ಬಿಜೆಪಿಯವರು ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಬಡವರು, ರೈತರು ಮತ್ತು ಮಹಿಳೆಯರನ್ನು ಯಾಮಾರಿಸುತ್ತಿದ್ದಾರೆ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅಸಮಾಧಾನ ವ್ಯಕ್ತ ಪಡಿಸಿದರು
ಮಧುಗಿರಿ: ಬಿಜೆಪಿಯವರು ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಬಡವರು, ರೈತರು ಮತ್ತು ಮಹಿಳೆಯರನ್ನು ಯಾಮಾರಿಸುತ್ತಿದ್ದಾರೆ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅಸಮಾಧಾನ ವ್ಯಕ್ತ ಪಡಿಸಿದರು.
ಪಟ್ಟಣದ ಎಪಿಎಂಸಿ ಹಿಂಭಾಗ ಗುರುವಾರ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಮಹಿಳಾ ಕಾಂಗ್ರೆಸ್ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಡ ಜನತೆಗೆ ಉಚಿತ ಗ್ಯಾಸ್ ನೀಡುವುದಾಗಿ ಘೋಷಿಸಿ ನಂತರ ಗ್ಯಾಸ್ ಬೆಲೆಯನ್ನು 1200 ರೂಗಳಿಗೆ ಏರಿಸಿದ್ದು, ಬಡವರಿಗೆ ದುಬಾರಿ ಹಣ ತೆತ್ತು ಗ್ಯಾಸ್ ಕೊಳ್ಳುವ ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿದಲ್ಲಿ ರೈತರನ್ನು, ಸ್ತ್ರೀ ಶಕ್ತಿ ಸಂಘಗಳನ್ನು, ಬಡ ಜನತೆಯನ್ನು ಗೌರವಯುತವಾಗಿ ನಡೆಸಿಕೊಳ್ಳಲಿದೆ. ಈಗಾಗಲೇ ಕಾಂಗ್ರೆಸ್ 3 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಪ್ರತೀ ಕುಟುಂಬದ ಮನೆಯೊಡತಿಗೆ ಮಾಸಿಕ 2 ಸಾವಿರ, ಪ್ರತಿ ಮನೆಗೆ 200 ಯೂನಿಚ್ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 10 ಕೆಜಿ ಏರಿಸು ವುದಾಗಿ ಘೋಷಿಸಿದ್ದು, ಈ ಯೋಜನೆಗಳು ಬಡ ಜನತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಇಲ್ಲಿಯವರೆಗೂ ರೈತರನ್ನು ಯಾವುದೇ ಬ್ಯಾಂಕಿನ ಅಧಿಕಾರಿಗಳು ಗೌರವಯುತವಾಗಿ ನಡೆಸಿಕೊಂಡಿಲ್ಲ. ಆದರೆ ಕೆ.ಎನ್. ರಾಜಣ್ಣನವರು ಕ್ಷೇತ್ರದ 50 ಸಾವಿರ ಕುಟುಂಬಗಳಿಗೆ ಶಕ್ತಿ ತುಂಬಿದ್ದು, ಅವರು ಆರ್ಥಿಕವಾಗಿ ಸದೃಡರಾಗಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ ಎಂದರು.
ಪ್ರಧಾನಿ ಮೋದಿ, ಯಡಿಯೂರಪ್ಪ ಕುರಿತಾಗಿ ಸಿದ್ಧರಾಮಯ್ಯ ವಿವಾದಾತ್ಮಕ ಮಾತು!
