(ಆ.23): ದೇಶವಿರೋಧಿ ಪೋಸ್ಟ್ ಹಾಕುವ ಮೂಲಕ ಪೇದೆಯೊಬ್ಬರು ಪಾಕಿಸ್ತಾನದ ಪ್ರೇಮ ವ್ಯಕ್ತಪಡಿಸಿದ್ದಾರೆ ಎಂದ ಆರೋಪವೊಂದು ಕೇಳಿ ಬಂದ ಘಟನೆ ನಗರದಲ್ಲಿ ನಡೆದಿದೆ. ಸನಾವುಲ್ಲಾ ಎಂಬುವರೇ ದೇಶವಿರೋಧಿ ಪೋಸ್ಟ್ ಹಾಕಿದ ಪೇದೆಯಾಗಿದ್ದಾರೆ.
ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅಗಿ ಕಾರ್ಯನಿರ್ವಹಸುತ್ತಿರುವ ಸನಾವುಲ್ಲಾ 2014 ರಲ್ಲೂ ಇದೇ ರೀತಿ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪಂಡ್ ಆಗಿದ್ದರು ಎಂದು ತಿಳಿದು ಬಂದಿದೆ.
ದಾವಣಗೆರೆ: ಆಯುಷ್ಮಾನ್ ಕಾರ್ಡ್ ವಿತರಿಸದೆ ತಿಪ್ಪೆಗೆಸೆದ ಪೋಸ್ಟ್‌ಮ್ಯಾನ್..!
2008 ಬ್ಯಾಚ್ ಪೊಲೀಸ್ ಟೀಮ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಪವರ್ ಆಫ್ ಪಾಕಿಸ್ತಾನ ಎನ್ನುವ ಪೇಜ್ ಶೇರ್ ಮಾಡಿದ್ದಾನೆ. ಈ ಹಿಂದೆ ಕೂಡ ಇಂತಹದ್ದೇ ದೇಶವಿರೋಧಿ ಪೋಸ್ಟ್ ಹಾಕಿ ಸನಾವುಲ್ಲಾ ಅಮಾನತ್ತುಗೊಂಡಿದ್ದ. ಈಗ ಮತ್ತೊಂದು ದೇಶವಿರೋಧಿ ಪೋಸ್ಟ್ ಹಾಕಿ ಮತ್ತೆ ಪಾಕ್ ಪ್ರೇಮವನ್ನ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾನೆ. ಈ ಸಂಬಂಧ ದಾವಣಗೆರೆ ಎಸ್‌ಪಿ ಹನುಮಂತರಾಯ ಅವರು ತನಿಖೆಗೆ ಆದೇಶಿಸಿದ್ದಾರೆ.