ಮೂವರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಅಧಿಕಾರ : ಜೆಡಿಎಸ್-ಬಿಜೆಪಿ ಮೈತ್ರಿ

Kannadaprabha News   | Asianet News
Published : Aug 24, 2021, 12:01 PM ISTUpdated : Aug 24, 2021, 12:10 PM IST
ಮೂವರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಅಧಿಕಾರ : ಜೆಡಿಎಸ್-ಬಿಜೆಪಿ ಮೈತ್ರಿ

ಸಾರಾಂಶ

 ರಾಜ್ಯದಲ್ಲಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ  ಬಿಜೆಪಿ ಜೆಡಿಎಸ್ ನಾಯಕರು ಒಂದಾಗುವ ಲಕ್ಷಣಗಳು ಗೋಚರ

ಚನ್ನರಾಯಪಟ್ಟಣ (ಆ.24): ರಾಜ್ಯದಲ್ಲಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಮನಗಂಡು ಬಿಜೆಪಿ ಜೆಡಿಎಸ್ ನಾಯಕರು ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಧಿಕಾರದ ಆಸೆಯಿಂದ ಹೊಂದಾಣಿಕೆ ರಾಜಕೀಯಕ್ಕೆ ಮುಂದಾಗುವ  ಅವರ ಆಟಕ್ಕೆ ಕಡಿವಾಣ ಬೀಳಬೇಕೆಂದರೆ ಕಾಂಗ್ರೆಸ್  ಪಕ್ಷದ ಅಭ್ಯರ್ಥಿಯನ್ನು ಎಲ್ಲರೂ ಒಗ್ಗೂಡಿ ಗೆಲ್ಲಿಸುವಲ್ಲಿ ಮುಂದಾಗಬೇಕೆಂದು ಮಾಜಿ ಶಾಸಕ ಸಿಎಸ್ ಪುಟ್ಟೇಗೌಡ  ಕಾರ್ಯಕರ್ತರಿಗೆ ಕರೆ ನೀಡಿದರು. 

ಮುಂದೆ ನಡೆಯಲಿರುವ ತಾಲೂಕು ಪಂಚಾಯಿತಿ  ಜಿಲ್ಲಾ ಪಂಚಾಯತ್ ಚುನಾವಣೆ ಸಲುವಾಗಿ ತಾಲೂಕಿನಲ್ಲಿ  ನಡೆಸಲಾದ ಕಾಂಗ್ರೆಸ್ ಕಾರ್ಯರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜೆಡಿಎಸ್  ಪಕ್ಷ ಎಂದೂ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ಇಲ್ಲ. ಅವರದೇನಿದ್ದರೂ ಅವಕಾಶವಾದಿ ರಾಜಕಾರಣ. ಮುಂದಿನ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರದಿರಲೆಂದು ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

2024ರ ಚುನಾವಣೆಗೆ ಒಗ್ಗಟ್ಟಿನ ಹೋರಾಟಕ್ಕೆ ಸೋನಿಯಾ ಕರೆ!

ತಾಲೂಕಿನಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದಾಗಿ ತಾಲೂಕಿನ ಜನತೆ ನಲುಗಿ ಹೋಗಿದ್ದಾರೆ. ಕಾಂಗ್ರೆಸ್ ಉತ್ತಮ ಎಂಬ ಭಾವನೆ ಜನರಲ್ಲಿ ಮೂಡಿದೆ. ಇದೀಗ ಕಾಂಗ್ರೆಸ್ ಗಾಳಿ ಬೀಸುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟು ಪ್ರದರ್ಶಿಸಿ ಶ್ರವಣ ಬೆಳಗೊಳ ಕ್ಷೇತ್ರವನ್ನು ತೆಕ್ಕೆಗೆ ಬರುವಂತೆ ನೋಡಿಕೊಳ್ಳಬೇಕು ಎಂದರು. 

ಪಕ್ಷ ಯಾರನ್ನೇ ಅಬ್ಯರ್ಥಿಯನ್ನಾಗಿ ಮಾಡಲಿ ಅವರ ಗೆಲುವಿಗೆ ಶ್ರಮಿಸಬೇಕು. 20 ವರ್ಷಗಳ ನಂತರ  ಕಾಂಗ್ರೆಸ್ ಶಾಸಕರ ಆಯ್ಕೆಗೆ ಸಕಾಲವಾಗಿದ್ದು ಇದನ್ನು ಕೈ ಜಾರದ ರೀತಿ ನೋಡಿಕೊಳ್ಳುವುದು  ಪ್ರತೀ ಕಾಂಗ್ರೆಸಿಗನ ಕರ್ತವ್ಯ ಎಂದರು. 

PREV
click me!

Recommended Stories

ಬೆಂಗಳೂರಿಗಾಗಿ ಶ್ರಮಿಸಿದೆವು ಆದ್ರೂ ತಮ್ಮನನ್ನು ಸೋಲಿಸಿದ್ರಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ಕಿಡಿಯಾದ ಡಿಕೆಶಿ
ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!