ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಆವರಣದಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಮೊಹಮ್ಮದ್ ನಲಪಾಡ್
ಹುಬ್ಬಳ್ಳಿ(ಜು.20): ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಿದ್ದರಿಂದ ಖಾದಿ ಗ್ರಾಮೋದ್ಯೋಗದಲ್ಲಿ ಮಾರಾಟವಾಗದೆ ಉಳಿದ ಧ್ವಜಗಳನ್ನು ಕಾಂಗ್ರೆಸ್ ಖರೀದಿಸಲಿದೆ. ಜತೆಗೆ, ಖಾದಿ ಗ್ರಾಮೋದ್ಯೋಗವನ್ನು ಉಳಿಸಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು. ಮಂಗಳವಾರ ನಗರದದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಆವರಣದಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎಲ್ಲ ವಸ್ತುಗಳ ವಿಷಯದಲ್ಲಿ ಮೇಕ್ ಇನ್ ಇಂಡಿಯಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅಸ್ಮಿತೆಯಾದ ರಾಷ್ಟ್ರಧ್ವಜದ ವಿಷಯದಲ್ಲಿ ಮೇಕ್ ಇನ್ ಚೀನಾ ಎನ್ನುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ಲಾಸ್ಟಿಕ್ಕಿಂದ ತಯಾರಿಸಿದ ರಾಷ್ಟ್ರಧ್ವಜ ಬಳಸಬೇಡಿ: ರಾಜ್ಯಗಳಿಗೆ ಸೂಚನೆ!
ಡಿಕೆಶಿ ಒಕ್ಕಲಿಗರ ಬೆಂಬಲ ಕೇಳೋದರಲ್ಲಿ ತಪ್ಪೇನಿದೆ?
ಗದಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರ ಬೆಂಬಲವನ್ನು ಕೇಳುವುದರಲ್ಲಿ ತಪ್ಪೇನಿದೆ. ನಾನೂ ಸಹ ಬೆಂಬಲ ಕೇಳುತ್ತೇನೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹ್ಮದ್ ನಲಪಾಡ್ ಡಿಕೆಶಿ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೋ ಒಂದು ಸಮಾಜದ ಬೆಂಬಲ ಕೇಳಿದರೆ ಅದು ತಪ್ಪಾ...? ನಾನು ಮುಸಲ್ಮಾನ, ಹಾಗೇ ನಾನು ಮುಸ್ಲಿಂರ ಬೆಂಬಲ ಕೇಳುತ್ತೇನೆ. ಡಿಕೆಶಿ ಅವರು ಬೆಂಬಲ ಕೇಳಿದ್ದು ಮುಖ್ಯಮಂತ್ರಿಯಾಗೋದಕ್ಕೆ ಅಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಕೇಳಿದ್ದಾರೆ. ಡಿಕೆಶಿ ಅವರಿಗೂ ಮುಂದೆ ಅವಕಾಶ ಇದೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಮುಖ ಚೆನ್ನಾಗಿದೆ ಅವರನ್ನು ಮಾಧ್ಯಮದವರು ತೋರಿಸುತ್ತಿದ್ದೀರಾ ತುಂಬಾ ಸಂತೋಷ. ಆದರೆ ಅವರಿಬ್ಬರಲ್ಲಿರುವ ಪ್ರೀತಿ ತೋರಿಸಿ, ಅವರ ಜಗಳವನ್ನಲ್ಲ. ಇಬ್ಬರು ನಾಯಕರು ಇರುವ ಪೋಟೋ ಇದೆ, ಅದನ್ನು ತೋರಿಸಿ ಎಂದು ಮನವಿ ಮಾಡಿದರು.
ಹಿರಿಯ ನಾಯಕರಾದ ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಗುದ್ದಾಟ, ಮುದ್ದಾಟ ಇಲ್ಲ. ಇಬ್ಬರು ನಾಯಕರು ಒಟ್ಟಾಗಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಪಕ್ಷಕ್ಕೆ ನಿಯತ್ತಾಗಿದ್ದೇವೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ ಎಂದರು.
ಸಿದ್ದರಾಮಯ್ಯ ಅವರ ಉತ್ಸವದ ರೀತಿಯಲ್ಲಿ ಡಿ.ಕೆ. ಶಿವಕುಮಾರ ಅವರ ಉತ್ಸವ ಮಾಡಲು ಕೆಲವರು ಹೇಳಿದ್ದರು. ಆಗ ಪಕ್ಷದ ಉತ್ಸವ ಮಾಡಬೇಕೆಂದು ಡಿಕೆಶಿ ಅವರು ಹೇಳಿದ್ದಾರೆ ಎಂದರು. ಸಿದ್ದರಾಮೋತ್ಸವದಲ್ಲಿ ಅವರ 75 ವರ್ಷಗಳ ಜೀವನ ಸಾಧನೆ ಇದೆ. ಐದು ವರ್ಷ ಸಿಎಂ ಆದವರು. ಉತ್ಸವ ಕಮಿಟಿಯಲ್ಲಿದ್ದವರು ಮುಂದೆ ಪಕ್ಷ ಸಂಘಟನೆಯನ್ನು ಮಾಡುತ್ತಾರೆ. ಕಮೀಟಿ ಬೇರೆಯಲ್ಲ, ಕಾಂಗ್ರೆಸ್ ಸಂಘಟನೆ ಬೇರೆಯಲ್ಲ. ನಾನೂ ಮೂಲ ಕಾಂಗ್ರೆಸ್ಸಿಗ, ನಾನೂ ಕೂಡಾ ಕಮಿಟಿಯಲ್ಲಿದ್ದೇನೆ ಎಂದರು.
