ಭಾರತದ ರಾಷ್ಟ್ರಧ್ವಜವನ್ನು ಖಾದಿ ಬದಲು ಪಾಲಿಸ್ಟರ್ ಬಟ್ಟೆಯಿಂದಲೂ ತಯಾರಿಸಬಹುದು ಎಂದು ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರದ ನಡೆ ಸ್ವಾತಂತ್ರ್ಯ ಚಳುವಳಿಗೆ ಮಾಡಿದ ಅವಮಾನ. ಬಿಜೆಪಿ ಸರ್ಕಾರ ಮಾತನಾಡೋದು ಮಾತ್ರ ಸ್ವದೇಶಿ, ಕೆಲಸ ಅನುಷ್ಠಾನದಲ್ಲಿ ವಿದೇಶಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.
ಮಂಗಳೂರು (ಆ.10): ಭಾರತದ ರಾಷ್ಟ್ರಧ್ವಜವನ್ನು ಖಾದಿ ಬದಲು ಪಾಲಿಸ್ಟರ್ ಬಟ್ಟೆಯಿಂದಲೂ ತಯಾರಿಸಬಹುದು ಎಂದು ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರದ ನಡೆ ಸ್ವಾತಂತ್ರ್ಯ ಚಳುವಳಿಗೆ ಮಾಡಿದ ಅವಮಾನ. ಬಿಜೆಪಿ ಸರ್ಕಾರ ಮಾತನಾಡೋದು ಮಾತ್ರ ಸ್ವದೇಶಿ, ಕೆಲಸ ಅನುಷ್ಠಾನದಲ್ಲಿ ವಿದೇಶಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ಕೇವಲ ಬಟ್ಟೆ ಎಂದು ಪರಿಗಣಿಸಬಾರದು. ಖಾದಿ ಎನ್ನುವುದು ಭಾರತದ ತಾಯಿ ಬೇರು. ಖಾದಿ ನೇಯುವ ಚರಕವು ದೇಶಕ್ಕೆ ಮಾರಕವಾಗಿದ್ದ ರಾಜಾಡಳಿತವನ್ನು ಕಿತ್ತೆಸೆದ ಸಂಕೇತ, ಸ್ವಾತಂತ್ರ್ಯ ಹೋರಾಟಗಾರರ ಶ್ರಮದ ಸಂಕೇತ.
ಹಾಗಾಗಿ ದೇಶದಲ್ಲಿ ಯಾವ ಸರ್ಕಾರ ಬಂದರೂ ಖಾದಿಗೆ ವಿಶೇಷ ಗೌರವದ ಸ್ಥಾನ ನೀಡಲಾಗಿತ್ತು. 75ನೇ ಸ್ವಾತಂತ್ರ್ಯ ವರ್ಷಾಚರಣೆ ಸಂದರ್ಭ ಖಾದಿಗೆ ಹೆಚ್ಚು ಮಹತ್ವ ನೀಡಬೇಕಿತ್ತು. ಪ್ರತಿಯೊಬ್ಬರೂ ಖಾದಿ ತೊಡಬೇಕೆಂದು ಸಂದೇಶ ನೀಡಬೇಕಿತ್ತು. ಅದು ಬಿಟ್ಟು ರಾಷ್ಟ್ರಧ್ವಜದ ಪಾವಿತ್ರ್ಯತೆಗೆ ಧಕ್ಕೆ ತರುವುದು ಶೋಭೆಯಲ್ಲ ಎಂದು ಹೇಳಿದರು. ಚೀನಾ ಆಮದಿಗೂ ಅವಕಾಶ: ವಿದೇಶಗಳಿಂದ ಪಾಲಿಸ್ಟರ್ ಆಮದು ವಿರೋಧಿಸಿ ಸ್ವದೇಶಿ ಚಳವಳಿಯ ಮೂಲಕ ಮಹಾತ್ಮಾ ಗಾಂಧೀಜಿ ಅವರು ದೇಶದಲ್ಲಿ ಸ್ವಾಭಿಮಾನದ ಆಂದೋಲನ ಆರಂಭಿಸಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಪಾಲಿಸ್ಟರ್ ಬಟ್ಟೆಯನ್ನು ಚೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಲು ಅನುಮತಿ ನೀಡಿದೆ.
ಪ್ರವೀಣ್ ಹತ್ಯೆ ಕೇಸ್, ಪೊಲೀಸ್ರಿಗೆ ಪ್ರಮುಖ ಆರೋಪಿ ಸುಳಿವು, ಆಸ್ತಿ ಮುಟ್ಟುಗೋಲಿಗೆ ಸಜ್ಜು
ಒಂದು ಕಡೆ ಚೀನಾ ವಿರುದ್ಧ ಕಿಡಿಕಾರುತ್ತ ಚೀನಾ ಆ್ಯಪ್ ಬಂದ್ ಮಾಡ್ತೀರಿ, ಈಗ ಪಾಲಿಸ್ಟರ್ ಬಟ್ಟೆಆಮದಿಗೆ ಅನುಮತಿ ನೀಡ್ತೀರಿ. ಇದು ದೇಶಕ್ಕೆ ಮಾಡುವ ದೊಡ್ಡ ಅವಮಾನ ಎಂದು ಯು.ಟಿ. ಖಾದರ್ ಕಿಡಿಕಾರಿದರು. ಪಾಕಿಸ್ತಾನದ ಜತೆ ಕ್ರಿಕೆಟ್ ಆಡೋದು ತಪ್ಪು ಎಂದು ಹೇಳಿದವರು ಇದೀಗ ದುಬೈನಲ್ಲಿ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ. ಅವರ ದೇಶಪ್ರೇಮ ನಿಜವೇ ಆಗಿದ್ದಲ್ಲಿ ಆ ಪಂದ್ಯಾಟವನ್ನು ರದ್ದುಪಡಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮುಹಮ್ಮದ್ ಮೋನು, ಈಶ್ವರ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿಇದ್ದರು.
