ನಾಲ್ವರು ಬಿಜೆಪಿ ಬಂಡಾಯ ಅಭ್ಯರ್ಥಿಗಳ ಸೆಳೆಯಲು ಕೈ ಯತ್ನ

By Web DeskFirst Published Nov 16, 2019, 1:26 PM IST
Highlights

ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ವಿರುದ್ಧ ಬಂಡಾಯ ಸಾರಿ ಗೆದದಿರುವ ನಾಲ್ವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ ನಡೆಸಿದೆ.

ದಾವಣಗೆರೆ [ನ.16]:  ಮಹಾ ನಗರ ಪಾಲಿಕೆಯಲ್ಲಿ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ವಿರುದ್ಧ ಬಂಡಾಯ ಸಾರಿ ಗೆದ್ದಿರುವ ನಾಲ್ವರೂ ಅಭ್ಯರ್ಥಿಗಳನ್ನು ತನ್ನ ತೆಕ್ಕೆಗೆ ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. 

ಪಕ್ಷೇತರರಾಗಿ ಗೆಲುವು ಸಾಧಿಸಿರುವ ಮಾಜಿ ಮೇಯರ್ ಡಿ.ಎಸ್.ಉಮಾಪ್ರಕಾಶ್, ಸೌಮ್ಯ ನರೇಂದ್ರಕುಮಾರ, ಶಿವಪ್ರಕಾಶ, ಜಯಮ್ಮಗೆ  ಕಾಂಗ್ರೆಸ್ಸಿನ ಕೆಲ ಮುಖಂಡರು ಸಂಪರ್ಕಿಸಿದ್ದ ಲ್ಲದೇ, ಗೆದ್ದ ಅಭ್ಯರ್ಥಿಗಳ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರ ಮೂಲಕವೂ ತಮ್ಮ ಪಕ್ಷಕ್ಕೆ ಸೆಳೆಯಲು ಪ್ರಯತ್ನ ಮುಂದುವರಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್ ಪಕ್ಷೇತರರನ್ನು ಸೆಳೆಯಲು ಪ್ರಯತ್ನಿ ಸಿರುವಂತೆಯೇ ಬಿಜೆಪಿಯೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಜೊತೆಗೆ ತನ್ನದೇ ಪಕ್ಷ ದಿಂದ ಸಿಡಿದೆದ್ದು, ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದು ಬಂದವರನ್ನು ಮತ್ತೆ ಪಕ್ಷಕ್ಕೆ ಕರೆ ತರಲು ಪ್ರಯತ್ನ ನಡೆಸಿದೆ. ಕಾಂಗ್ರೆಸ್ ಪಕ್ಷವಂತೂ ಅಧಿಕಾರಕ್ಕೆ ಸನಿಹದಲ್ಲೇ ಇದ್ದು, ನಾಲ್ವರೂ ಬಿಜೆಪಿ ವಿರುದ್ಧ ಸಿಡಿದೆದ್ದು, ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದವರ ಮೇಲೆ ಕಣ್ಣಿಟ್ಟಿದೆ.

ಬಿಜೆಪಿ ಟಿಕೆಟ್ ವಂಚಿತರಾಗಿ, ಬಂಡಾಯವಾಗಿ ಗೆದ್ದು ಬಂದ ನೂತನ ಸದಸ್ಯರು, ಕುಟುಂಬದವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ಆಹ್ವಾನಿಸುತ್ತಿದ್ದು, ಈ  ಬಗ್ಗೆ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಮ್ಮ ವಾರ್ಡ್‌ನ ನಿಷ್ಟಾವಂತ ಕಾರ್ಯಕರ್ತರು, ಸ್ಥಳೀಯ ಜನರ ಅಭಿಪ್ರಾಯ ಪಡೆದು ಮುಂದಿನನಡೆ ನಿರ್ಧರಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ. 

click me!