'ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರು'

By Kannadaprabha News  |  First Published Nov 9, 2020, 3:53 PM IST

ದಕ್ಷಿಣ ಕನ್ನಡದಲ್ಲಿ ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರಿಡಲು ಆಗ್ರಹಿಸಲಾಗಿದೆ. 


ಮೂಡುಬಿದಿರೆ (ನ.09): ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ದೂರದರ್ಶಿತ್ವದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಎನ್‌ಐಟಿಕೆ, ವಿಮಾನ ನಿಲ್ದಾಣ ಸಹಿತ ಅಭಿವೃದ್ಧಿಗೆ ಪೂರಕವಾದ ಕೊಡುಗೆಗಳು ಸಂದಿವೆ. ಅಂತಹ ಶ್ರೇಷ್ಠ ರಾಜಕಾರಣಿಯ ಹೆಸರು ಅಥವಾ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕೆಂಬುದು ಜಿಲ್ಲೆಯ ಜನತೆಯ ಕನಸಾಗಿತ್ತು. 

ಆದರೆ ಅದಾನಿ ಕಂಪನಿಯ ಹೆಸರಲ್ಲಿ ಬಜ್ಪೆ ವಿಮಾನ ನಿಲ್ದಾಣ ಮರುನಾಮಕರಣಗೊಂಡಿರುವುದು ದುರದೃಷ್ಟಕರ. ದ.ಕ ಜಿಲ್ಲೆಗೆ ಅದಾನಿ ಕೊಡುಗೆ ಶೂನ್ಯ. ಅದಾನಿ ನಾಮಕರಣವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಒಂದುವಾರಗಳ ಕಾಲ ವಿಮಾನ ನಿಲ್ದಾಣದ ಕೆಂಜಾರು ಪರಿಸರದಲ್ಲಿ ಪ್ರತಿಭಟನೆ, ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಹೇಳಿದರು.

Latest Videos

undefined

ಘೊಷಣೆಗೂ ಮುನ್ನವೇ ಮಸ್ಕಿ ಉಪಕದನ ಕಾವು: ಕಾಂಗ್ರೆಸ್‌-ಬಿಜೆಪಿಯಿಂದ ಭರ್ಜರಿ ತಯಾರಿ..! ..

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಲೆಮಾರಿಗೆ ಶ್ರೀನಿವಾಸ ಮಲ್ಯರ ಕೊಡುಗೆಗಳು ಸದಾ ನೆನಪಲ್ಲಿ ಉಳಿಯಲು ಅವರ ಹೆಸರಿಡಬೇಕಾದ ಸ್ಥಳದಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರ ಹೆಸರಿಟ್ಟು ಕೇಂದ್ರ ಸರ್ಕಾರ ಜನತೆಗೆ ವಂಚಿಸಿದೆ ಎಂದವರು ಹೇಳಿದರು.

ಬ್ಯಾಂಕಿಂಗ್‌ ತವರೂರೆನಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಜಯ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕಿನ ಸ್ಥಾಪಕರು, ಸಾಧನೆಗಳ ಬದಲಾದ ವ್ಯವಸ್ಥೆಯಲ್ಲಿ ಮೂಲೆಗುಂಪಾಗಿದ್ದಾರೆ. ಜಿಲ್ಲೆಗೆ ಸಮಸ್ಯೆಯಾದಾಗ ಸರ್ವಪಕ್ಷ ನಿಯೋಗದ ಜತೆ ಕೇಂದ್ರದ ಪ್ರಮುಖರಿಗೆ ಮನವರಿಕೆ ಮಾಡಬೇಕಾದವರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದು ದುರದೃಷ್ಟಕರ ಎಂದವರು ಆರೋಪಿಸಿದರು.

click me!