ಖಾದಿ ಧ್ವಜ ಬಳಸಲು ಆಗ್ರಹಿಸಿ ಮೆರವಣಿಗೆ: ಭಾರತದ ರಾಷ್ಟ್ರಧ್ವಜ ಖಾದಿ ಬಟ್ಟೆಯದ್ದೇ ಇರಲಿ. ಕೃತಕ ನೂಲಿನಿಂದ ತಯಾರಿಸಿದ ಧ್ವಜ ಬೇಡ ಎಂದು ಆಗ್ರಹಿಸಿ ಧ್ವಜ ಸತ್ಯಾಗ್ರಹ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಧ್ವಜ ಸತ್ಯಾಗ್ರಹ ನಡೆಯಿತು. ನಗರದ ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಅಲ್ಲಿಂದ ಮೆರವಣಿಗೆ ಹೊರಟು ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಸತ್ಯಾಗ್ರಹ ನಡೆಸಿದರು.ಉಳಿಸಿ ಉಳಿಸಿ ಖಾದಿ ಬಟ್ಟೆಯ ಧ್ವಜ ಉಳಿಸಿ ಎಂಬ ಘೋಷಣೆ ಕೂಗಿದರು.
ಪ್ರತಿಭಟನಾಕಾರರು ಮಾತನಾಡಿ, 1947 ರ ಜು.22 ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಗಿದೆ. ಈವರೆಗೂ ಇದು ಖಾದಿ, ರೇಷ್ಮೆ ಉಣ್ಣೆಯ ಬಾವುಟವಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆ ಮನೆಯ ಮೇಲೆ ತ್ರಿವರ್ಣಧ್ವಜ ಎಂಬ ಪರಿಕಲ್ಪನೆ ತಂದಿದೆ. ಇದರ ಆಶಯ ಒಳ್ಳೆಯದೇ ಆಗಿದೆ. ಆದರೆ, ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಕೃತಕ ನೂಲು-ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ್ದಾದರೂ ಆಗಬಹುದು ಎಂದು ಹೇಳಿರುವುದು ಅಪಾಯ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ: ನಳಿನ್ ಕುಮಾರ್ ಕಟೀಲ್ ಹೇಳಿದ್ದಿಷ್ಟು
ಖಾದಿ ನಮ್ಮ ಗ್ರಾಮೀಣ ಮಹಿಳೆಯರು ಚರಕಾದಲ್ಲಿ ನೂಲು ತೆಗೆದು, ನೇಕಾರರು ಕೈಮಗ್ಗದಲ್ಲಿ ತಯಾರಿಸಿದ ಬಟ್ಟೆಯಾಗಿದೆ. ಇದು ಶ್ರಮಜೀವಿಗಳನ್ನು ಪ್ರತಿನಿಧಿಸುತ್ತದೆ. ರಾಜ್ಯದ ಧಾರವಾಡ ಜಿಲ್ಲೆಯ ಬೆಂಗೇರಿ, ಗರಗಗಳಲ್ಲಿ ಧ್ವಜದ ಬಟ್ಟೆತಯಾರಿಸಿ ಕೊಡುತ್ತಿದ್ದರು. ಈಗ ಅವರ ಉದ್ಯೋಗ ಕಸಿದಂತಾಗುತ್ತದೆ. ಅವರ ಗೋದಾಮಿನಲ್ಲಿ ಲಕ್ಷಾಂತರ ರೂ. ಧ್ವಜದ ಬಟ್ಟೆಇದೆ. ಪಾಲಿಸ್ಟರ್ ಬಟ್ಟೆಅಗ್ಗವಾಗಿದೆ. ಆದರೆ, ಅದು ಟನ್‌ಗಟ್ಟಲೇ ಕಾರ್ಖಾನೆಯಲ್ಲಿ ತಯಾರಾಗುತ್ತದೆ. ಈ ತಿದ್ದುಪಡಿಯೊಂದಿಗೆ ಗಾಂಧೀಜಿ ಹಾಗೂ ತಲೆಮಾರಿನ ಹೋರಾಟ ಮರೆವೆಗೆ ಸರಿಯುತ್ತದೆ. ಖಾದಿ ಬಾವುಟ ಇರಲಿ. ಅದನ್ನೇ ಬಳಸಬೇಕು ಎಂದು ಆಗ್ರಹಿಸಿದರು.