ಬಿಜೆಪಿಗೆ ಒಲಿದ ಬಿಎಸ್‌ವೈ ತವರು ಕ್ಷೇತ್ರ : ಭರ್ಜರಿ ಗೆಲುವು

By Kannadaprabha News  |  First Published Nov 9, 2020, 3:39 PM IST

ಬಿಎಸ್‌ವೈ ತವರು ಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಭರ್ಜರಿ ಜಯ ಗಳಿಸಿದೆ. 


ಶಿವಮೊಗ್ಗ (ನ.09): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರ ಪುರಸಭೆ ಬಿಜೆಪಿ ತೆಕ್ಕೆಗೆ ಒಲಿದಿದೆ. 

12 ಮತ ಗಳಿಸಿದ ಲಕ್ಷ್ಮಿ ಮಹಾಲಿಂಗಪ್ಪ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.  ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ವಿರುದ್ಧವಾಗಿ 9 ಮತಗಳ ಚಲಾವಣೆಯಾಗಿದ್ದು, ಪುರಸಭೆ ಉಪಾಧ್ಯಕ್ಷರಾಗಿ ಬಿಜೆಪಿಯ ಮಹಮ್ಮದ್ ಸಾಧಿಕ್ ಗೆಲುವು ಸಾಧಿಸಿದ್ದಾರೆ.

Tap to resize

Latest Videos

ಘೊಷಣೆಗೂ ಮುನ್ನವೇ ಮಸ್ಕಿ ಉಪಕದನ ಕಾವು: ಕಾಂಗ್ರೆಸ್‌-ಬಿಜೆಪಿಯಿಂದ ಭರ್ಜರಿ ತಯಾರಿ..

ಅಧ್ಯಕ್ಷೆ ಉಪಾಧ್ಯಕ್ಷರು 12 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸಂಸದ ಬಿ ವೈ ರಾಘವೇಂದ್ರ ಅವರು ಪುರಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. 
 
ಒಟ್ಟು 11 ಜನರ ಸಂಖ್ಯಾಬಲ ಹೊಂದಿದ್ದ ಬಿಜೆಪಿಗೆ ಸಂಸದರ ಮತ ಚಲಾವಣೆಯಿಂದ 12 ಮತಗಳು ದೊರೆತಿದ್ದು, ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ನಡೆಸಿದ್ದಾರೆ.

click me!