ಇನ್ನೂ ಘೋಷಣೆಯಾಗದ ಟಿಕೆಟ್, ಮಾಜಿ ಸಚಿವನಿಂದ ಹೊಳಲ್ಕೆರೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ!

By Suvarna News  |  First Published Apr 4, 2023, 9:58 PM IST

ಟಿಕೆಟ್ ಘೋಷಣೆಗೂ ಮುನ್ನವೇ ಮಾಜಿ ಸಚಿವ ಆಂಜನೇಯ ಹೊಳಲ್ಕೆರೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.  ಕಾಂಗ್ರೆಸ್ 2 ನೇ ಲಿಸ್ಟ್ ಬಿಡುಗಡೆ ಬಳಿಕವಷ್ಟೇ ಟಿಕೆಟ್ ಬಗ್ಗೆ ಸ್ಪಷ್ಟನೆ ಸಿಗಲಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಏ.4): ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮಲ್ಲಾಡಿಹಳ್ಳಿ ಜಿಲ್ಲಾ ಪಂಚಾಯಿತಿ  ವ್ಯಾಪ್ತಿಯ ಜಯಂತಿನಗರ, ನೆಹರು ಕಾಲೋನಿ, ಅರೇಹಳ್ಳಿ, ಗುಂಡಿಮಡು, ಮಲ್ಕಾಪುರ, ಪುಣಜೂರು, ಅಗ್ರಹಾರ  ಮತ್ತು ಶಿವಪುರ ಗ್ರಾಮಗಳಲ್ಲಿ ಇಂದು ಮಾಜಿ ಸಚಿವ ಎಚ್.ಆಂಜನೇಯ ಮನೆ ಮನೆಗೆ ತೆರೆಳಿ  ಬಿರುಸಿನ ಪ್ರಚಾರ ಕೈಗೊಂಡರು. ಟಿಕೆಟ್ ಘೋಷಣೆಗೂ ಮುನ್ನವೇ ಭರ್ಜರಿ ಕ್ಯಾಂಪೇನ್ ಮಾಡ್ತಿರೋ ಮಾಜಿ ಸಚಿವ ಆಂಜನೇಯಗೆ ಜನರು ಉತ್ತಮ ಪ್ರತಿಕ್ರಿಯೆ ನೀಡ್ತಿದ್ದಾರೆ. ಈಗಾಗಲೇ ಕ್ಷೇತ್ರದ ಅನೇಕ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡ್ತಿರುವ ಮಾಜಿ ಸಚಿವರು ಈ ಬಾರಿಯ ಗೆಲುವಿಗಾಗಿ ಸಖತ್ ಸರ್ಕಸ್ ಮಾಡ್ತಿದ್ದಾರೆ.

Latest Videos

undefined

ಮಲ್ಲಾಡಿಹಳ್ಳಿಯಲ್ಲಿ ಪ್ರಚಾರ ಮಾಡುವ ವೇಳೆ  ಮತದಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ ಸೇರಿದಂತೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ನೀಡಿದೆ. ರೈತರು, ಮಹಿಳೆಯರು, ಶೋಷಿತರು, ಬಡವರು, ನಿರ್ಗತಿಕರ ಪರವಾಗಿರುವ ಕಾಂಗ್ರೆಸ್ ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಮನವಿ ಮಾಡಿದರು.

ರಾಮನಗರ ಜಿಲ್ಲೆಯಲ್ಲಿ ನಾರೀಯರೇ ಪ್ರಬಲ, ಮಹಿಳಾ ಮತದಾರರನ್ನು ಸೆಳೆಯಲು ಮುಂದಾದ ಅಭ್ಯರ್ಥಿಗಳು!

ಈಗಾಗಲೆ ಉಚಿತ ಗ್ಯಾರೆಂಟಿ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲಿ ಭರವಸೆ ನೀಡಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಜಿ.ಎಸ್.ಟಿ.ಗಾಗಿ ರು.500 ಹಾಗೂ ಅಡುಗೆ ಅನಿಲಕ್ಕಾಗಿ ರು.500 ಬೆಲೆ ಏರಿಕೆಗಾಗಿ ರು.1000 ಸೇರಿ ಒಟ್ಟು ರು.2000 ಸಾವಿರ ಪ್ರತಿ ಮನೆಯ ಮಹಿಳೆಗೆ ಪ್ರತಿ ತಿಂಗಳು ನೀಡಲಾಗುವುದು. ಹಾಗೆಯೇ ನಿರುದ್ಯೋಗಿ ಪದವೀಧರರಿಗೆ ಮಾಸಿಕ ರು.3000 ಡಿಪ್ಲೋಮಾ ಪದವೀದರರಿಗೆ ರು.1500 ಭರವಸೆ ನೀಡಿದೆ. ನಮ್ಮದು ನುಡಿದಂತೆ ನಡೆಯುವ ಪಕ್ಷ. ಕೋಮುವಾದಿ ಬಿಜೆಪಿ.ಯಿಂದ ಜನ ಬೇಸತ್ತಿದ್ದು, ಕಾಂಗ್ರೆಸ್‍ಗೆ ರಾಜ್ಯದೆಲ್ಲೆಡೆ ಉತ್ತಮ ಒಲವು ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಶಹಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮೂವರು ಆಕಾಂಕ್ಷಿಗಳ ಫೈಟ್, ಟಿಕೆಟ್‌ಗಾಗಿ ಬೆಟ್ಟಿಂಗ್!

ಇದೇ ವೇಳೆ ಅದೇ ಗ್ರಾಮದ ಬಿಜೆಪಿ ಪಕ್ಷದ ಅನೇಕ ಮುಖಂಡರು ಮಾಜಿ ಸಚಿವ ಎಚ್.ಆಂಜನೇಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲೋಹಿತ್ ಕುಮಾರ್, ಮುಖಂಡರಾದ ಮಂಜಣ್ಣ, ಶಿವಣ್ಣ, ದೇವರಾಜ್, ಅಶೋಕ್, ರಂಗಸ್ವಾಮಿ, ಪರಶುರಾಮ್, ಮೂರ್ತಪ್ಪ, ಚಂದ್ರಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.

click me!