ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ನಡೆದ ಎಲ್ಲಾ ಸ್ಥಾನಗಳಲ್ಲಿಯೂ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಅಧಿಕಾರ ಪಡೆದುಕೊಂಡಿದೆ
ಗುಡಿಬಂಡೆ (ಡಿ.01): ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಬಿ.ಕ್ಷೇತ್ರದಿಂದ ನಡೆದ 9 ಮಂದಿಯ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೆಂಬಲಿತ 9 ಮಂದಿಯು ಗೆಲುವು ಸಾಧಿಸುವ ಮೂಲಕ ಟಿಎಪಿಸಿಎಂಎಸ್ ಕಾಂಗ್ರೆಸ್ ವಶವಾಗಿದೆ.
ಗುಡಿಬಂಡೆ ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿಯ ನಿದೇಶಕರ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಬಿ ಕ್ಷೇತ್ರದ ಸಾಮಾನ್ಯ 3, ಅನುಸೂಚಿತ ಜಾತಿ 1, ಪರಿಶಿಷ್ಟಪಂಗಡ 1, ಬಿಸಿಎಂ ಎ ಮತ್ತು ಬಿ 2 ಹಾಗೂ ಮಹಿಳಾ ಕ್ಷೇತ್ರ 2 ಸೇರಿದಂತೆ ಒಟ್ಟು 9 ಸ್ಥಾನಗಳಿಗೆ ಒಟ್ಟು 26 ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಬಗ್ಗೆ ಜಿ. ಪರಮೇಶ್ವರ್ ಬೇಸರ : ಅಗತ್ಯ ನಿರ್ಧಾರದ ಬಗ್ಗೆ ಮಾತನಾಡಿದ ನಾಯಕ ...
ಚುನಾಣೆಯಲ್ಲಿ ಬಿ.ಕ್ಷೇತ್ರದಿಂದ ಮಾಚಹಳ್ಳಿ ಶಿವಣ್ಣ , ಕಡೇಹಳ್ಳಿ ಗಂಗಿರೆಡ್ಡಿ , ಎಚ್.ವೆಂಕಟೇಶಪ್ಪ, ಬ್ರಾಹ್ಮಣರಹಳ್ಳಿ ಎಚ್.ಹನುಮಂತರಾಯಪ್ಪ , ಬೆಣ್ಣೇಪರ್ತಿ ನರಸಿಂಹಪ್ಪ , ಮಾಚಹಳ್ಳಿ ಆದಿನಾರಾಯಣಪ್ಪ , ಚಿಕ್ಕತಮ್ಮನಹಳ್ಳಿ ಪಿ.ಎಸ್.ವೇಣುಗೋಪಾಲ್, ಕೊಂಡಾವಲಹಳ್ಳಿ ಶಿವಮ್ಮ, ಆದಿಲಕ್ಷ್ಮಮ್ಮ ವಿಜೇತರಾಗಿದ್ದಾರೆ.
5 ಮಂದಿ ನಾಮನಿರ್ದೇಶನ: ಉಳಿದಂತೆ ಹಂಪಸಂದ್ರ ವಿ.ಎಸ್.ಎಸ್.ಎನ್ ಕೆ.ಜೆ.ಆನಂದರೆಡ್ಡಿ, ಚೌಟಕುಂಟಹಳ್ಳಿ ವಿ.ಎಸ್.ಎಸ್.ಎನ್ ಗಂಗಾಧರಪ್ಪ, ಪಸುಪಲೋಡು ವಿ.ಎಸ್.ಎಸ್.ಎನ್ ಚನ್ನಕೇಶವರೆಡ್ಡಿ, ಕಸಬಾ ಸೊಸೈಟಿ ಎಂ.ವೆಂಕಟಲಕ್ಷ್ಮಮ್ಮ, ಪೋಲಂಪಲ್ಲಿ ವಿ.ಎಸ್.ಎಸ್.ಎನ್ ವೆಂಕಟೇಶಪ್ಪ ಸೇರಿ ಐವರು ತಾವು ಪ್ರತಿನಿಧಿಸುವ ವಿಎಸ್‌ಎಸ್‌ಎನ್‌ಗಳಿಂದ ಟಿಎಪಿಸಿಎಂಎಸ್‌ಗೆ ನೇರವಾಗಿ ಅವಿರೋಧವಾಗಿ ನಾಮನಿರ್ದೇಶನಗೊಂಡಿದ್ದಾರೆ ಚುನಾವಣಾಧಿಕಾರಿ ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಪ್ರೇಮ್ ಕುಮಾರ್, ಸಂಘದ ಕಾರ್ಯದರ್ಶಿ ಎಸ್.ಅಶ್ವತ್ಥಪ್ಪ ಇದ್ದರು.