ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್‌ ಬೆಂಬಲ: ಡಿಕೆಶಿ

By Kannadaprabha News  |  First Published Apr 8, 2021, 9:31 AM IST

ಸಾರಿಗೆ ಸಂಸ್ಥೆ ಸಾರ್ವಜನಿಕ ವಲಯದ್ದಾಗಿದ್ದು, ಸರ್ಕಾರ ಇದನ್ನು ವ್ಯಾಪಾರದ ದೃಷ್ಟಿಯಿಂದ ನೋಡಬಾರದು. ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌


ಬೆಳಗಾವಿ(ಏ.08): ಬಿಜೆಪಿ ಸರ್ಕಾರಕ್ಕೆ ಸಾರಿಗೆ ನೌಕರರ ದುಃಖ, ದುಮ್ಮಾನ, ಭಾವನೆ ಹಾಗೂ ಶ್ರಮದ ಅರಿವಿಲ್ಲ. ಅಲ್ಲದೆ, ಸಾರಿಗೆ ನೌಕರರು ಏಕಾಏಕಿಯೇನೂ ಮುಷ್ಕರ ಮಾಡುತ್ತಿಲ್ಲ. ಮೊದಲೇ ಹೇಳಿ ಮುಷ್ಕರಕ್ಕಿಳಿದಿದ್ದಾರೆ. ಆದ್ದರಿಂದ ಈ ಮುಷ್ಕರಕ್ಕೆ ಕಾಂಗ್ರೆಸ್‌ ಬೆಂಬಲ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ಸಂಸ್ಥೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಏಕಾಏಕಿ ಮುಷ್ಕರ ನಡೆಸುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮೊದಲೇ ತಿಳಿಸಿದ್ದರು. ಆಗಲೇ ಕರೆದು ಮಾತನಾಡಿ ವಿಚಾರ ಬಗೆಹರಿಸಬೇಕಿತ್ತು. ಇದನ್ನು ಸರ್ಕಾರ ಮಾಡದಿರುವುದರಿಂದ ಈಗ ಅನಿವಾರ್ಯವಾಗಿ ಅವರು ಮುಷ್ಕರಕ್ಕೆ ಇಳಿದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Tap to resize

Latest Videos

ಕಾಂಗ್ರೆಸ್ ಸೇರಿದ ಜೆಡಿಎಸ್ ಪ್ರಭಾವಿ ನಾಯಕ: ದಳಪತಿಗಳಿಗೆ ಮರ್ಮಾಘಾತ

ಸಾರಿಗೆ ಸಂಸ್ಥೆ ಸಾರ್ವಜನಿಕ ವಲಯದ್ದಾಗಿದ್ದು, ಸರ್ಕಾರ ಇದನ್ನು ವ್ಯಾಪಾರದ ದೃಷ್ಟಿಯಿಂದ ನೋಡಬಾರದು. ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ. 
 

click me!