ಕಾಂಗ್ರೆಸ್‌ನಿಂದ ಮಹತ್ವದ ಕಾರ್ಯಕ್ರಮ ಒಂದು ನಡೆಯುತ್ತಿದ್ದು, ಡಿಕೆ ಶಿವಕುಮಾರ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ
ದಾವಣಗೆರೆ (ಅ.21): ಪಂಜಾಬ್‌ನಲ್ಲಿ ನಡೆದ ಕಿಸಾನ್ ಚಳವಳಿ ಹೋರಾಟದ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲೂ ನವೆಂಬರ್ 7ರ ನಂತರ ಕಾಂಗ್ರೆಸ್ ರಾಷ್ಟ್ರೀಯ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಿಸಾನ್ ಯಾತ್ರೆ ನಡೆಯಲಿದೆ ಎಂದು ಕಿಸಾನ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸಚಿನ್ ಮಿಗಾ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಕಿಸಾನ್ ಯಾತ್ರೆಯು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿದ್ದು, ಹುಬ್ಬಳ್ಳಿ-ಬೆಳಗಾವಿ, ದಾವಣಗೆರೆ-ಕಾಗೋಡು, ಬೀದರ್-ಕಲಬುರಗಿ ಭಾಗದಲ್ಲಿ ಕಿಸಾನ್ ಯಾತ್ರೆ ನಡೆಸುವ ಬಗ್ಗೆ ಕೆಪಿಸಿಸಿಗೆ ವರದಿ ನೀಡಿದ್ದೇವೆ ಎಂದರು.
'ಜನರ ಕಣ್ಣೀರಿನ ಮೇಲೆ ರಾಜಕೀಯ ಮಾಡುವುದೇ ಕಾಂಗ್ರೆಸ್-ಜೆಡಿಎಸ್ ಚಾಳಿ'
ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 7ರ ನಂತರ ಕಿಸಾನ್ ಯಾತ್ರೆ ಆರಂಭಿಸಲಾಗುವುದು. ಎಲ್ಲಿಂದ, ಯಾವಾಗ, ಯಾವ ದಿನದಂದು ಕಿಸಾನ್ ಯಾತ್ರೆ ಆರಂಭಿಸಬೇಕೆಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಕೇಂದ್ರ-ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿವೆ. ಈ ಕಾಯ್ದೆಗಳ ಕುರಿತಂತೆ ವ್ಯಕ್ತಿರಿಕ್ತ ಹೇಳಿಕೆಗಳನ್ನು ರೈತ ಮುಖಂಡರೆಂದು ಹೇಳಿಕೊಳ್ಳುವ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಹೇಳಿಕೆ ನೀಡಿರುವುದು ವಿಪರ್ಯಾಸದ ಸಂಗತಿ. ಬಾಬಾಗೌಡ ಪಾಟೀಲ್ ರೈತ ಸಂಘದ ಹೆಸರನ್ನು ಹೇಳಿಕೊಂಡು, ಬಿಜೆಪಿ ವಕ್ತಾರರಂತೆ ವರ್ತಿಸುವ ಮೂಲಕ ಅನ್ನದಾತ ರೈತರಿಗೆ ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
'ಬಿಜೆಪಿ ಸರ್ಕಾರ ರಚನೆಯಲ್ಲಿ ಮುನಿರತ್ನ ಪಾತ್ರ ದೊಡ್ಡದು' ...
ಎಪಿಎಂಸಿ, ವಿದ್ಯುತ್, ಭೂ ಸುಧಾರಣೆ ಕಾಯ್ದೆಗಳ ತಿದ್ದುಪಡಿ ಕಾಯ್ದೆಗಳನ್ನು ಸಮಗ್ರವಾಗಿ ಚರ್ಚೆಗೊಳಪಡಿಸಬೇಕೆಂಬ, ಪೂರ್ವಾಗ್ರಹ ಪೀಡಿತರಾಗಿ ಕಾಯ್ದೆಗಳನ್ನು ವಿರೋಧಿಸುವುದು ಸರಿಯಲ್ಲವೆಂಬ ಬಾಬಾಗೌಡ ಪಾಟೀಲ್ ಹೇಳಿಕೆಯೇ ರೈತ ಮುಖಂಡನೆಂದು ಹೇಳಿಕೊಳ್ಳುವ ಬಾಬಾಗೌಡ ಪಾಟೀಲರು ಬಿಜೆಪಿ ವಕ್ತಾರರಂತೆ ಹೇಳಿಕೆ ನೀಡಿರುವುದæೕ ಸ್ಪಷ್ಟಪಡಿಸುತ್ತದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಅಸಂವಿಧಾನಿಕ ರೀತಿಯಲ್ಲಿ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿ, ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಕೃಷಿ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ-2020, ರೈತರ(ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ-2020, ಅಗತ್ಯ ಸರಕುಗಳ(ತಿದ್ದುಪಡಿ) ಸುಗ್ರೀವಾಜ್ಞೆ 2020, ಈ ಮಸೂದೆಗಳು ಸ್ಪರ್ಧಾತ್ಮಕ ಮಾರುಕಟ್ಟೆಗಳನ್ನು ಮುಚ್ಚಿ, ನಮ್ಮನ್ನು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರನ್ನಾಗಿಸಿ, ಮುಂದೊಂದು ದನ ಅಂತಹವರು ಕೊಡುವ ಬೆಲೆ ನಮ್ಮ ಬೆಳೆ ಮಾರಬೇಕಾದ ಪರಿಸ್ಥಿತಿ ತಂದೊಡ್ಡುತ್ತಿದೆ ಎಂದು ದೂರಿದರು.
ತಿದ್ದುಪಡಿ ಕಾಯ್ದೆಗಳ ಮೂಲಕ ನಮಗೆ ಈವರೆಗೂ ಸಿಗುತ್ತಿದ್ದ ಬೆಂಬಲ ಬೆಲೆ ಪದ್ಧತಿಯನ್ನೇ ಕೊನೆಗಾಣಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಈ ಸುಗ್ರೀವಾಜ್ಞೆಗಳಿಗೆ ಸಹಿ ಹಾಕುವ ಮೂಲಕ ರೈತರ ಗೌರವಯುತ ಜೀವನಕ್ಕೆ ತೆರೆ ಎಳೆದು, ಸಾವಿಗೆ ಅಂಕಿತ ಹಾಕುವ ಕೆಲಸ ಸರ್ಕಾರ ಮಾಡುತ್ತಿವೆ. ಈ ಸುಗ್ರೀವಾಜ್ಞೆಗಳನ್ನು ತಿರಸ್ಕರಿಸಿ, ವಾಪಾಸು ಪಡೆಯುವ ಮೂಲಕ ಈ ದೇಶದ ರೈತರ ಬದುಕನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಚಿನ್ ಮಿಗಾ ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಗಂಗಾ ವಿ. ಬಸವರಾಜ, ಪ್ರಧಾನ ಕಾರ್ಯದರ್ಶಿ ಬಾತಿ ಶಿವಕುಮಾರ, ಎಸ್.ಕೆ.ಪ್ರವೀಣಕುಮಾರ ಯಾದವ್, ಮಾಯಕೊಂಡ ಬ್ಲಾಕ್ ಅಧ್ಯಕ್ಷ ಹಾಲೇಶ ಬಸವನಾಳ್, ಹಾಲೇಶ್, ನಾಗೇಂದ್ರಪ್ಪ, ದೊರೆಸ್ವಾಮಿ ಇತರರು ಇದ್ದರು.