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನಾಗಲಕ್ಷ್ಮೀ ಮಾತನಾಡಿ, ಇಂದು ಯಾರೇ ಗೆಲ್ಲಬೇಕೆಂದರೂ ಮಹಿಳಾ ಮತದಾರರ ಸಹಕಾರ ಬೇಕು. ಅಪಮಾನ, ಅವಮಾನಗಳನ್ನು ಮೂಟೆ ಕಟ್ಟಿಮೆಟ್ಟಿನಿಂತರೆ ಮಾತ್ರ ಮಹಿಳೆಯರು ಯಶಸ್ವಿಯಾಗಲು ಸಾಧ್ಯ. ರಾಜಕೀಯಕ್ಕೆ ಮಾನವೀಯತೆ, ಯೋಗ್ಯತೆ, ಅರ್ಹತೆ ಮುಖ್ಯ, ಅರ್ಹತೆ ಗೆಲ್ಲಬೇಕು. ಹಣ ಮಂಡಿಯೂರಬೇಕು. ಪ್ರತಿಯೊಬ್ಬರಿಗೂ ಮಕ್ಕಳ ಭವಿಷ್ಯ ಮುಖ್ಯ ಎಂದ ಅವರು, ಜೆಡಿಎಸ್ ಮಹಿಳೆ ತೆನೆ ಹೊತ್ತಿಲ್ಲ, ಕುಟುಂಬದ ಹೊರೆ ಹೊತ್ತಿದ್ದಾಳೆ. ಅವರು ಅಧಿಕಾರ ಹಿಡಿಯಲು ಇತ್ತ ಬಿಜೆಪಿ ಅತ್ತ ಕಾಂಗ್ರೆಸ್ ಎಂದು ಅಲೆಯುತ್ತಿದ್ದಾರೆ. ಜೆಡಿಎಸ್‌ಗೆ ಮತ ಹೋದರೆ ಬಿಜೆಪಿಗೆ ಹೋದಂತೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ, ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಮಾಜಿ ಸದಸ್ಯರಾದ ನಾಗರತ್ನ ರಾಜಣ್ಣ, ಮಂಜುಳಾ ಆದಿ ನಾರಾಯಣ ರೆಡ್ಡಿ, ಜಿಲ್ಲಾ ಕಾಂಗ್ರೆಸ… ಅಧ್ಯಕ್ಷ ಚಂದ್ರಶೇಖರ್ ಗೌಡ, ಡಿ.ಬಿ.ಆಶಾ, ಜಯಲಕ್ಷ್ಮಿ, ಚಿಕ್ಕಮ್ಮಣ್ಣಿ. ಕೆಪಿಸಿಸಿ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಹಕಾರ ಮಹಾ ಮಂಡಲದ ಮಾಜಿ ಅಧ್ಯಕ್ಷ ಎನ…. ಗಂಗಣ್ಣ, ಪುರಸಭೆ ಮಾಜಿ ಅ
ಧ್ಯಕ್ಷ ಎಂ ಕೆ. ನಂಜುಂಡಯ್ಯ, ಬ್ಲಾಕ… ಕಾಂಗ್ರೆಸ… ಅಧ್ಯಕ್ಷರಾದ ಗೋಪಾಲಯ್ಯ, ಆದಿ ನಾರಾಯಣ ರೆಡ್ಡಿ, ಡಿಸಿಸಿ ಬ್ಯಾಂಕ… ಉಪಾಧ್ಯಕ್ಷ ಜಿ.ಜೆ ರಾಜಣ್ಣ, ನಿರ್ದೇಶಕ ಬಿ. ನಾಗೇಶ… ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಮರ್ಣಮ್ಮ, ಕಾರ್ಯದರ್ಶಿ ಅನಸೂಯಮ್ಮ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮ್ಮ, ಪ್ರಮೀಳಮ್ಮ ಇತರರಿದ್ದರು
ಇದು ನನ್ನ ಕೊನೆಯ ಚುನಾವಣೆ
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಲಾಭವನ್ನು ಮನೆಗೆ ಮುಟ್ಟಿಸಿದ್ದೇನೆ. ಕ್ಷೇತ್ರದಲ್ಲಿ 16,400 ಮನೆಗಳ ನಿರ್ಮಾಣ ಮಾಡುವ ಮೂಲಕ ಗುಡಿಸಲು ರಹಿತ ತಾಲೂಕು ಮಾಡಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿದ್ದೇನೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸಿದ್ದು, ನಾನು ಕಂದಾಯ ಜಿಲ್ಲೆಯನ್ನಾಗಿಸಲು ಏನೆಲ್ಲ ಸವಲತ್ತುಗಳು ಬೇಕೋ ಅದೆಲ್ಲವನ್ನು ಕ್ಷೇತ್ರಕ್ಕೆ ಒದಗಿಸಿದ್ದೇನೆ ಎಂದರಲ್ಲದೆ, ಇದು ನನ್ನ ಕೊನೆಯ ಚುನಾವಣೆ ಮತ್ತೆ ಸ್ಪರ್ಧಿಸುವುದಿಲ್ಲ. ಆದರೆ ಜೀವನದ ಕೊನೆಯವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.