ಗಬ್ಬರ್ ಸಿಂಗ್ ಟ್ಯಾಕ್ಸ್ ಯಾರಿಗಾಗಿ ಕಟ್ ಮಾಡತ್ತಾ ಇದ್ದಾರೆ. ಯಾರಿಗಾಗಿ ಸಂಗ್ರಹ ಮಾಡತ್ತಾ ಇದ್ದಾರೆ ಗೊತ್ತಿಲ್ಲ. ಬಿಜೆಪಿ ಪಿಕ್ ಪ್ಯಾಕೆಟ್ ಸರ್ಕಾರ ಎಂದು ಘೋಷಣೆ ಹಾಕ್ತೀನಿ. ಹಾಲು, ಮೊಸರಿನಲ್ಲಿ 5 ಪರ್ಸೆಂಟೇಜ್ ಜಿಎಸ್‌ಟಿ. ಡಿಜಿಟಲ್ ಇಂಡಿಯಾ ಅಂತಾ ಹೇಳಿ ಬ್ಯಾಂಕ್ ಚೆಕ್ ಲೀಫ್‌ಗೆ 18 ಪರ್ಸೆಂಟ್ ಜಿಎಸ್‌ಟಿ ಹಾಕಿದ್ದೀರಿ. ಮುಂದಿನ ದಿನಗಳಲ್ಲಿ ಟ್ಯಾಕ್ಸ್ ಏರಿಕೆ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ. ಜಿಎಸ್‌ಟಿ ಎಷ್ಟು ಲಕ್ಷ ಕೋಟಿ ಕಲೆಕ್ಟ್ ಮಾಡಿದ್ದೀರಿ, ಅದರಲ್ಲಿ ಕರ್ನಾಟಕದ ಪಾಲು ಎಷ್ಟು? ಕರ್ನಾಟಕದ ಪಾಲು ತರಲು ಮುಖ್ಯಮಂತ್ರಿಗಳಿಗೆ, ಸಂಸದರಿಗೆ ಆಗುತ್ತಿಲ್ಲ ಎಂದು ಲೇವಡಿ ಮಾಡಿದರು ನಲಪಾಡ್. ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಜಿ.ಎಸ್. ಪಾಟೀಲ ಸೇರಿದಂತೆ ಹಲವರು ಇದ್ದರು.
Congress Politics: ಯುವ ಕಾಂಗ್ರೆಸ್ ಅಧ್ಯಕ್ಷಗೆ ನಲಪಾಡ್ ಹಲ್ಲೆ ಆರೋಪ, ಬಿಜೆಪಿ ಷಡ್ಯಂತ್ರ..?
ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ, ನಮ್ಮ ನೆಲದ ಖಾದಿಗೆ ಮೋದಿ ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಾಧನವಾಗಿದ್ದ ಖಾದಿ, ಬ್ರಿಟಿಷರನ್ನು ದೇಶದಿಂದ ಓಡಿಸುವ ದೊಡ್ಡ ಅಸ್ತ್ರವಾಗಿಯೂ ಬಳಕೆಯಾಗಿತ್ತು. ಹೊಸ ತಿದ್ದುಪಡಿಯು, ಪರಂಪರಾಗತ ಖಾದಿ ರಾಷ್ಟ್ರಧ್ವಜಕ್ಕೆ ಕುತ್ತು ತಂದಿದೆ. ಇಷ್ಟಕ್ಕೂ ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ. ಕೇಂದ್ರ ಸರ್ಕಾರ ಜನಹಿತ ಕಾಯಲು ಬದ್ಧವಾಗಿಲ್ಲ ಎಂದರು.
ನಮ್ಮ ರಾಷ್ಟ್ರಧ್ವಜವನ್ನು ನಮ್ಮ ದೇಶದಲ್ಲಿ ಮಾತ್ರ ತಯಾರಿಸಲು ಅವಕಾಶ ನೀಡದೆ ದೊಡ್ಡ ಅಪಮಾನ ಮಾಡಲಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ದಕ್ಕೆ ತಂದರೆ ಸುಮ್ಮನೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಬಾರದು. ಕೇಂದ್ರ ಸರ್ಕಾರ ಕೂಡಲೇ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನೋದ ಅಸೂಟಿ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಇಮ್ರಾನ್ ಯಲಿಗಾರ ಸೇರಿದಂತೆ ಹಲವರಿದ್ದರು.