ಬಗೆಹರಿಯದ ಮರಿಯಮ್ಮನಹಳ್ಳಿ ಬೆಂಜ್ ಕಾರು ಅಪಘಾತ ಪ್ರಕರಣ| ಮೃತ ಯುವಕನ ಕುಟುಂಬಕ್ಕೆ 50 ಸಾವಿರ ಪರಿಹಾರ ಕೊಟ್ಟ ಕಾಂಗ್ರೆಸ್ ಶಾಸಕ| ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆಂದೆ ಭೀಮಾ ನಾಯ್ಕ್| ಚಿಕಿತ್ಸೆಗೆ ಬಂದಿದ್ದು ಕೇವಲ ನಾಲ್ಕು ಜನ ಎಂದ ವೈದ್ಯಾಧಿಕಾರಿ| FIRನಲ್ಲಿ ಬೆಂಜ್ ಕಾರು ಬದಲು ಆಡಿ ಕಾರು ಎಂದು ಬರೆದಿದ್ದು ಸಣ್ಣ ತಪ್ಪು ಎಂದ ಯತ್ನಾಳ್|
ಹೊಸಪೇಟೆ(ಫೆ.14): ಕಾಂಗ್ರೆಸ್ ನಾಯಕ ಭೀಮಾ ನಾಯ್ಕ್ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿ ಬೆಂಜ್ ಕಾರು ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಭೀಮಾ ನಾಯ್ಕ್, ಕಾರಿನಲ್ಲಿ ಅಶೋಕ್ ಪುತ್ರ ಇದ್ದರೋ ಇಲ್ಲವೋ ಗೊತ್ತಿಲ್ಲ .ಆದರೆ ಮೃತ ಯುವಕನ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆಂದು ಹೇಳಿದರು.
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ವೈದ್ಯಾಧಿಕಾರಿ , ಚಿಕಿತ್ಸೆಗೆ ಬಂದಿದ್ದು ಕೇವಲ ನಾಲ್ಕು ಜನ ಎಂದು ಸ್ಪಷ್ಟಪಡಿಸಿದ್ದಾರೆ. ರಾಕೇಶ್, ಶಿವಕುಮಾರ್, ರಾಹುಲ್ ಹಾಗೂ ಸಚಿನ್ ಮಾತ್ರ ಚಿಕಿತ್ಸೆಗೆ ಬಂದಿದ್ದು, ಸಚಿನ್ ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದಾಗಿ ಅವರು ತಿಳಿಸಿದ್ದಾರೆ.
ಅದರಂತೆ ಮರಿಯಮ್ಮನಹಳ್ಳಿ ಬೆಂಜ್ ಕಾರು ಅಪಘಾತದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, FIRನಲ್ಲಿ ಬೆಂಜ್ ಕಾರು ಬದಲು ಆಡಿ ಕಾರು ಎಂದು ಬರೆದಿದ್ದರ ಕುರಿತು ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸಣ್ಣ ತಪ್ಪಿನಿಂದ ಬೆಂಜ್ ಕಾರು ಬದಲು ಆಡಿ ಕಾರು ಎಂದಾಗಿದ್ದು, ಇದನ್ನು ಅನಗತ್ಯವಾಗಿ ವಿವಾದ ಮಾಡುವುದು ಸಲ್ಲ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಕಾರು ಅಪಘಾತ ಪ್ರಕರಣ ಕುರಿತು ಇದುವರೆಗೂ ಯಾವುದೇ ಸ್ಪಷ್ಟ ಚಿತ್ರಣ ದೊರೆಯದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಕುರಿತು ನಿಮ್ಮ ಸುವರ್ಣನ್ಯೂಸ್’ನಲ್ಲಿ ಭಿತ್ತರವಾದ ಸುದ್ದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸಪೇಟೆ ಬೆಂಜ್ ಕಾರು ಅಪಘಾತ: ಯಾರೆಲ್ಲಾ ಏನೆಲ್ಲಾ ಅಂದ್ರು ಗೊತ್ತಾ?